ಜಿಲ್ಲೆಯಲ್ಲಿ ಶೇ.74.80 ರಷ್ಟು ಮತದಾನ : ನಾಳೆ ಅಭ್ಯರ್ಥಿಗಳ ಹಣೆಬರಹ

0
12
loading...

ಗದಗ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಶಾಂತಿಯುತ ಮತದಾನ ಜರುಗಿತು. ಜಿಲ್ಲೆಯಲ್ಲಿ ಒಟ್ಟು 8,43,370 ಮತದಾರರಿದ್ದು 4,25,585 ಪುರುಷ ಹಾಗೂ 4,17,735 ಮಹಿಳಾ ಮತ್ತು 50 ಇತರೆ ಮತದಾರರು ಇದ್ದಾರೆ. ಆ ಪೈಕಿ 3,24,759 (ಶೇ.76.30) ಪುರುಷ ಹಾಗೂ 3,06,111 (ಶೇ.73.27) ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 6,30,874 (ಶೇ.74.80) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಎಲ್ಲೆಲ್ಲಿ ಎಷ್ಟೇಷ್ಟು ? : ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,12,130 ಮತದಾರರಿದ್ದು 1,07,483 ಪುರುಷ ಹಾಗೂ 1,04,639 ಮಹಿಳಾ ಮತ್ತು 8 ಇತರೆ ಮತದಾರರು ಇದ್ದಾರೆ. ಆ ಪೈಕಿ 82,612 (ಶೇ.76.86) ಪುರುಷ ಹಾಗೂ 76,799 (ಶೇ.73.39) ಮಹಿಳಾ ಮತದಾರರು ಹಾಗೂ ಇತರೆ 3 ಮತದಾರರು ಸೇರಿದಂತೆ ಒಟ್ಟಾರೆ 1,59,414 (ಶೇ.75.15) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,19,426 ಮತದಾರರಿದ್ದು 1,09,789 ಪುರುಷ ಹಾಗೂ 1,09,614 ಮಹಿಳಾ ಮತ್ತು 23 ಇತರೆ ಮತದಾರರು ಇದ್ದಾರೆ. ಆ ಪೈಕಿ 81,120 (ಶೇ.73.88) ಪುರುಷ ಹಾಗೂ 77,554 (ಶೇ.70.75) ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 1,58,674 (ಶೇ.72.31) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,24,632 ಮತದಾರರಿದ್ದು 1,13,117 ಪುರುಷ ಹಾಗೂ 1,11,501 ಮಹಿಳಾ ಮತ್ತು 14 ಇತರೆ ಮತದಾರರು ಇದ್ದಾರೆ. ಆ ಪೈಕಿ 86,513 (ಶೇ.76.48) ಪುರುಷ ಹಾಗೂ 82,780 (ಶೇ.74.24) ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 1,69,293 (ಶೇ.75.36) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 1,87,182 ಮತದಾರರಿದ್ದು 95,196 ಪುರುಷ ಹಾಗೂ 91,981 ಮಹಿಳಾ ಮತ್ತು 5 ಇತರೆ ಮತದಾರರು ಇದ್ದಾರೆ. ಆ ಪೈಕಿ 74,514 (ಶೇ.78.27) ಪುರುಷ ಹಾಗೂ 68,978 (ಶೇ.74.99) ಮಹಿಳಾ ಹಾಗೂ ಇತರೆ ಒರ್ವ ಮತದಾರರು ಸೇರಿದಂತೆ ಒಟ್ಟಾರೆ 1,43,493 (ಶೇ.76.66) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಅಂಚೆ ಮತ ಪತ್ರ ಸಲ್ಲಿಕೆಯ ದಿನ : ನಮೂನೆ-12 ರಲ್ಲಿ ಅರ್ಜಿ ಸಲ್ಲಿಸಿ ಸೌಕರ್ಯ ಕೇಂದ್ರದಲ್ಲಿ ಮತದಾನ ಮಾಡದಿರುವ ಅಧಿಕಾರಿ ಸಿಬ್ಬಂದಿಗಳು ಅಂಚೆ ಮತ ಪತ್ರಗಳನ್ನು ಅಂಚೆ ಮುಖಾಂತರ ಅವರು ನೀಡಿರುವ ವಿಳಾಸಕ್ಕೆ ರವಾನಿಸಲಾಗಿದೆ.
ಅಂಚೆ ಮೂಲಕ ಸ್ವೀಕೃತಿಯಾಗಿರುವ ಮತ ಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ತಲುಪಿಸಲು ಮೇ. 14 ಕೊನೆಯ ದಿನವಾಗಿದೆ. ನಮೂನೆ 13ಎ ದಲ್ಲಿ ಗೆಜೆಟೆಡ್ ಅಧಿಕಾರಿಗಳ ದೃಡೀಕರಣವಿಲ್ಲದಿದ್ದಲ್ಲಿ ಮತಪತ್ರ ತಿರಸ್ಕಾರಗೊಳ್ಳ್ಳುತ್ತವೆÉ. ಕಡ್ಡಾಯವಾಗಿ ನಮೂನೆ 13ಎ ದೃಡೀಕರಣ ಮಾಡಿಸಬೇಕು. ಈ ವರೆಗೆ ಈ ಸೌಲಭ್ಯ ಬಳಸಿಕೊಳ್ಳದವರು ಮತಪತ್ರಗಳನ್ನು ಚುನಾವಣಾಧಿಕಾರಿಗಳ, ಜಿಲ್ಲಾಧಿಕಾರಿಗಳ ಕಾರ್ಯಾಲಯಗಳಲ್ಲಿ ಇಟ್ಟಿರುವ ಬ್ಯಾಲೆಟ್ ಬಾಕ್ಸಗಳಲ್ಲಿ ತಪ್ಪದೇ ಹಾಕಲು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

loading...