ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಿರುದ್ಧ ಪ್ರತಿಭಟನೆ

0
18
loading...

ರಬಕವಿ-ಬನಹಟ್ಟಿ: ರಾಜ್ಯದ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಸಂದರ್ಭ ಇತ್ತ ತೇರದಾಳ ಕ್ಷೇತ್ರದ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ವಿಜಯೋತ್ಸವ ಆಚರಣೆ ಸಂದರ್ಭ ಧ್ವನಿವರ್ಧಕ ಹಾಗು ಟ್ರ್ಯಾಕ್ಟರ್‍ಗಳ ಮೂಲಕ ಮೆರವಣಿಗೆ ನಡೆಸುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ ಪೊಲೀಸರ ಕ್ರಮವನ್ನು ವಿರೋಧಿಸಿ ಠಾಣೆ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ನಡೆಯಿತು.
ಇದೇ ಸಂದರ್ಭ ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ಶಂಕರ ಸೊರಗಾಂವಿ ಮಾತನಾಡಿ, ಈಚೆಗೆ ಬಿಜೆಪಿ ವಿಜಯೋತ್ಸವ ಸಂದರ್ಭ ಯಾವದೇ ನೋಟಿಸ್ ನೀಡದ ಪೊಲೀಸರು ಇಂದು ಧ್ವನಿವರ್ಧಕ ಹಾಗು ಟ್ರ್ಯಾಕ್ಟರ್‍ಗಳ ಮಾಲಿಕರ ಮೇಲೆ ಏಕೆ ನೋಟಿಸ್ ಜಾರಿ ಮಾಡಿದ್ದೀರಿ? ಎಂದು ಪ್ರಶ್ನಿಸಿ ಪ್ರತಿಭಟನೆಗಿಳಿದರು. ಹಿರಿಯ ಅಧಿಕಾರಿಗಳು ಬರುವವರೆಗೂ ಪಟ್ಟು ಸಡಿಲಿಸದ ಕಾರ್ಯಕರ್ತರು ನಂತರ ವೃತ್ತ ನಿರೀಕ್ಷಕ ಬಿ.ಎಸ್. ಮಂಟೂರ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ. ಸದ್ಯ 144 ಕಲಂ ಜಾರಿಯಲ್ಲಿದ್ದು, ಯಾವದೇ ಧ್ವನಿವರ್ಧಕ, ಮೆರವಣಿಗೆ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇವೆಲ್ಲವನ್ನೂ ಅವಲೋಕಿಸಿದ ನೂರಾರು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಅನಧಿಕೃತವಾಗಿ ಬೈಕ್ ರ್ಯಾಲಿಯನ್ನು ರಬಕವಿಯ ಹೊಸ ಬಸ್ ನಿಲ್ದಾಣದಿಂದ ಬನಹಟ್ಟಿಯ ನೂಲಿನ ಗಿರಣಿಯವರೆಗೆ ಮೆರವಣಿಗೆ ನಡೆಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್‍ನ ಸಂಗಪ್ಪ ಕುಂದಗೋಳ, ರವಿ ಬಾಡಗಿ, ಚಿದಾನಂದ ಮಟ್ಟಿಕಲ್ಲಿ, ಓಂಪ್ರಕಾಶ ಮನಗೂಳಿ, ಮೊಹ್ಮದ್ ಝಾರೆ, ಕುಮಾರ ಬಿಳ್ಳೂರ, ಜೆಡಿಎಸ್‍ನಿಂದ ಸಿದ್ದು ಮುಶೆಪ್ಪಗೋಳ, ಮಹಾಂತೇಶ ಹೂಗಾರ, ತಾತು ಚಿಂಡಕ ಸೇರಿದಂತೆ ಅನೇಕರಿದ್ದರು.

loading...