ದಲಿತರ ಮೇಲೆ ಹಲ್ಲೆ, ಬಿಜೆಪಿಗೆ ತಕ್ಕುದಲ್ಲ: ಯಾವಗಲ್‌

0
12
loading...

ನರಗುಂದ: ಅಶಕ್ತರ ಮೇಲೆ ಹಲ್ಲೆ ಮಾಡಿವುದು ಬಿಜೆಪಿ ಸಂಸ್ಕೃತಿಯೇ? ಮಾತು ಮಾತಿಗೆ ಬಿಜೆಪಿ ಉತ್ತಮ ಸಂಸ್ಕೃತಿ ಹೊಂದಿದೆ ಎನ್ನುವ ಬಿಜೆಪಿಯವರು ಮೇ. 12 ರಂದು ಯಾವಗಲ್‌ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ್ದು ತರವಲ್ಲ. ಬಿಜೆಪಿಗೆ ಈ ಘಟಣೆ ತಕ್ಕುದಲ್ಲ. ದಲಿತರಿಗೆ ಅನ್ಯಾಯವಾಗದ ರೀತಿಯಲ್ಲಿ ಅವರ ರಕ್ಷಣೆ ಮಾಡುವುದಾಗಿ ರವಿವಾರ ಯಾವಗಲ್‌ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭರವಸೆ ನೀಡಿದ್ದೇನೆಂದು ಬಿ.ಆರ್‌. ಯಾವಗಲ್‌ ತಿಳಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ಮತದಾನ ನಮ್ಮ ಕರ್ತವ್ಯ ಹಾಗಂತ ಅದನ್ನು ಬಲವಂತವಾಗಿ ಪಡೆದುಕೊಳ್ಳುವುದಲ್ಲ. ಯಾವಗಲ್‌ ಗ್ರಾಮದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷದ ದಲಿತ ಕಾರ್ಯಕರ್ತರ ಮೇಲೆ ಹಲ್ಲೆಮಾಡಿದ ಘಟಣೆ ನಿಜಕ್ಕೂ ಅಮಾನವಿಯ ವರ್ತನೆ ಬಿಜೆಪಿ ತೋರಿದಂತ್ತಾಗಿದೆ ಎಂದು ಶಾಸಕ ಬಿ.ಆರ್‌. ಯಾವಗಲ್‌ ಟೀಕೆಮಾಡಿದರು.
ಇಂತಹ ಘಟಣೆಗಳು ಬಿಜೆಪಿಯಿಂದ ಪುನರಾವರ್ತನೆ ಯಾಗುವುದನ್ನು ಸಹಿಸುವುದಿಲ್ಲವೆಂದು ಯಾವಗಲ್‌ ತಿಳಿಸಿದರು. ಈ ಸಲದ ವಿಧಾನಸಣೆ ಚುನಾವಣೆಯಲ್ಲಿ ನನ್ನ ಗೆಲುವು ಪಾರದರ್ಶಕವಾಗಿರಲಿದೆ. ನಾನು ಈ ಕ್ಷೇತ್ರಕ್ಕೆ ಕಳೆದ 35 ವರ್ಷಗಳಿಂದ ಮಾಡಿದ ಅಭಿವೃದ್ದಿಕಾರ್ಯಗಳಿಂದ ಜನತೆ ಹಾಗೂ ಮತದಾರರು ನನ್ನ ಮೇಲೆ ಇಟ್ಟ ಅಭಿಮಾನಕ್ಕೆ ನಾನು ಚಿರಋುಣಿಯಾಗಿದ್ದೇನೆ. ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಳೆದ ಕೆಲ ದಿನಗಳಿಂದ ರಾಜ್ಯ ಮುಖಂಡರಲ್ಲಿ ಹೆಚ್ಚನ ಚರ್ಚೆಗಳು ಮುಂದುವರೆವೆ. ಈ ವಿಷಯ ವರಿಷ್ಟರಿಗೆ ಬಿಟ್ಟಿದ್ದು. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಮುಖ್ಯಮಂತ್ರಿ ಸ್ಥಾನ ಆಗ ಮತ್ತು ಈಗಲೂ ಒಪ್ಪಿಕೊಳ್ಳುವಂತಹುದು. ಈ ಭಾರಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನನ್ನ ಅವಧಿಯಲ್ಲಿ ನಡೆಯುವ ಮೂಲಕ ಈ ಕ್ಷೇತ್ರಕ್ಕೆ ಹೆಚ್ಚಿನ ಅಭಿವೃದ್ದಿ ಸಾಧನೆಯಾಗಿದೆ. ಹದಲಿ ಗ್ರಾಮದ ಮಂಜುನಾಥ ಹದಗಲ್ಲ ಹಾಗೂ ನಾಗರಾಜ ವಿಠಪ್ಪನವರ, ವಿಜಯ ಕಮ್ಮಾರ ನಿಜವಾಗಿಯೂ ಅವರು ಯಾವ ಪಕ್ಷಕ್ಕೆ ಸೇರಿದವರಲ್ಲ. ಅವರು ಗ್ರಾಮದಲ್ಲಿಯೂ ಇಲ್ಲ. ಆದರೆ ಬಿಜೆಪಿಯವರು ಈ ವ್ಯಕ್ತಿಗಳು ಕಾಂಗ್ರೆಸ್ಸಿಗೆ ಸೇರಿದ್ದಾರೆಂದು ಗುಲ್ಲು ಹಬ್ಬಿಸುವ ಬಿಜೆಪಿ ಕಾರ್ಯಕರ್ತರ ನಡತೆ ಎಷ್ಟರ ಮಟ್ಟಿಗೆ ಇದೆ ಎಂದರೆ ಎಲ್ಲವನ್ನೂ ಧರ್ಪದಿಂದಲೇ ಸಾಧಿಸುವ ಮನೋಭಾವ ಹೊಂದಿರುವ ಬಿಜೆಪಿ ಕಾರ್ಯಕರ್ತರು ತಮ್ಮ ನಡತೆ ತಿದ್ದಿಕೊಳ್ಳಬೇಕೆಂದು ಯಾವಗಲ್‌ ತಿಳಿಸಿದರು.
ಗುರುಪಾದಪ್ಪ ಕುರಹಟ್ಟಿ, ಚಂಬಣ್ಣ ವಾಳದ, ರಾಜು ಕಲಾಲ, ತಾಪಂ ಅಧ್ಯಕ್ಷ ಪ್ರಭುಲಿಂಗಪ್ಪ ಯಲಿಗಾರ, ಪ್ರಕಾಶಗೌಡ ತಿರಕನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ನೀಲಪ್ಪ ಗುಡದನ್ನವರ, ಪ್ರಭು ಬಾವಿಕಟ್ಟಿ, ಮುತ್ತಣ್ಣ ಹಜರಡ್ಡಿ ಅನೇಕರು ಉಪಸ್ಥಿತರಿದ್ದರು.

loading...