ಜಿಲ್ಲೆಯ ಮೂರು ಮಹಿಳಾ ಮಣಿಗಳು ರಾಜ್ಯ ಶಕ್ತಿ ಕೇಂದ್ರ ಪ್ರವೇಶ

0
47
loading...

ಮೂವರು ಮಹಿಳೆಯರನ್ನು ವಿಧಾನಸಭೆಗೆ ಕಳುಹಿಸಿದ ಏಕೈಕ ಜಿಲ್ಲೆÀ ಬೆಳಗಾವಿ
ಸುಧಾ ಪಾಟೀಲ
ಬೆಳಗಾವಿ: ಜಿಲ್ಲೆಯ ಮತದಾರರು ಈ ಬಾರಿ ಮೂರು ಜನ ಮಹಿಳೆಯರನ್ನು ಗೆಲ್ಲಿಸಿ ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ರಾಜ್ಯದಲೇ ಬೆಳಗಾವಿ ಜಿಲ್ಲೆ ಹೆಚ್ಚು ಮಹಿಳೆಯರನ್ನು ಆಯ್ಕೆ ಮಾಡಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಳಗಾವಿ ಜಿಲ್ಲೆಯ ಜನರು ಮಹಿಳಾ ಮಣಿಗಳನ್ನು ವಿಧಾಸಭೆಗೆ ಕಳಿಸುವ ಮೂಲಕ ಆಕರ್ಷಣಿಯ ಜಿಲ್ಲೆಯ ಆಗಿದೆ. ಇದೇ ಮೊದಲ ಬಾರಿಗೆ ವಿಧಾನಸಭೆಗೆ ಜಿಲ್ಲೆಯಿಂದ ಮೂರು ಜನ ಮಹಿಳೆಯರನ್ನು ಆಯ್ಕೆ ಮಾಡಿದ ಏಕೈಕ ಜಿಲ್ಲೆಯಾಗಿದೆ.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್, ನಿಪ್ಪಾಣಿನಿಂದ ಶಶಿಕಲಾ ಜೋಲೆ, ಖಾನಾಪೂರದಿಂದ ಅಂಜಲಿ ನಿಂಬಾಳಕರ್ ಇವರನ್ನು ಜಿಲ್ಲೆಯ ಮತದಾರ ಪ್ರಭುಗಳು ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮೂರು ಮಹಿಳೆಯರನ್ನು ಗೆಲ್ಲಿಸಿ ಕಳಿಸಿದ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಲಕ್ಷ ಮತ ಪಡೆದ ಲಕ್ಷ್ಮೀ:-
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಈ ಬಾರಿ ಗ್ರಾಮೀಣ ಕ್ಷೇತ್ರದ ಮತದಾರರು ಒಂದು ಲಕ್ಷಕ್ಕೂ ಹೆಚ್ಚು ವೋಟು ನೀಡುವ ಮೂಲಕ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ.
ಲಕ್ಷ್ಮೀ ಅವರಿಗೆ ಈ ಭಾಗದ ಎಲ್ಲ ಸಮುದಾಯದ ಮತದಾರರು ಕೈ ಹಿಡಿದಿದ್ದು, ಎಂಇಎಸ್‍ನ ಮತದಾರ ಈ ಬಾರಿ ಕೈ ಪರ ಬ್ಯಾಟ್ ಮಾಡಿದ್ದು ವಿಶೇಷ.
ಕಾಂಗ್ರೆಸ್‍ನ ಲಕ್ಷ್ಮಿ ಹೆಬ್ಬಾಳಕರ ಅವರಿಗೆ 1,02040 ಮತ ನೀಡಿ 51,724ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಬಿಜೆಪಿ ಸಂಜಯ ಪಾಟೀಲ ಅವರಿಗೆ ಕೆವಲ 50,316 ಮತ ನೀಡಿ ಸೋಲು ಅನುಭವಿಸುವಂತೆ ಮಾಡಿದ್ದಾರೆ. ಕಳೆದ ಸೋಲುಗಳಿಂದ ದಿಕ್ಕುಗೇಡದೆ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು.

ಎರಡನೇ ಬಾರಿಯೂ ಗೆದ್ದ ಶಶಿಕಲಾ ಜೊಲ್ಲೆ:-
ನಿಪ್ಪಾಣಿ ಮತಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು, ಅವರು 87006 ಮತಪಡೆದು ಮರು ಆಯ್ಕೆಯಾದರೆ, ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ್ ಪಾಟೀಲಗೆ 78500 ಮತ ಪಡೆದು 8506 ಮತಗಳಿಂದ ಸೋತ್ತಿದ್ದಾರೆ.

ಈ ಬಾರಿ ಅಂಜಲಿ ನಿಬಾಳ್ಳಕರ್ ಕೈ ಹಿಡಿದ ಮತದಾರ:-
ಖಾನಾಪೂರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಳಕರ್ ಅವರು ಕಳೆದ ಬಾರಿ ಸೋತರು ಈ ಬಾರಿ ಖಾನಾಪೂರ ಮತದಾರ 36.649 ಮತಗಳ ಪೈಕಿ, 5.133 ಹೆಚ್ಚು ಮತಗಳಿಸಿ ಗೆಲವು ಸಾಧಿಸಿದ್ದಾರೆ. ಎಂಇಎಸ್ ಬೆಂಬಲಿತ ಶಾಸಕ ಅರವಿಂದ ಪಾಟೀಲ ಪರಜಯ ಅನುಭವಿಸಿದ್ದಾರೆ.

loading...