ದೇಶದ ಹೊರಗೆ ಸೈನಿಕರು, ಒಳಗೆ ಶುಶ್ರೊಷಕರು ರಕ್ಷಣೆ: ರೊಬಿನ್

0
31
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸೈನಿಕರು ದೇಶದ ಹೊರಗೆ ಶತ್ರುಗಳನ್ನ ಕಾದು ನಾಗರೀಕರನ್ನ ರಕ್ಷಿಸಿದರೆ ಶುಶ್ರೊಷಕರು ನಾಗರೀಕರ ಆರೋಗ್ಯವನ್ನ ಕಾಪಾಡುವ ಮುಖಾಂತರ ದೇಶವನ್ನ ಕಾಪಾಡುತ್ತಿದ್ದಾರೆ ಎಂದು ಬೆಳಗಾವಿಯ ವಿಂಗ್ ಕಮಾಂಡ್ ಕರ್ನಲ್ ರೊಬಿನ್ ಫರ್ನಾಂಡಿಸ್ ಹೇಳಿದರು.
ಅವರು ಸಂಜೆ ಕೆಎಲ್‍ಇ ಸೆಂಟಿನರಿ ಕನ್ವೇನ್ಷನ್ ಸೆಂಟರ್‍ನಲ್ಲಿ ನಡೆದ ಕಾಹೆರ್‍ನ ಶುಶ್ರೊಷ ಮಹಾವಿದ್ಯಾಲಯದ ವಾರ್ಷಿಕ ದಿನ ನ್ಯಾಸ-2018 ಸಮಾರಂಭದ ಮುಖ್ಯ ಅತಿಥಿಗಳಾಗಿ ಸಮಾರಂಭವನ್ನ ಉಧ್ಘಾಟಿಸಿ ಮಾತನಾಡುತ್ತಿದ್ದರು.
ಶುಶ್ರೊಷಕರ ಸೇವೆ ಅತ್ಯೋತಮ ಸೇವೆ. ನೀಮ್ಮ ಸೇವೆಯಿಂದ ರೋಗರಹಿತ ಸಮಾಜ ನಿರ್ಮಾಣವಾಗಲಿ. ಉತ್ತಮ ಸಾಧನೆ ಮಾಡಿದ ಹಾಗು ಸೇವೆಗೆ ಪಾದಾರ್ಪಣೆ ಮಾಡುತ್ತಿರುವ ತಮಗೆಲ್ಲರಿಗೊ ಶುಭವಾಗಲಿ ಎಂದು ಹಾರೈಸಿದರು.

ಕಾಹೆರ್‍ನ ಕುಲಸಚಿವ ಡಾ.ವಿ.ಡಿ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕೆ.ಎಲ್.ಇ ನರ್ಸಿಂಗ್ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸೇವೆ ಮಾಡುತ್ತಿದ್ದಾರೆ ಕಾರಣ ಸಂಸ್ಥೆ ಗುಣಮಟ್ಟಕ್ಕೆ ಕೊಟ್ಟಿರುವ ಮಹತ್ವ ಎಂದು ಹೇಳಿದರು

ಪ್ರಾರಂಭದಲ್ಲಿ ಕೆ.ಎಲ್.ಇ ಸಂಗೀತ ಶಾಲೆಯ ಸಿಬ್ಬಂದಿ ಹಾಗು ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಹಾಡಲಾಯಿತು. ಪ್ರಾಂಶುಪಾಲರಾದ ಡಾ.ಸುಧಾರಡ್ಡಿ ಸ್ವಾಗತಿಸಿ,ವಾರ್ಷಿಕ ವರದಿಯನ್ನು ಓದಿದರು. ಈ ಸಂದರ್ಭದಲ್ಲಿ ವಿದ್ಯಾಲಯದ ಸ್ಮರಣ ಸಂಚಿಕೆಯನ್ನ ಬಿಡುಗಡೆ ಮಾಡಲಾಯಿತು. ಮತ್ತು ಶೈಕ್ಷಣಿಕ ಹಾಗು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.

loading...