ಜೆಡಿಎಸ್ ಕಾರ್ಯಾಲಯ ಉದ್ಘಾಟನೆ

0
23
loading...

ಆಲಮೇಲ: ರಾಜ್ಯ ಸರಕಾರ ರಾಜ್ಯದಲ್ಲಿ ಸುಮಾರು 51 ಹೋಸ ತಾಲೂಕು ಘೋಷಣೆ ಮಾಡಿದೆ ಅದರಟಲ್ಲಿ ವಿಜಯಪೂರ ಜಿಲ್ಲೆಯಲ್ಲಿ ಒಟ್ಟು 7 ನೂತನ ತಾಲೂಕುಗಳು ಘೋಷಣೆ ಯಾಗಿದ್ದು ಅತಿ ದೊಡ್ಡ ಪಟ್ಟಣವಾದ ಆಲಮೇಲ ಪಟ್ಟಣವನ್ನೇ ತಾಲೂಕು ಮಾಡುವಲಿ ಶಾಸಕರ ನಿರ್ಲಕ್ಷದಿಂದ ಕೈ ಬಿಡಲಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ತಂದೆಯಾದ ಎಮ್.ಸಿ ಮನಗೂಳಿ ಅವರಿಗೆ ಗೆಲ್ಲಿಸಿ ತಂದರೆ ಆಲಮೇಲ ತಾಲೂಕು ಮಾಡುವದಕ್ಕಾಗಿ ತಂದೆ ಅವರು ಕಾಲಿಗೆ ಚಪ್ಪಲಿ ಹಾಕುವುದು ಬಿಟ್ಟು ಹೋರಾಟ ಮಾಡಿ ತಾಲೂಕು ಘೋಷಣೆ ಮಾಡಿ ಚಪಲಿ ದರಿಸುತ್ತಾರೆ ಆಲಮೇಲ ತಾಲೂಕಿಗಾಗಿ ಹೋರಾಟ ಮಾಡಲು ನಾನು ಕೂಡಾ ಸದಾಸಿದ್ದನ್ನಾಗಿದ್ದೆನೆ ಎಂದು ಮನಗೂಳಿ ಅವರ ಪುತ್ರ ಡಾ.ಶಾಂತವೀರ ಮನಗೂಳಿ ಹೇಳಿದ್ದಾರೆ.
ಅವರು ಆಲಮೇಲ ಪಟ್ಟಣದ ಇಂಡಿ ರಸ್ತೆಯಲ್ಲಿರು ಮಸಾಲಿ ಬಿಲ್ಡಲಿಂಗ್ ನಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಲಯ ಉದ್ಘಾಟ್ಟಿಸಿ ಮಾತನಾಡಿದರು. ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಮೂರು ಬಾರಿ ಅಧಿಕಾರ ಹಿಡಿದ್ದಿದ್ದಾರೆ ಅದರಲಿ ರಮೇಶ ಭೂಸನೂರ ಅವರು ಎರಡು ಬಾರಿ ಅಧಿಕಾರ ಹಿಡಿದು 10 ವರ್ಷ ಆಡಳಿತ ಮಾಡಿದ್ದಾರೆ ತಾಲೂಕಿನಲ್ಲಿ ಅತಿ ದೊಡ್ಡ ಪಟ್ಟಣವಾದ ಆಲಮೇಲ ಪಟ್ಟಣವನ್ನು ಅಭಿವೃದ್ಧಿ ಮಾಡುವಲಿ ನಿರ್ಲಕ್ಷ ವಹಿಸಿದ್ದಾರೆ, ಆಲಮೇಲ ಪಟ್ಟಣದಲ್ಲಿ ಸುಮಾರು 30ಸಾವಿರ ಜನಸಖ್ಯೆ ಇದ್ದರೂ ತಾಲೂಕು ಕೇಂದ್ರವಾಗಿ ಘೋಷಣೆ ಆಗಲಿಲ್ಲ, ಸುಮಾರು 15ವರ್ಷದಿಂದ ಇಲ್ಲಿನ ಜನರು ತಾಲೂಕಿಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ, ಶಾಸಕರು ಕೂಡಾ ಹೋರಾಟ ಸಮಿತಿಯ ಉಪಾಧ್ಯಕ್ಷರಾಗಿ ಹೋರಾಟ ಮಾಡಿದ್ದರು, ಆದರೆ ಅವರೇ ಶಾಸಕರಾಗಿದ್ದಾಗ ತಾಲೂಕು ಮಾಡುತ್ತಾರೆ ಎಂದು ಜನರು ನಂಬಿದರು ಆದರೆ ಭೂಸನೂರ ಅವರು ಶಾಸಕರಾಗಿದ್ದಾಗ ತಾಲೂಕು ಮಾಡುವದು ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ, ತಾಲೂಕು ಕೇಂದ್ರ ಮಾಡುವದ್ದಾಗಿ ಇಲ್ಲಿನ ಜನರಿಗೆ ಬರವಸೆ ಕೊಟ್ಟು ಮತಹಾಕಿಸಿಕೊಂಡು ಶಾಸಕರಾಗಿ ತಾಲೂಕು ಮಾಡದೆ ದ್ರೋಹ ಮಾಡಿದ್ದಾರೆ, ನಮ್ಮ ತಂದೆ ಅವರಿಗೆ ಇಲ್ಲಿನ ಜನರು ಮತಹಾಕಿ ಆರ್ಶಿವಾದ ಮಾಡಿ ಹಾರಿಸಿ ಕಳಸಿದ್ದರೆ ಅವರು ಸರಕಾರ ಯಾವದೇ ಇರಲಿ ಹಿಂದೆ ಗುತ್ತಿಬಸವಣ ಕಾಲುವಿಗೆಗಾಗಿ ಹೇಗೆ ಚಪಲಿ ಬಿಟ್ಟು ಹೋರಾಟ ಮಾಡಿ ಕಾಲುವೆ ಮಾಡಿಸಿ ನೀರು ಹರಿಸಿ ಚಪಲಿ ಹಾಕಿಕೊಂಡಿದ್ದಾರೆ ಹಾಗೆ ಆಲಮೇಲ ತಾಲೂಕಿಗಾಗಿ ಚಪಲಿ ಬಿಟ್ಟು ಹೋರಾಟ ಮಾಡಿ ತಾಲೂಕು ಘೋಷಣೆ ಮಾಡಿಸುವರೆಗೂ ಚಪಲಿ ಹಾಕಿಕೊಳ್ಳುವದಿಲ್ಲ ಅವರ ಹೋರಾಟಕ್ಕೆ ನಾನು ಕೂಡಾ ಸದಾ ಸಿದ್ದನ್ನಾಗಿದ್ದೆನೆ ಆಲಮೇಲ ತಾಲೂಕು ಮಾಡಿ ಮಾಧರಿ ಪಟ್ಟಣವನ್ನಾಗಿಸುವದೆ ನಮ್ಮ ಗುರಿ ಎಂದು ಹೇಳಿದರು.

ಈ ವೇಳೆ ಮುಖಂಡರಾದ ರಮೇಶ ಭಂಟನೂರ, ಫರಿಧಸಾಬ ಸುಂಬಡ, ಮುನ್ನಾ ತಾಂಬೂಳಿ, ಚಂದ್ರಶೇಖರ ಕರೋಟ್ಟಿ, ಶ್ರೀಶೈಲ ಅಲ್ಲೋಳಿ ಮಠ, ನಾಜ್ಮೀನ ದೇವರಮನಿ, ಅಂಬವ್ವ ಅಲೋನಿ, ವಾಬ ಸುಂಬಡ, ಸಂಜೀವಕುಮಾರ ಬಗೊಂಡಿ, ಪರಶುರಾಮ ಕಾಂಬಳೆ, ಪುಂಡಳಿಕ ದೊಡ್ಡಮನಿ, ಇತತರು ಉಪಸ್ಥಿತರಿದ್ದರು.

loading...