ನಿಧಾನಗತಿಯಲ್ಲಿ ಬೇಡ್ತಿ ಸೇತುವೆ ಕಾಮಗಾರಿ: ಸಾರ್ವಜನಿಕರಲ್ಲಿ ಆತಂಕ

0
21
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ತಾಲೂಕಿನ ಬಹು ನಿರೀಕ್ಷಿತ ಬೇಡ್ತಿ ಸೇತುವೆ ನಿರ್ಮಾಣ ಹಲವು ವಿಘ್ನಗಳ ನಡುವೆಯೆ 2016 ರಲ್ಲಿಯೇ ಕಾರ್ಯಾರಂಭಗೊಂಡರೂ ಕಾಮಗಾರಿ ಕುಂಟುತ್ತಾ ಸಾಗಿರುವದು ಸಾರ್ವಜನಿಕರಲ್ಲಿ ಬೇಡ್ತಿ ಸೇತುವೆ ಮುಗಿಸಲು ಇನ್ನೇಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ಹುಟ್ಟುಹಾಕಿದೆ.

ತಾಲೂಕಿನ ಮಂಚೀಕೇರಿ ಬಳಿ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ 93 ರಲ್ಲಿರುವ ಪುರಾತನ ಹಾಗೂ ಅಪಾಯಕಾರಿಯಾಗಿದ್ದ ಬೇಡ್ತಿ ಸೇತುವೆಗೆ ನೂತನ ಸೇತುವೆ ಕಾಮಗಾರಿ ಸಪ್ಟೆಂಬರೆ 2016 ರಲ್ಲಿಯೇ ಆರಂಭಗೊಂಡಿದೆ. ಲೊಕೋಪಯೋಗಿ ಇಲಾಖೆಯ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 14 ಕೋಟಿ ವೆಚ್ಚದಲ್ಲಿನಿರ್ಮಿಸುತ್ತಿರುವ ಈ ಸೇತುವೆಯ ಕಾಮಗಾರಿಗೆ 2016 ಜನೇವರಿಯಲ್ಲಿಯೇ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ನೆರವೇರಿಸಿದ್ದರೂ ಕಾಮಗಾರಿಗೆ ಕೆಲವೂ ತಾಂತ್ರಿಕ ಕಾರಣಗಳಿಂದ ಚಾಲನೆ ದೊರೆತಿರಲಿಲ್ಲ ಇದರಿಂದ ಆತಂಕಕ್ಕೀಡಾಗಿದ್ದ ಸಾರ್ವಜನಿಕರು, ವಾಹನ ಸವಾರರು ಪುನರರ್ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿ ಆರಂಭಗೊಂಡಿದ್ದರಿಂದ ನಿಟ್ಟುಸಿರು ಬಿಡುವಂತಾಗಿತ್ತು, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೇತುವೆ ನಿರ್ಮಾಣ ಕಾಮಗಾರಿ ಆರಂಭದಿಂದಲೇ ತೆವಳುತ್ತಾ ಸಾಗಿರುವದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸೇತುವೆ 170 ಮೀ ಉದ್ದ,12ಮೀ ಅಗಲ ಹೊಂದಿರಲಿದ್ದು,ಭಾರ ಹೊರಲು ಸಮರ್ಥವಾಗುವಂತೆ 6 ಬೃಹತ್ ಕಂಬಗಳು 2.ದೊಡ್ಡ ಅಟಲ್ಮೆಂಟುಗಳನ್ನು ಸೇತುವೆ ಹೊಂದಲಿದೆ.14 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆಯನ್ನು ಹುಬ್ಬಳ್ಳಿಯ ಬಿ.ಎಸ್ ಕಂಪನಿಯವರು ವಹಿಸಿಕೊಂಡಿದ್ದರು. ಕಾಮಗಾರಿ ಮುಗಿಸಲು 18 ತಿಂಗಳು ಕಾಲಾವಧಿ ನೀಡಲಾಗಿತ್ತು. ಆದರೆ ಈವರೆಗೂ ಕೇವಲ ಕಂಬಗಳು ಮಾತ್ರ ಎದ್ದು ನಿಂತಿವೆ. ಮಳೆಗಾಲಕ್ಕೆ ಪೂರ್ವವೇ ಸೇತುವೆ ಕಾಮಗಾರಿ ನಿರ್ಮಾಣವಾಗುವ ಲಕ್ಷಣ ಕಾಣುತ್ತಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನ ಆಧುನಿಕ ತಂತ್ರಜ್ಞಾನದಿಂದ ದ್ವಿಪಥ ಸಂಚಾರಕ್ಕೆ ಅನೂಕೂಲವಾಗುವಂತೆ ಮಹತ್ವದ ತಿರುವುಗಳನ್ನು ತಿದ್ದಿ ನೇರವಾದ ಹಾಗೂ ಎತ್ತರಕ್ಕೆ ಸುಸಜ್ಜಿತಸೇತುವೆ ನಿರ್ಮಾಣವಾಗುತ್ತದೆ ಇದರಿಂದ ಸಂಚಾರ ಸುಗಮವಾಗಲಿದೆ ಎಂದು ಸಾರ್ವಜನಿಕರ ಆಶಿಸಿದ್ದರು.
ಶಿಥಿಲಾವಸ್ಥೆಯಲ್ಲಿರುವ ಹಳೆಯ ಸೇತುವೆ ಮೇಲೆ ವಾಹನ ಸಂಚಾರದಿಂದಾಗಿ ಸೇತುವೆ ಕುಸಿಯಬಹುದು ಎಂಬ ಆತಂಕ ಪ್ರಯಾಣಿಕರನ್ನು ಹಾಗೂ ಚಾಲಕರನ್ನು ಕಾಡುತ್ತಿದೆ. ಕಾರಣ ನೂತನ ಸೇತುವೆಯ ಬಾರ ಬೆಂಡಿಂಗ್ ಕಾಮಗಾರಿಯನ್ನು ಹಗಲು ರಾತ್ರಿಯೆನ್ನದೇ ಸಮರೋಪಾದಿಯಲ್ಲಿ ಕೈಗೊಢರೆ ಮಾತ್ರ ಮಳೆಗಾಲ ಆರಂಭಕ್ಕೂ ಮುನ್ನ ಸೇತುವೆಗೆ ಸ್ಲ್ಯಾಬ್ ನಿರ್ಮಾಣಗೊಳ್ಳಬಹುದಾಗಿದೆ,ಇಲ್ಲದಿದ್ದರೆ ಮತ್ತೊಂದು ವರ್ಷ ಸೇತುವೆ ನಿರ್ಮಣ ವಿಳಂಬವಾಗುವ ಸಾಧ್ಯತೆ ಮೇಲೆ ಕಂಡುಬರುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ತೀವ್ರ ಗಮನ ಹರಿಸದಿದ್ದರೆ ಉಂಟಾಗಿರುವ ಆತಂಕ ಉಲ್ಬಣವಾಗುತ್ತದೆ.ಹಾಗೂ 14 ಕೋ ರೂ ವೆಚ್ಚದಲ್ಲಿ ನಿರ್ಮಣಗೊಳ್ಳುತ್ತಿರುವ ಸೇತುವೆಯ ಇಂದಿನ ವೆಚ್ಚ 24 ಕೋ ರೂ ಗೆ ಏರಿದೆ.ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ವೆಚ್ಚದ ಭಾರವೂ ಅಧಿಕವಾಗಿ ಹೊರೆಯಾಗುವದರಲ್ಲಿ ಸಂದೇಹವಿಲ್ಲಾ. ಆದ್ದರಿಂದ ಅಧಿಕಾರಿಗಳು ಗಮನಹರಿಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಲಕ್ಷ್ಯವಹಿಸಬೇಕಿದೆ.

loading...