ಡಾ.ಗಿರಡ್ಡಿ ಸಮಗ್ರ ಸಾಹಿತ್ಯ ಸಂಪುಟ ಮುದ್ರಿಸಿ: ತಳಗೇರಿ

0
13
loading...

ಗದಗ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ನಾಡಿನ ಹಿರಿಯ ಸಾಹಿತಿ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜರ ಸಮಗ್ರ ಸಾಹಿತ್ಯವನ್ನು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುದ್ರಣ ಮಾಡಬೇಕೆಂದು ಕೆ.ಬಿ.ತಳಗೇರಿ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಂದು ವರ್ಷ-ನೂರು ಕಾರ್ಯಕ್ರಮ ಮಾಲಿಕೆಯಡಿ ಇತ್ತಿಚಿಗೆ ನಿಧನರಾದ ಡಾ.ಗಿರಡ್ಡಿ ಗೋವಿಂದರಾಜರ ಕುರಿತು ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದವರಾದ ಗಿರಡ್ಡಿಯವರು ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಪಟ್ಟು ಅಧ್ಯಯನ ಗೈದು ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಹಾಗೂ ಕ.ವಿ.ವಿಯ ಇಂಗ್ಲೀಷ್ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಅಧ್ಯಾಪನೆಯೊಂದಿಗೆ ಕವಿಗಳಾಗಿ, ಸಾಹಿತಿಗಳಾಗಿ, ಸಂಪಾದಕರಾಗಿ, ಮತ್ತು ವಿಮರ್ಶಕರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿಗಳನ್ನು ನೀಡಿದ್ದಾರೆ.

ಉತ್ತಮ ಸಂಘಟಿಕರಾಗಿದ್ದ ಗಿರಡ್ಡಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಶ್ರೇಷ್ಠ ಕೊಡುಗೆಗಳನ್ನು ನೀಡಿ ಉತ್ತಮ ಆಡಳಿತಗಾರರಾಗಿ ಖ್ಯಾತನಾಮರಾಗಿದ್ದರು. ಇಂಗ್ಲೀಷ್ ಪ್ರಾಧ್ಯಾಪಕರಾದರೂ ಕನ್ನಡ ಭಾಷೆ ಮೇಲೆ ಅಪಾರ ಅಭಿಮಾನವುಳ್ಳವರಾಗಿದ್ದರು ಅವರು ಅಗಲಿರುವುದು ಸಾಹಿತ್ಯ ಕ್ಷೇತ್ರಕ್ಕೆ ನಷ್ಟವಾಗಿದೆ. ಶ್ರೀಯುತರ ಬದುಕಿನ ಅನೇಕ ವಿಚಾರಗಳು ಹಾಗೂ ಜೀವನದಲ್ಲಿ ಅನುಭವಿಸಿದ ಸುಖ ದುಖಃಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೋಗೇರಿ ಮಾತನಾಡಿ ಗಿರಡ್ಡಿ ತಮ್ಮ ಸಾಧನೆಗಳ ಮೂಲಕ ಗದಗ ಜಿಲ್ಲೆ ತಾಲೂಕು ಮತ್ತು ಹುಟ್ಟಿದ ಊರಿಗೆ ಕೀರ್ತಿ ತಂದವರು. ಅವರು ಕಳೆದ ನಾಲ್ಕೈದು ವರ್ಷಗಳಿಂದ ಧಾರವಾಡದಲ್ಲಿ ಸಾಹಿತ್ಯ ಸಂಭ್ರಮವನ್ನು ನಡೆಸಿರುವುದು ಮೆಚ್ಚುಗೆಗೆ ಪಾತ್ರವಾಗಿತ್ತು ಎಂದರು. ಮಂಜುಳಾ ವೆಂಕಟೇಶಯ್ಯ ಪ್ರಾರ್ಥಿಸಿದರು, ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು, ಅಶೋಕ ಹಾದಿ ನಿರೂಪಿಸಿದರು ಬಾಹುಬಲಿ ಜೈನರ್ ವಂದಿಸಿದರು.

loading...