ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ

0
17
loading...

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ಶಾಸಕ ಶಿವಾನಂದ ಪಾಟೀಲ ಅವರಿಗೆ ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶಾಸಕರ ಅಭಿಮಾನಿ ಹಾಗೂ ಕಾಂಗ್ರೆಸ್ ಎಸ್‍ಸಿ ಮೋರ್ಚಾ ಜಿಲ್ಲಾ ಸಂಚಾಲಕ ತಮ್ಮಣ್ಣ ಖಾನಾಗಡ್ಡಿ ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ ನಡೆಸಿದರು.
ಭಾನುವಾರ ಬೆಳಗ್ಗೆ 7ಗಂಟೆಗೆ ಸ್ಥಳೀಯ ಚನ್ನಬಸವ ವೃತ್ತದಲ್ಲಿ ತಲೆ ಮೇಲೆ ಕಲ್ಲು ಹೊತ್ತುಕೊಂಡು ಕುಳಿತು ವಿನೂತನ ಪ್ರತಿಭಟನೆ ಶಾಸಕರ ಅಭಿಮಾನಿ ಹಾಗೂ ಕಾಂಗ್ರೆಸ್ ಎಸ್‍ಸಿ ಮೋರ್ಚಾ ಜಿಲ್ಲಾ ಸಂಚಾಲಕ ತಮ್ಮಣ್ಣ ಖಾನಾಗಡ್ಡಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಶಾಸಕರ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿ ನಂತರ ತೆಲಗಿ ರಸ್ತೆ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಸ್ಥಳೀಯ ಬಸವೇಶ್ವರ ವೃತ್ತಕ್ಕೆ ತೆರಳಿ ಕಾರ್ಯಕರ್ತರು ಧರಣಿ ನಡೆಸಿದರು. ಕಾಂಗ್ರೆಸ್ ಎಸ್‍ಸಿ ಮೋರ್ಚಾ ಜಿಲ್ಲಾ ಸಂಚಾಲಕ ತಮ್ಮಣ್ಣ ಖಾನಾಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕಾಂಗ್ರೆಸ್ ಮುಖಂಡ ಸುರೇಶ ಮಣ್ಣೂರ ಮಾತನಾಡಿ ಶಾಸಕ ಶಿವಾನಂದ ಪಾಟೀಲ ಅವರು ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿದ್ದು ಸಚಿವ ಸ್ಥಾನವನ್ನು ಈ ಹಿಂದಿನ ಅವಧಿಯಲ್ಲಿ ನಿರೀಕ್ಷಿಸಲಾಗಿತ್ತು ಆದರೇ ಕೈತಪ್ಪಿತು ಮೈತ್ರಿ ಸರಕಾರದಲ್ಲಿಯಾದರೂ ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಸದಸ್ಯರಾದ ಸಂಗನಬಸು ಪೂಜಾರಿ, ಅಜೀಜ ಬಾಗವಾನ, ಮುಖಂಡರಾದ ಬಸವರಾಜ ಕೋಟಿ, ಉದಯ ಮಾಂಗಲೇಕರ, ಶೇಖರ ಗೊಳಸಂಗಿ, ನಾಗೇಶ ತಳವಾರ, ಮಲ್ಲಪ್ಪ ಪೂಜಾರಿ, ಬಸಗೊಂಡಪ್ಪ ಹಾದಿಮನಿ, ರಮ್ಜಾನ ಹೆಬ್ಬಾಳ, ಸಿದ್ದು ಹಾದಿಮನಿ, ಸಿದ್ರಾಮ ಪಾತ್ರೋಟ, ಸುರೇಶ ಜಾಯವಾಡಗಿ, ದಸಗೀರ ಕಲ್ಯಾಣಿ, ಮಹಾದೇವಪ್ಪ ಕಲ್ಯಾಣಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಲ.ರು.ಗೊಳಸಂಗಿ, ಬಸಗೊಂಡಪ್ಪಗೌಡ ಪಾಟೀಲ, ಯಮನಪ್ಪ ನಾಯ್ಕೋಡಿ, ಬಸವರಾಜ ಹಾರಿವಾಳ, ಸದಾನಂದ ಯಳಮೇಲಿ, ಸುಭಾಷ ಚಿಕ್ಕೊಂಡ, ಶೇಖರಗೌಡ ಪಾಟೀಲ, ಬಾಲಚಂದ್ರ ಮುಂಜಾನಿ, ಅನೀಲ ಪವಾರ, ಸುರೇಶಗೌಡ ಪಾಟೀಲ, ಅನೀಲ ದುಂಬಾಳಿ, ಮಲ್ಲಪ್ಪ ಕುಂಬಾರ, ಮುರಗೆಪ್ಪ ಚಿಂಚೋಳಿ, ರಮೇಶ ಯಳಮೇಲಿ, ಬಸವರಾಜ ಕುಳಗೇರಿ, ಸಿದ್ದಪ್ಪ ಮೋದಿ, ಬಸವರಾಜ ಕೆಂಡೆ, ಈರಗೊಂಡಪ್ಪ ಪಾಟೀಲ, ಎಂ.ಡಿ.ಯಳಮೇಲಿ, ಶೇಖರ ನಾಯ್ಕೋಡಿ, ಸಂಕನಗೌಡ ಪಾಟೀಲ, ಅಬ್ಬು ಚೌಧರಿ, ದಸ್ತಗೀರಸಾಬ ನಾಯ್ಕೋಡಿ, ಬಂದೇನವಾಜ ನಾಯ್ಕೋಡಿ, ರಫೀಕ್ ರಗಟಿ ಸೇರಿದಂತೆ ಮುಂತಾದವರು ಇದ್ದರು.

loading...