ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

0
55
loading...

ಕನ್ನಡಮ್ಮ ಸುದ್ದಿ- ಖಾನಾಪುರ: ರಾಜ್ಯದ ಸಮಸ್ತ ಮರಾಠಾ ಸಮುದಾಯದ ಪ್ರತಿನಿಧಿಯಾಗಿರುವ ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಕರ್ನಾಟಕ ಮರಾಠಾ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳು, ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.

ಈ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರಿಗೆ ಬುಧವಾರ ಪತ್ರ ಬರೆದಿರುವ ಅವರು, ತಾಲೂಕಿನ 7 ದಶಕಗಳ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಡಾ.ಅಂಜಲಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.

ಎಂಇಎಸ್ ಪ್ರಾಬಲ್ಯವನ್ನು ಹೊಂದಿದ್ದ ಖಾನಾಪುರ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದ ಎಂಇಎಸ್ ಮತ್ತು ಬಿಜೆಪಿ ಪಕ್ಷಗಳ ಮರಾಠಾ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ದಾಖಲೆಯ ಗೆಲುವು ಸಾಧಿಸಿರುವ ಡಾ.ಅಂಜಲಿ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಮುಂದಿನ ವರ್ಷ ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ಮರಾಠಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬೆಳಗಾವಿ, ಚಿಕ್ಕೋಡಿ, ಕಾರವಾರ, ಬೀದರ ಮತ್ತಿತರ ಕಡೆಗಳಲ್ಲಿ ಸಮಾಜ ಬಾಂಧವರ ಒಲವು ಗಳಿಸಲು ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಡಾ.ಅಂಜಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಮಾಜದ ತಾಲೂಕು ಘಟಕದ ಉಪಾಧ್ಯಕ್ಷ ರುದ್ರಪ್ಪ ದೇಶನೂರ, ಮುಖಂಡರಾದ ವಿವೇಕಾನಂದ ತಡಕೋಡ, ಭಾರತಿ ಪಾಟೀಲ, ಮಹಾದೇವ ಕೋಳಿ, ಅದೃಶ್ಯ ದುಂಡಪ್ಪನವರ, ರಾಮಚಂದ್ರ ಪಾಟೀಲ, ಮಹಾಂತೇಶ ಪಾತ್ರಧಾರ, ಅಶೋಕ ಗುರ್ಲಹೊಸೂರ, ಸಂತೋಷ ಪಾಟೀಲ, ಸಂತೋಷ ಕಲ್ಮಠ, ಅನ್ವರ ಬಾಗವಾನ, ಪುಂಡಲೀಕ ನೀರಲಕಟ್ಟಿ, ಜಯಶ್ರೀ ಪಾಟೀಲ ಮತ್ತಿತರರು ಹೇಳಿದ್ದಾರೆ.

loading...