ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಮಾಶಾಸನ ವಿತರಣೆ

0
12
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಬಡವರಿಗೆ ಸಹಾಯ ಹಸ್ತ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದ ತಾಲೂಕಾ ಯೋಜನಾಧಿಕಾರಿ ವಾಸಂತಿ ಆಮಿನ್‌ ಹೇಳಿದರು.
ಅವರು ಸಮೀಪದ ಹಾಲಕೆರೆ ಗ್ರಾಮದ ವಯೋವೃದ್ಧರಾದ ಲಕ್ಷ್ಮವ್ವ ಸುಬ್ಬನಗೌಡ್ರ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಲಾಗುವ 750ರೂ.ಗಳ ಮಾಶಾಸನದ ಮಂಜೂರಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
ನಾವು ನೀಡುವ 750ರೂ.ಮಾಶಾಸನದ ಮೊತ್ತದಲ್ಲೇ ಜೀವನ ಸಾಗಿಸಲು ಸಾಧ್ಯವಿಲ್ಲ.ಆದರೆ ಜೀವನದ ಕೊನೆಯ ದಿನಗಳಲ್ಲಾದರೂ ಕನಿಷ್ಟ ಸಹಾಯಕ್ಕೆ ಬರಲಿ ಎಂಬ ಸದುದ್ದೇಶದಿಂದ ಈ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.ಸಂಸ್ಥೆಯಿಂದ ವೀರೇಂದ್ರ ಹೆಗ್ಗಡೆಯವರ ಈ ಎಲ್ಲ ಸಾಮಾಜಿಕ ಸೇವಾ ಸೌಲಭ್ಯಗಳನ್ನು ಕಲ್ಪಿಸಿದ್ದು ಇದೀಗ 750 ರೂ.ಮಾಶಾಸನ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಸಾವಿರ ರೂಪಾಯಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ ಎಂದರು.ನರೇಗಲ್ಲ ಮೇಲ್ವೀಚಾರಕರಾದ ಮಲ್ಲಿಕಾರ್ಜುನಗೌಡ ಸಂಕನಗೌಡ್ರ,ಶಾರದಾ ಪಲ್ಲೇದ,ಅನ್ನಪೂರ್ಣ ಹಿರೇಮಠ ಉಪಸ್ಥಿತರಿದ್ದರು.

loading...