ತೋಟಗಾರಿಕೆ ಬೆಳೆಗಳನ್ನು ನುಂಗಿ ಹಾಕಿದ ಮಳೆ….!

0
22
loading...

ಧನ್ಯಕುಮಾರ ಧನಶೆಟ್ಟಿ
ಇಂಡಿ: ತಾಲೂಕಿನಲ್ಲಿ ಸುಮಾರು ಐವತ್ತು ವರ್ಷಗಳ ನಂತರ ಎಂದು ಆಗದ ಭಯಂಕರವಾದ ಸುಂಟರ ಗಾಳಿ ಹಾಗೂ ಗುಡುಗು ಮಳೆ ಮತ್ತೇ ಈಗ ಮೋಡ ಬಿದ್ದಂತಲ್ಲ. ಮುಗಿಲೇ ಹರಿದ ಅನುಭವ ತಾಲೂಕಿನ ಜನತೆಗೆ ಎರಡ್ಮೂರು ದಿನಗಳಿಂದ ಸತತವಾಗಿ ಮಳೆಯು ಸುರಿಯುದ್ದರಿಂದ ರೈತರು ಬೆಳೆದ ಸಾವಿರಾರು ಎಕರೆ ವಾಣಿಜ್ಯ ಬೆಳೆಯ ನುಂಗಿ ಹಾಕಿದೆ. ಇದರಿಂದ ತಾಲೂಕಿನ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು. ಇದರಿಂದ ರೈತರ ಬದುಕನ್ನೆ ನುಂಗಿ ಹಾಕಿದೆ.

ತಾಲೂಕಿನಾದ್ಯಂತ ಬೇಸಿಗೆಯ ಮಳೆಯಾಗಿರುವದು ವಿಚಿತ್ರವಾಗಿದೆ. ಆದರೆ ಭಯಂಕರವಾದ ಗಾಳಿ ಹಾಗೂ ಮಳೆಯಿಂದ ಬೆಳೆಗಳು ಬೀಜ ಬಿತ್ತಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಮತ್ತು ರೈತರ ಕನಸನ್ನು ನೂಚ್ಚು ನೂರಾಗಿದೆ. ಮನೆಗಳು ಕುಸಿದಿದ್ದು ಅಲ್ಲದೇ ಮನೆಗಳಿಗೆ ನೀರು ನುಗ್ಗಿ ನೆಲ ಸಮವಾಗಿ ಹೋಗಿದೆ. ರೈತರಿಗೆ ಸಾಕಷ್ಟು ಹಾನಿಯಾಗಿದ್ದು ಸರಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ರೈತರ ನೆರವಿಗೆ ಧಾವಿಸಿದ ಉದಾರಣೆಗಳಿಲ್ಲ, ಬಂದರೂ ನೀರಿಕ್ಷಿತ ಸಹಾಯ ದೊರತಿಲ್ಲ, ಇದು ರೈತರ ದೌರ್ಭಾಗ್ಯ ಆದರೆ ವಿಧಿ, ಸರಕಾರಿ ಯಂತ್ರ ಬಳಸಿ ಹಾನಿಗೊಳಗಾದ ಮತ್ತು ಮುಳುಗಡೆಯಾದ ಕ್ಷೇತ್ರ ಬೆಳೆ, ಗುಡಿಸಲು, ಸತ್ತ ಜಾನುವಾರುಗಳು, ಸಿಡಿಲಿಂದ ಜೀವ ತಗೆದುಕೊಂಡಿವೆ, ಹಾಳಾದ ಕಾಳು ಕಡಿ, ವಿವರ ಪಡೆದು ಪಂಚನಾಮೆ ಮಾಡಿಕೊಳ್ಳುವ ಪರಿಪಾಠ ಮಾತ್ರವಿದೆ. ಆದರೆ ಯಾವದೆ ಸಹಾನುಭೂತಿಯಾಗಲಿ, ಸರಕಾರದಿಂದ ರೈತರಿಗೆ ಸಿಕ್ಕಂತೆ ಕಾಣುವದಿಲ್ಲ. ಸಿಕ್ಕಿದರೂ ಲೆಕ್ಕಕ್ಕಿಲ.
ಕಬ್ಬು, ದಾಳಿಂಬೆ, ಪಪ್ಪಾಯಿ, ನಿಂಬೆ,ಬಾಳೇ, ದ್ರಾಕ್ಷಿ ಹೀಗೆ ಹಲವಾರು ವಾಣಿಜ್ಯ ಬೆಳೆಗಳು ಭಾರಿ ಗಾಳಿ ಮಳೆಯ ಅವಾಂತರ….ಕೃಷಿಯ ಮೇಲೆ ಅವಲಂಬಿತ ಬೆಳೆಗಳನ್ನು ರೈತರು ತಮ್ಮ ಜಮೀನುಗಳನ್ನು ಬ್ಯಾಂಕುಗಳಿಗೆ ಅಡವಿಟ್ಟು ಸಾಲ ಪಡೆದು ಬೆಳೆದ ಸಾವಿರಾರು ಎಕರೆ ಬೆಳೆಗಳು ಮಳೆಯಿಂದ ಹಾನಿಗಿಡಾಗಿವೆ. ರೈತನ ಸ್ಥಿತಿ ಮುಂದೇನು ಎಂಬ ಭೀತಿ ಆವರಿಸಿದೆ.

ಕಳೆದ 4-5 ವರ್ಷಗಳ ಬರಗಾಲಕ್ಕಿಂತ ಈ ವರ್ಷದ ಗಾಳಿ ಸಮೇತ ವರ್ಷಧಾರೆ ಅಧಿಕವಾಗಿದ್ದು. ಕಹಿ ಅನುಭವ ಹಾಗೂ ಹಾನಿ ಮಾಡುತ್ತಿದೆಯೆಂದು ಯಾರು ಊಹಿಸಿರಲಿಲ್ಲ. ಬರಗಾಲದ ನಂತರ ಬ್ಯಾಂಕಿನ ಸಾಲ ತುಂಬದೇ ಇದ್ದ ಸಾಲಕ್ಕೆ ಬಡ್ಡಿ ಹಾಕಿ ಅಸಲಿಗೆ ಕಂತುಗಳಲ್ಲಿ ಮರುಪಾವತಿ ಮಾಡುವದಾಗಿ ಬ್ಯಾಂಕುಗಳಿಗೆ ಬರೆದುಕೊಟ್ಟು ಮತ್ತೇ ಬೆಳೆಗಳನ್ನು ಬೆಳೆಯಲು ಮರು ಸಾಲ ಪಡೆದು ಮತ್ತೇ ಬೆಳೆಗಳೂ ಬಿತ್ತಿದ್ದು ಈಗ ಮಹಾಮಳೆಯಿಂದ ಬೆಳೆಗಳೂ ನುಂಗಿ ಹಾಕಿದೆ. ದನ ಕರುಗಳಿಗೆ ಮೇವಿನ ಕೊರತೆಯಾಗಿದೆ. ಅಲ್ಲದೇ ಫಲವತ್ತಾದ ಮಣ್ಣು ನೀರು ಪಾಲಾಗಿದೆ. ಎಂದು ಗ್ರಾಮಸ್ಥರ ಅಳಿಲಾಗಿದೆ.
ರೈತ ಕೆ.ಎಸ್. ಪೂಜಾರಿ: ನನ್ನ ಜಮೀನಿನಲಲ್ಲಿದ್ದ ನಿಂಬೆ ಹಣ್ಣಿನ ಗಿಡದಿಂದ ಮಳೇ ಹಾಗೂ ಭಯಂಕರವಾದ ಗಾಳಿಯಿಂದಾಗಿ ಸಾವಿರಾರು ನಿಂಬೆ ಹಣ್ಣು ಸಂಪೂರ್ಣವಾಗಿ ಹರಿದು ಬಿದ್ದಿದೆ. ಹಾಗೂ ನಿಂಬೆ ಗಿಡಗಳು ಗಾಳಿಯಿಂದಾಗಿ ಬಿದ್ದಿವೆ.ಇದರಿಂದಾಗಿ ಲಕ್ಷಾನುಗಟ್ಟಲೆ ಹಾಲಿ ಉಂಟಾಗಿದೆ. ಆದ್ದರಿಂದ ನನಗೆ ಸರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನೈಸರ್ಗಿಕವಗಿ ತಾಲೂಕಿನ ಬೆಳೆಗಳು ಹಾನಿಗಿಡಾಗಿದ್ದು ಇಂಥಹ ಪರಿಸ್ಥಿತಿಯಲ್ಲಿ ಸರಕಾರಗಳು ರೈತರ ಸಹಕಾರಕ್ಕೆ ಮುಂದೆ ಬಂದರೆ ಮಾತ್ರ ರೈತರ ಬದುಕು ಸಾಧ್ಯವಾಗುವದು. ಮಳೆಯಿಂದಾಗಿ ರೈತರ ಬೆಳೆದ ಬೆಳೆಗಳು ಹಾನಿಗಿಡಾಗಿದೆ ಇದಕ್ಕೆ ಸರಕಾರ ಮುಂದೆ ಬಂದು ಯೊಗ್ಯ ಪರಹಾರ ಒದಗಿಸದಿದ್ದಲ್ಲಿ ರೈತರು ಆತ್ಮಹತ್ಯ ಮತ್ತು ತಮ್ಮ ಹಕ್ಕಿಗಾಗಿ ಹೋರಾಟ ಅನಿವಾರ್ಯ, ಯಾವದೇ ಪಕ್ಷವನ್ನು ಎನ್ನದೇ ಎಲ್ಲ ರಾಜಕೀಯ ಮುಖಂಡರು ಒಗ್ಗೂಡಿ ರೈತರಿಗೆ ಸೂಕ್ತವಾದ ಪರಿಹಾರ ದೊರುಕುವದೇ ಎಂಬುವದು ಕಾದು ನೋಡಬೇಕಾಗಿದೆ.

loading...