ನೇತ್ರದಾನ ಮಾಡಿ ಅಂಧರಿಗೆ ಬೆಳಕಾಗಿ: ಶಿವನಗೌಡ

0
14
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ನಾಡಿನಲ್ಲಿ ಲೆಕ್ಕವಿದಷ್ಟು ಅಂಧರು ಜೀವನವನ್ನು ಸಾಗಿಸುತ್ತಿದ್ದಾರೆ. ಮರಣ ಹೊಂದಿದ ವ್ಯಕ್ತಿಗಳು ನೇತ್ರದಾನ ಮಾಡಿದರೆ ಅಂತವರ ಪಾಲಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಪಿಡಿಒ ಶಿವನಗೌಡ ಮೇಣಸಗಿ ಹೇಳಿದರು.

ಅಬ್ಬೀಗೇರಿಯಲ್ಲಿ ಸರಕಾರಿ ಶಾಲೆಯಲ್ಲಿ ಹುಬ್ಬಳ್ಳಿಯ ಎಂ.ಬಿ.ಹುರಳಿಕೊಪ್ಪ ಟ್ರಸ್ಟ,ಅಶೋಕಾ ಕಣ್ಣಿನ ಆಸ್ಪತ್ರೆ ಹಾಗೂ ಅಬ್ಬಿಗೇರಿ ಗ್ರಾಪಂ ಸಯುಂಕ್ತಾಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿಸ್ತಾ ಶಿಬಿರದಲ್ಲಿ ಅವರು ಮಾತನಾಡಿದರು.
ಜನ್ಮ ಪಡೆದ ಪ್ರತಿ ಮನುಷ್ಯನಿಗೂ ಸಾವು ಖಚಿತವಾಗಿದೆ. ಸುಖ,ಸಂಪತ್ತು,ಐಶ್ವರ್ಯ ಹುಡುಕುವುದರಲ್ಲಿ ಕಾಲ ಕಳೆಯುತ್ತೇವೆ.ಆದರೆ ಇದನೆಲ್ಲ ಗಳಿಸಿ ಇಲ್ಲಿಯೇ ಬಿಟ್ಟು ಹೋಗುವ ಸತ್ಯ ತಿಳಿದಿದ್ದರು ಕಣ್ಣು ದಾನ ಮಾಡಲು ಹಿಂಜರಿಯುತ್ತೇವೆ. ಸತ್ತ ಮೇಲಿಯೂ ಬದುಕಬೇಕೇಂದರೆ ಅದು ನೇತ್ರದಾನ ಮೂಲಕ ಸಾಧ್ಯ. ಸರಕಾರ ಬಡ ಜನರಿಗಾಗಿ ಹಲವು ರೀತಿಯಲ್ಲಿ ಅನಕೂಲ ಕಲ್ಪಿಸಿದೆ. ಅವುಗಳನ್ನು ಪಡೆದು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ನೂರಾರು ಜನರು ಶಿಬಿರದ ಉಪಯೋಗ ಪಡೆದುಕೊಂಡರು. ಬಸವರಾಜ ಪಲ್ಲೇದ, ಸುರೇಶ ನಾಯ್ಕ, ಸುರೇಶ ಸಿದ್ನೇಕೊಪ್ಪ, ಬಸವರಾಜ ತಳವಾರ, ಕಳಕಪ್ಪ.ಬಿ, ನೇತ್ರ ತಜ್ಞರು ಇದ್ದರು.

loading...