‘ತರುಣ ಭಾರತ’ ಪತ್ರಿಕೆ ವಿರುದ್ಧ ಪ್ರತಿಭಟನೆ

0
27
ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ತರುಣ ಭಾರತ ಮರಾಠಿ ಪತ್ರಿಕೆ ಸಮಾಜದ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ.ಪತ್ರಿಕಯನ್ನು ಬಂದ ಮಾಡಿ ಸಂಪಾದಕ ಕಿರಣ ಟಾಗೋರ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದರು.
ಶುಕ್ರವಾರದಂದು ಚನ್ನಮ್ಮ ವೃತ್ತದಲ್ಲಿ ಯುವಕರು ಪತ್ರಿಕೆಯ ವಿರುದ್ಧ ದಿಕ್ಕಾರ ಕೂಗಿವ ಮೂಲಕ ಪತ್ರಿಕೆಯನ್ನು ಸುಟ್ಟು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾದಿಕಾರಿಗೆ ಮನವಿ ಸಲ್ಲಿಸಿದರು.
ತರುಣ ಭಾರತ ದಿನ ಪತ್ರಿಕೆ  ಜಾತಿ ,ಧರ್ಮದ ,ಭಾಷೆಯ ನಡುವೆ ವಿಷದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ.ಈ ಹಿಂದೆ ದೇಶ ವಿರೋಧಿ ಘೋಷಣೆ ಕೂಗಿದ ರಾಜಕಾರಣಿ ವರದಿ, ಬೆಳಗಾವಿ ನಗರಕ್ಕೆ ಆಗಮಿಸಿದ್ದ ನರೇಂದ್ರ ಮೋದಿಯವರ ವರದಿಯನ್ನು ಬೀತ್ತರಿದಿಲ್ಲ. ದೇಶ ವಿರೋಧಿ ಚಟುವಟಿಕೆ ಕೆಲಸ ಮಾಡುತ್ತಿದಿದೆ ಅದ್ದರಿಂದ ತರುಣ ಭಾರತ ದಿನ ಪತ್ರಿಕೆಯನ್ನು ಬಂದ್ ಮಾಡಿ,ಸಂಪಾದಕರನ್ನು ರಾಜ್ಯದಿಂದ ಗಡಿಪಾರು‌ಮಾಡುವಂತೆ ಅಗ್ರಹಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಮಾಳಿ, ರಾಜೇಂದ್ರ ಪಾಟೀಲ, ಶ್ರಿನಿವಾಸ ಶೆಟ್ಟಿ, ಪ್ರವೀಣ ದೇವರಕ್ಕಿ, ಪ್ರಶಾಂತ ಅಂಗಡಿ ,ಮಂಜುನಾಥ ಮುದಲಪ್ಪಾ ಸೇರಿಂದತೆ ಇತರರು ಉಪಸ್ಥಿತರಿದ್ದರು.
loading...