ಚುನಾವಣಾ ರಂಗ-2018 ಇದ್ದವರ ಅಭಿವೃದ್ಧಿ: ಬರುವವರ ಭರವಸೆ

0
17
loading...

ಶಂಕರಲಿಂಗ ದೇಸಾಯಿ
ಬಾಗಲಕೋಟ: ಜಿಲ್ಲೆಯ ಏಳು ಮತಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಮುಧೋಳ ಕ್ಷೇತ್ರ ನಾಡಿಗೆ ಕವಿ ಚಕ್ರವರ್ತಿ ರನ್ನ ದೇಶದ ಸೈನಿಕ ಸೇವೆಯಲ್ಲಿ ಗುರುತಿಸಿಕೊಂಡ ಬೇಟೆ ನಾಯಿ, ಘೋರ್ಪಡೆ ಮಹಾರಾಜರಂತಹ ಕಾರ್ಯದಿಂದಾಗಿ ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದ ಪ್ರಸಿದ್ಧಿಯಾದ ಮುಧೋಳ ರನ್ನನ ಕಾಲದಲ್ಲಿ ಮುಧುವೊಳಲು ಎಂದು ಕರೆಯಲ್ಪಡುತ್ತಿತ್ತು.

ರಾಜಕೀಯಕ್ಕೂ ರಾಜ್ಯದಲ್ಲಿ ಮಾದರಿಯಾದ ಈ ಕ್ಷೇತ್ರ ಎಲ್ಲ ಜನಾಂಗದ ಶಾಂತಿ ತೋಟವಾಗಿದೆ. ಇಲ್ಲಿಯ ಜನ ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ ಕೆಟ್ಟವರು ಜಾತಿ ಆಧಾರಿತ ಪುನರ್ವಿಂಗಡಣೆಯಲ್ಲಿ 1978ರಲ್ಲಿ ಮೀಸಲು ಕ್ಷೇತ್ರವಾಗಿ ಮಾರ್ಪಾಡಾಗಿ ಐದು ಜಿಲ್ಲಾ ಪಂಚಾಯತಿ ಕ್ಷೇತ್ರ, 21 ತಾಲೂಕಾ ಪಂಚಾಯತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹಿಡಿತದಲ್ಲಿದ್ದು, ವಿಧಾನ ಸಭೆ ಕ್ಷೇತ್ರ ಮಾತ್ರ ಭಾರತೀಯ ಜನತಾ ಪಕ್ಷದ ಆಡಳಿತಕ್ಕೆ ಒಳಪಟ್ಟಿದೆ. ಇಲ್ಲಿಯ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಶಾಸಕರಾಗಿ ಸಚಿವರಾಗಿ ಹಿರಿಯ ರಾಜಕಾರಣಿಗಳಾಗಿದ್ದು, ಮೂಲತಃ ವಿಜಯಪುರದಲ್ಲಿ ಲೋಕೋಪಯೋಗಿ ಇಲಾಖೆಯ ನೌಕರರಾಗಿದ್ದಾಗ ಆಕಸ್ಮಿಕವಾಗಿ ಒಲಿದ ಬಂದ ರಾಜಕೀಯ ಇವರನ್ನು ಪೂರ್ಣ ಪ್ರಮಾಣದ ರಾಜಕಾರಣಿಯನ್ನಾಗಿ ಮಾಡಿತು. ಚುನಾವಣಾ ಸಮಯದಲ್ಲಿ ಕುಸ್ತಿ ಆಟದ ಪಟ್ಟುಗಳಂತೆ ಇವರದೇ ಆದ ಕೆಲವು ಪಟ್ಟುಗಳಿದ್ದು, ಚತುರ ರಾಜಕಾರಣಿಗಳಾಗಿದ್ದಾರೆ. ಕಾರ್ಜೋಳರ ಕೃಪೆಗೆ ಪಾತ್ರರಾದ ಅನೇಕ ಜನ ಐಎಎಸ್, ಕೆಎಎಸ್ ಅಧಿಕಾರಿಗಳು, ಅದರಲ್ಲೂ ಕೋಲಾರ, ಮೈಸೂರು, ಬೆಂಗಳೂರಿನಲ್ಲಿರುವ ಕುಲಬಾಂಧವರು ಇವರ ಚುನಾವಣೆಗೆ ಇಲ್ಲಿ ಬೀಡು ಬಿಟ್ಟು, ಹಗಲಿರುಳು ಶ್ರಮಿಸಿ ಇವರ ಗೆಲುವಿಗೆ ಕಾರಣರಾಗುತ್ತಿದ್ದಾರೆ. ಅಲ್ಲದೇ ಎಲ್ಲ ಸಮುದಾಯದ ಜನರೊಂದಿಗೆ ಆತ್ಮೀಯತೆ ಹೊಂದಿದ ಕಾರಜೋಳ ವಿಶೇಷವಾಗಿ ರೆಡ್ಡಿ ಜನಾಂಗದ ಕೃಪೆಗೆ ಪಾತ್ರರಾಗಿದ್ದು, ಈ ಕ್ಷೇತ್ರದಲ್ಲಿ ರೆಡ್ಡಿ ಜನಾಂಗ ನಿರ್ಣಾಯಕರಾಗಿದ್ದಾರೆ. ಒಂದೇ ಕೋಮಿನವರಾದ ಆರ್.ಬಿ.ತಿಮ್ಮಾಪೂರ ಹಾಗೂ ಗೋವಿಂದ ಕಾರಜೋಳ ಇಬ್ಬರು ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದವರು.

ಈ ಎಲ್ಲದರ ನಡುವೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸುಮಾರು ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ದುಡಿದ್ದರ ಫಲವಾಗಿ ಹಾಗೂ ಕಾಂಗ್ರೆಸ್ ನಾಯಕರ ಜೊತೆಯಿರುವ ಸ್ನೇಹದಿಂದಾಗಿ ಇಂದು ವಿಧಾನಸಭೆಯ ಟಿಕೆಟ್ ಪಡೆದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರಗಳಿರುವಂತೆ ಈ ಮತಕ್ಷೇತ್ರದಲ್ಲೂ ಜಾತಿ ಲೆಕ್ಕಾಚಾರ ಇದೆ. 1,91,919 ಪುರುಷ ಹಾಗೂ ಮಹಿಳಾ ಮತದಾರರನ್ನು ಹೊಂದಿದ ಈ ಕ್ಷೇತ್ರದಲ್ಲಿ ಲಿಂಗಾಯತರು 23 ಸಾವಿರ, ಎಸ್.ಸಿ./ಎಸ್.ಟಿ.31 ಸಾವಿರ, ರೆಡ್ಡಿ ಜನಾಂಗದ 25 ಸಾವಿರ, ಕುರುಬ 21 ಸಾವಿರ, ಹಾಲುಮತ 26 ಸಾವಿರ, ಅಲ್ಪಸಂಖ್ಯಾತರು 26 ಸಾವಿರ, ಇತರೆ 45 ಸಾವಿರ ಮತದಾರರನ್ನು ಹೊಂದಿದ್ದು, ಇದರಲ್ಲಿ ರಡ್ಡಿ ಸಮಾಜದವರ ಮತಗಳು ನಿರ್ಣಾಯಕವಾಗಿವೆ. ಅವರು ಯಾರ ಪರವಾಗಿ ನಿಲ್ಲುತ್ತಾರೆಯೋ ಅವರು ಅಧಿಕಾರ ಹಿಡಿಯುತ್ತಾರೆ. ಆದರೆ ಈ ಭಾರಿ ರೆಡ್ಡಿ ಸಮಾಜ ಹಾಗೂ ಇನ್ನೂಳಿದ ಸಮಾಜದ ಜನ ಬದಲಾವಣೆ ಬಯಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಯಾವುದೇ ಅಧಿಕಾರ ಇಲ್ಲದೇ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿರುವ ಸತೀಶ ಬಂಡಿವಡ್ಡರಗೆ ಆಶೀರ್ವದಿಸಬೇಕೋ ಅಥವಾ ರಾಜ್ಯದಲ್ಲಿ ಬಿಜೆಪಿ ಪಕ್ಷದ ಹಿರಿಯ ರಾಜಕಾರಣಿಯಾಗಿ ಸಚಿವರಾಗಿ ಅನೇಕ ಜನಪರ ಕಾರ್ಯ ಮಾಡಿ ಎಲ್ಲ ಸಮುದಾಯದೊಂದಿಗೆ ಗೌರವದಿಂದಿರುವ ಗೋವಿಂದ ಕಾರಜೋಳ ಅವರು ಗೆಲ್ಲುತ್ತಾರೋ ಕಾದು ನೋಡಬೇಕು.

loading...