ಜಿಲ್ಲೆಯಲ್ಲಿ ಶೇಕಡಾ 76.18% ಮತದಾನ.

0
12
loading...

ಜಿಲ್ಲೆಯಲ್ಲಿ ಶೇಕಡಾ 76.18% ಮತದಾನ.

ಕನ್ನಡಮ್ಮ ಸುದ್ದಿ‌-ಬೆಳಗಾವಿ : ಜಿಲ್ಲೆಯ 18 ವಿಧಾನ ಸಭಾ ಕ್ಷೇತ್ರಗಳಲ್ಲಿ ಶನಿವಾರ ನಡೆದ ಮತದಾನ ಪ್ರಕ್ರೀಯೆಯಲ್ಲಿ ಜಿಲ್ಲೆಯ 18 ಕ್ಷೇತ್ರಗಳಲ್ಲಿನ ಕೆಲವೊಂದು ಮತಗಟ್ಟೆಗಳಲ್ಲಿ ಯಂತ್ರಗಳ ತಾಂತ್ರಿಕ ಸಮಸ್ಯೆಗಳನ್ನು ಹೊರತು ಪಡೆಸಿ ಮತದಾನ ಪ್ರಕ್ರೀಯೆ ಶಾಂತ ರೀತಿಯಿಂದ ಜರುಗಿ ಶೇ.76.18 ರಷ್ಟು ಮತದಾನವಾಗಿದೆ.

ನಿಪ್ಪಾಣಿ : 80.78%, ಚಿಕ್ಕೋಡಿ -ಸದಲಗಾ : 84.65%, ಅಥಣಿ   : 80%, ಕಾಗವಾಡ:  79.98%, ಕುಡಚಿ: 75.86%, ರಾಯಬಾಗ: 77.48% ಗೋಕಾಕ : 71.79%, ಬೆಳಗಾವಿ ಗ್ರಾಮೀಣ: 77.52%, ಬೆಳಗಾವಿ ಉತ್ತರ 63.18%, ಬೆಳಗಾವಿ ದಕ್ಷಿಣ: 61.57%, ಬೈಲಹೊಂಗಲ: 18.42%, ಖಾನಾಪುರ : 71.80%, ಕಿತ್ತೂರ : 78.82%,  ಬೈಲಹೊಂಗಲ 77.92% ಯಮಕನಮರಡಿ : 79.79%, ರಾಮದುರ್ಗ : 75.30%, ಹುಕ್ಕೇರಿ : 78.42%, ಅರಬಾವಿ 76.29%, ಸವದತ್ತಿ : 80.05% ಬೆಳಗಾವಿ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನ 6 ರವರೆಗೆ ಜಿಲ್ಲೆಯಲ್ಲಿ ಒಟ್ಟು 76.18% ಮತದಾನವಾಗಿದೆ.

ಜಿಲ್ಲೆಯಲ್ಲಿರುವ ಒಟ್ಟು 4416 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ

ವಯೋವೃದ್ಧರು, ಮಹಿಳೆಯರು, ಪುರುಷರು ಹಾಗೂ ಯುವಕರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

18 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 203 ಅಭ್ಯರ್ಥಿಗಳ ಹಣೆಬರಹ 4416 ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿವೆ. ಮೇ 15ರಂದು ನಗರದ ಆರ್‍ಪಿಡಿ ಕಾಲೇಜಿನಲ್ಲಿ ನಡೆಯಲ್ಲಿರುವ ಮತ ಏಣಿಕೆಯಲ್ಲಿ ಅಭ್ಯರ್ಥಿಗಳ ಹಣೆಬರಹ ಪ್ರಕಟವಾಗಲ್ಲಿದೆ.

 

==============

ಮತದಾನ ಪ್ರಮಾಣ:

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡ ಬಳಿಕ ಮೊದಲ ಎರಡು ತಾಸಿನಲ್ಲಿ ಅಂದರೆ 9 ಗಂಟೆಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಶೇ. 8ರಷ್ಟು ಮತದಾನವಾಗಿತ್ತು.

ಮತದಾನ ಅವಧಿ ಇನ್ನೂ ಒಂದು ಗಂಟೆ ಬಾಕಿ ಇರುವಾಗ ಅಂದರೆ ಸಂಜೆ 5 ಗಂಟೆಯವರೆಗೆ ಚಿಕ್ಕೋಡಿ-ಸದಲಗಾ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.80.07 ವರದಿಯಾಗಿತ್ತು. ಅದೇ ರೀತಿ ಬೆಳಗಾವಿ(ದಕ್ಷಿಣ) ಮತಕ್ಷೇತ್ರದಲ್ಲಿ ಅತೀ ಕಡಿಮೆ ಶೇ.57.48 ರಷ್ಟು ಮತದಾನ ದಾಖಲಾಗಿತ್ತು

loading...