ಜನ-ಮನ ಗೆದ್ದ ರಾಜಗುರು ರಾಷ್ಟ್ರೀಯ ಸಂಗೀತೋತ್ಸವ

0
12
loading...

ಕನ್ನಡಮ್ಮ ಸುದ್ದಿ-ಶಿರಸಿ: ಇಲ್ಲಿನ ಕೃಷ್ಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್, ಭಾರತೀಯ ಸಂಗೀತ ಪರಿಷತ್, ಪದ್ಮಭೂಷಣ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ ಧಾರವಾಡ ಹಾಗೂ ಟಿ.ಎಸ್.ಎಸ್. ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ ಪದ್ಮಭೂಷಣ ಡಾ. ಬಸವರಾಜ ರಾಜಗುರು ರಾಷ್ಟ್ರೀಯ ಸಂಗೀತೋತ್ಸವ ಸಂಗೀತ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ನಗರದ ಸಾಮ್ರಾಟ್ ವಿನಾಯಕ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ `ಹೊಸಚಿಗುರ ಹಳೆಬೇರು’ ಸೇರಿದಂತೆ ಹಿರಿಯ ಕಲಾವಿದರು, ಯುವಕಲಾವಿದರೊಡನೆ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಶ್ರೋತೃಗಳ ಮನತಣಿಸುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ನಾಡಿನ ಹಿರಿಯ ಕಲಾವಿದರಾದ ಪಂ.ಸೋಮನಾಥ ಮಂಡೂರ, ವತ್ಸಲಾ ಮಾಪಾರಿ, ವಿಠಲ್‍ದಾಸ್ ಕರ್ಣೇಕರ್, ಅವರನ್ನು ಸನ್ಮಾನಿಸಲಾಯಿತು. ನಮನಾ, ಗಗನಾ ಹಾಗೂ ಹರ್ಷಿತ್ ರಾಗ ಬ್ರಂದಾವನೀ ಸಾರಂಗ ಹಾಗೂ ಯಮನ ರಾಗದಲ್ಲಿ ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು. ಅಮೃತ ಹಾಗೂ ಮೇದಿನಿ ಹಾರ್ಮೊನಿಯಂ ಹಾಗೂ ತಬಲಾ ಸಾಥ್ ನೀಡಿದರು. ಕಾರ್ಯಕ್ರಮದ ಸಂಘಟಕ ಡಾ. ಗಂಗೂಬಾಯಿ ಹಾನಗಲ್ ಪ್ರಶಸ್ತಿ ಪುರಸೃತ ಕೃಷ್ಣಮೂರ್ತಿ ಭಟ್ಟ ರಾಗ ಮದುವಂತಿ ರಾಗವನ್ನು ಪ್ರಸ್ತುತ ಪಡಿಸಿದರು. ವಿದೂಷಿ ವತ್ಸಲಾ ಮಾಪಾರಿ ಅವರು ರಾಗ ಹಾಡಿದರು. ಪಂ.ಸೋಮನಾಥ ಮರಡೂರ ಅವರು ರಾಗ ಸರಸ್ವತಿ ಹಾಗೂ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ವಿಠಲದಾಸ ಕಾಣೇಕರ, ಗುರುರಾಜ ಹೆಗಡೆ ತಬಲಾದಲ್ಲಿ, ವಿದ್ವಾನ್ ಪ್ರಕಾಶ ಹೆಗಡೆ, ಯಡಳ್ಳಿ, ವಿದ್ವಾನ ಗೌರೀಶ ಯಾಜಿ ಕೂಜಳ್ಳಿ, ಇವರು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಎಂ.ಎಂ.ಕಾಲೇಜಿನ ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿ ಶುೃತಿ ಭಟ್ಟ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಂಗೀತ ವಿಷಯದಲ್ಲಿ ಅತಿ ಹೆಚ್ಚು ಅಂಕಪಡೆದು ಡಾ.ಬಸವರಾಜ ರಾಜಗುರು ಸುವರ್ಣ ಪದಕ ಪಡೆದುದಕ್ಕಾಗಿ ಅಭಿನಂದಿಸಲಾಯಿತು.

ಟಿ.ಎಸ್.ಎಸ್. ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀನಿವಾಸ ಹೆಬ್ಬಾರ್, ವೈದ್ಯೆ ಸುಮನ್ ಹೆಗಡೆ, ಭಾರತಿದೇವಿ ರಾಜಗುರು, ನಿಜಗುಣ ರಾಜಗುರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖ್ಯಾತ ಕಲಾವಿದರಾದ ಆರ್.ವಿ.ಹೆಗಡೆ ಹಳ್ಳದಕೈ, ಶೈಲಜಾ ಮಂಗಳೂರು, ಶ್ರೀಪಾದ ಹೆಗಡೆ, ವಿಘ್ನೇಶ್ವರ ಭಟ್ಟ ಇನ್ನೂ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಭಟ್ಟ ಸ್ವಾಗತಿಸಿದರು. ಅರುಣಕುಮಾರ ಭಟ್ಟ ನಿರ್ವಹಿಸಿದರು. ಆರ್.ಎನ್.ಭಟ್ಟ ವಂದಿಸಿದರು.

loading...