ಜನರು ನೀಡಿರುವ ಮತಕ್ಕೆ ಋಣ ತೀರಿಸುವೆ: ಶಾಸಕ ಸುನೀಲ್

0
16
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಈ ಚುಣಾವಣೆಯಲ್ಲಿ ಕಾರ್ಯಕರ್ತರು ನನ್ನ ಮೇಲೆ ತೋರಿಸಿದ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಅದರಲ್ಲೂ ತರಣರು ನನ್ನ ಜೋತೆ ಹೆಜ್ಜೆಗೆ ಹೆಜ್ಜೆ ಹಾಕಿ ಬೆಳೆಸಿದ್ದಾರೆ ಅವರನ್ನು ನಾನು ಎಂದೂ ಮರೆಯಲ್ಲ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುನೀಲ್ ನಾಯ್ಕ ತಿಳಿಸಿದರು.
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸುನೀಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ನಾಗಯಕ್ಷೆಯಲ್ಲಿ ಮಂಗಳವಾರ ಭಟ್ಕಳ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಶಾಸಕರು ಮಾತನಾಡಿದರು. ಕಳೇದ ನಾಲ್ಕು ವರ್ಷದ ಹಿಂದೆ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆಯವರ ಮೂಲಕ ಬಿಜೆಪಿಗೆ ಸೇರ್ಪಡೆಯಾದೆ. ರಾಜಕೀಯ ಗುರುವಾಗಿ ನನ್ನ ಬೆನ್ನಿಗೆ ನಿಂತ ಅವರು ನನಗೆ ಪಕ್ಷದಲ್ಲಿ ಉನ್ನತ ಹುದ್ದೆ ಕೊಡಿಸಿದರು. ಅವಿರತ ಪ್ರಯತ್ನ ಮಾಡಿ ಟಿಕೇಟ್ ಕೊಡಿಸಿದರು. ಕೊನೆಗೆ ಒಬ್ಬ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಶಾಸಕನಾಗಿ ಮಾಡುವಲ್ಲಿ ಸಫಲರಾದರು. ಹಾಗಾಗಿ ನನ್ನ ಎಲ್ಲಾ ಯಶಸ್ಸನ್ನು ಅವರಿಗೆ ಸಮರ್ಪಿಸುವುದಾಗಿ ತಿಳಿಸಿದರು. ಶಾಸಕನಾಗಿ ಮೊದಲ ಬಾರಿ ಆಯ್ಕೆಯಾದ ನನ್ನ ಮುಂದೆ ಅನೇಕ ಸವಾಲುಗಳಿವೆ. ಜನರಿಗೆ ನೀಡಿರುವ ಅನೇಕ ಆಶ್ವಾಸನೆ ಈಡೇರಿಸಬೇಕಾಗಿದೆ. ಜನರು ನನ್ನ ಮೇಲೆ ಭರವಸೆ ಇಟ್ಟು ಹಾಕಿರುವ ಒಂದೊಂದು ಮತಕ್ಕೂ ಋಣ ತೀರಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ತಿಳಿಸಿದರು.

ಶಾಸಕರಿಗೆ ಬಿಜೆಪಿ ಮಂಡಳ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಬದಲ್ಲಿ ವಿವಿಧ ಸಮಾಜದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಹಾರ ಹಾಕಿ ಸನ್ಮಾನಿಸಿದರು. ಮಾಜಿ ಸಚಿವ ಶಿವಾನಂದ ನಾಯ್ಕ, ಜಿಲ್ಲಾಧ್ಯಕ್ಷ ಕೆಜೆನಾಯ್ಕ, ಭಟ್ಕಳ ವಿಧಾನ ಸಭಾ ಕ್ಷೇತ್ರ ಚುಣಾವಣಾ ಉಸ್ತುವಾರಿ ವಿನೋಧ ಪ್ರಭು, ಹೊನ್ನಾವರ ಬಿಜೆಪಿ ಘಟಕ ಅಧ್ಯಕ್ಷ ಸುಬ್ರಾಯ ನಾಯ್ಕ ಹಾಗೂ ಭಟ್ಕಳ ಬಿಜೆಪಿ ಘಟಕ ಅಧ್ಯಕ್ಷ ರಾಜೇಶನಾಯ್ಕ, ಕೃಷ್ಣ ನಾಯ್ಕ ಆಸರಕೇರಿ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.
ಬಿಜೆಪಿ ಪ್ರಮುಖರಾದ ಉಮೇಶ ನಾಯ್ಕ, ಸುಬ್ರಾಯ ನಾಯ್ಕ, ಮಂಜುನಾಥ ನಾಯ್ಕ ಕರಾವಳಿ, ಎಂ ಜೆ ನಾಯ್ಕ,ಈಶ್ವರ ನಾಯ್ಕ, ಶಿವಾನಿ ಶಾಂತರಾಮ, ನಾಗಮ್ಮಾ ಗೊಂಡ, ಸವಿತಾ ಗೊಂಡ ಸೇರಿದಂತೆ ತಾಪಂ ಸದಸ್ಯರು ಪುರಸಭಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

loading...