ಡಾ.ಮಹಾಂತ ಶ್ರೀಗಳ ನಿಧನ ತುಂಬಲಾರದ ನಷ್ಟ: ಶ್ರೀಗಳು

0
25
loading...

ಮುಂಡರಗಿ: ಜಾತಿ ಬೇಧಗಳನ್ನು ಬದಿಗೊತ್ತಿ ಸಮ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿದ್ದ ಇಲಕಲ್ಲಿನ ಡಾ.ಮಹಾಂತ ಸ್ವಾಮೀಜಿ ಅವರ ನಿಧನ ಸಮಾಜಕ್ಕೆ ನಿಜ ಅರ್ಥದಲ್ಲಿ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದು ಮುಂಡರಗಿಯ ಜಗದ್ಗುರು ನಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಇಲಕಲ್ಲಿನ ಡಾ.ಮಹಾಂತ ಸ್ವಾಮೀಜಿ ಅವರು ಲಿಂಗೈಕ್ಯರಾದ ಪ್ರಯುಕ್ತ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಸವಣ್ಣನವರು ಪ್ರತಿಪಾಧಿಸಿದ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಆಚರಿಸುವ ಮೂಲಕ ಡಾ.ಮಹಾಂತ ಸ್ವಾಮೀಜಿ ಅವರು ಆಧುನಿಕ ಬಸವಣ್ಣನವರಾಗಿದ್ದರು ಎಂದು ತಿಳಿಸಿದ್ದಾರೆ.
ತಮ್ಮ ಜೀವಿತಾವಧಿಯಲ್ಲಿ ದೇಶಾಧ್ಯಂತ ಸಂಚರಿಸಿದ ಅವರು ಮಹಾಂತ ಜೋಳಿಗೆಯ ಮೂಲಕ ಸಮಾಜದ ಯುವ ಜನತೆಯಲ್ಲಿ ಮನೆ ಮಾಡಿದ್ದ ದುಶ್ಚಟಗಳನ್ನು ಹೊಡೆದೋಡಿಸಲು ಪ್ರಯತ್ನಿಸಿದರು. ಹಣದ ಬದಲಾಗಿ ತಮ್ಮ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ನೀಡುವಂತೆ ಅವರು ಮನವಿ ಮಾಡಿಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು.

ಸಮಾಜದಲ್ಲಿ ಮನೆ ಮಾಡಿದ್ದ ಕಂದಾಚಾರ, ಮೂಢ ನಂಬಿಕೆ ಮೊದಲಾವುಗಳನ್ನು ಹೊಡೆದೋಡಿಸಲು ಡಾ.ಮಹಾಂತ ಸ್ವಾಮೀಜಿ ಅವರು ಸದಾ ಶ್ರಮಿಸುತ್ತಿದ್ದರು. ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತೆ ಎಲ್ಲರಿಗೂ ಸಲಹೆ ನೀಡುತ್ತಿದ್ದರು. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವ ಮೂಲಕ ನಾವೆಲ್ಲ ಅವರಿಗೆ ಗೌರವ ತೋರಿಸಬೇಕಾಗಿದೆ ಎಂದು ತಿಳಿಸಿದರು.

loading...