ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ

0
9
loading...

ಕನ್ನಡಮ್ಮ ಸುದ್ದಿ-ಕಾರವಾರ: ಪ್ರಸಕ್ತ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕೈಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟೂ 1438 ಮತಗಟ್ಟೆಗಳಿದ್ದು ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ರಚಿಸಿದ 01 ಹಾಗೂ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ರಚಿಸಿದ 03 ಒಟ್ಟು 04 ಹೆಚ್ಚುವರಿ ಮತಗಟ್ಟೆಗಳಲ್ಲಿ ಮೇ 12 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಗ್ರಾಮೀಣ ಮತಗಟ್ಟೆಗಳಲ್ಲಿ ಗರಿಷ್ಠ 1300 ಮತ್ತು ನಗರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಗರಿಷ್ಠ 1400 ಕ್ಕೆ ಮತದಾರರ ಮಿತಿ ನಿಗದಿಗೊಳಿಸಲಾಗಿದೆ ಮತ್ತು ಜಿಲ್ಲೆಯಲ್ಲಿ ಒಟ್ಟು 1145681 ಮತದಾರರಿದ್ದಾರೆ.
ಶೇಕಡಾ 100 ರಷ್ಟು ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಪ್ರಸ್ತುತ ಚುನಾವಣೆಗೆ ಉಪಯೋಗಿಸಲಾಗುತ್ತಿz.É ಜಿಲ್ಲೆಯಲ್ಲಿ ಶೇ.100 ರಷ್ಟು ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಹೊಂದಿರುತ್ತಾರೆ. ಎಲ್ಲ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳ ಮುಖಾಂತರ ಗುರುತಿನ ಚೀಟಿಯನ್ನು ಹಂಚಿಕೆ ಮಾಡಲಾಗಿದೆ.

ಮತದಾರರ ಸೌಲಭ್ಯ ಕೇಂದ್ರಗಳಿಗೆ ಪೋಸ್ಟರುಗಳು: ಪ್ರತಿ ಮತಗಟ್ಟೆಗೆ ತಲಾ 2ರಂತೆ ಪೋಸ್ಟರುಗಳನ್ನು ಅಂಟಿಸಲಾಗುವುದು. ಈ ಪೋಸ್ಟರುಗಳಲ್ಲಿ ಚುನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಗಳ ಮಾಹಿತಿ, ಮತದಾನ ಕೇಂದ್ರದ ವ್ಯಾಪ್ತಿ, ಚುನಾವಣೆಗೆ ಸಂಬಂಧಿಸಿದ ಪ್ರಮುಖ ಅಧಿಕಾರಿಗಳ ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿ ಒಳಗೊಂಡಿರುತ್ತವೆ.

ಅಂಚೆ ಮತಪತ್ರ: ಮತಗಟ್ಟೆ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು, ಎಸ್ ಎಸ್ ಟಿ/ ವಿವಿಟಿ/ವಿಎಸ್‍ಟಿ ತಂಡದ ಅಧಿಕಾರಿಗಳಿಗೆ ಮೈಕ್ರೋ ಆಬ್ಸರ್‍ವರ್/ಆರಕ್ಷಕ ಸಿಬ್ಬಂದಿಗಳು/ ಅಬಕಾರಿ ಸಿಬ್ಬಂದಿಗಳು/ವಾಹನ ಚಾಲಕರು ಹೀಗೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿಗಳಿಗೆ ಅಂಚೆ ಮತಪತ್ರಗಳನ್ನು ವಿತರಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ದಿ03 ವರೆಗೆ ಒಟ್ಟೂ 9418 ಅಂಚೆ ಮತಪತ್ರ ಕೋರಿಕೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಸಾಗಾಟ ವ್ಯವಸ್ಥೆ: ಒಟ್ಟೂ 175 ಸಾರಿಗೆ ಬಸ್ ಮತ್ತು 132 ಮ್ಯಾಕ್ಸಿ ಕ್ಯಾಬ್‍ಗಳನ್ನು ಮತಗಟ್ಟೆ ಅಧಿಕಾರಿಗಳ ಮತ್ತು ಇವಿಎಂ ಗಳ ಸಾಗಾಟಕ್ಕೆ ಉಪಯೋಗಿಸಲಾಗುತ್ತಿದೆ. ಅದೇ ರೀತಿ ಮಾದರಿ ನೀತಿ ಸಂಹಿತೆ ಅನುಷ್ಠಾನ ಮತ್ತು ಚುನಾವಣಾ ವೆಚ್ಚ ಉಸ್ತುವಾರಿ ತಂಡಗಳ ಸಂಚಾರಕ್ಕಾಗಿ 176 ಜೀಪುಗಳನ್ನು ಅಧಿಗ್ರಹಿಸಲಾಗಿದೆ. ಜಿಲ್ಲೆಯ 2 ಮತದಾನ ಕೇಂದ್ರಗಳು (ದೇವಕಾರ ಮತ್ತು ಐಗಳ ಕೂರ್ವೆ) ನಡುಗಡ್ಡೆಯಲ್ಲಿ ನೆಲೆಸಿರುವುದರಿಂದ 2 ದೋಣಿಗಳನ್ನು ಸಹ ಭಾಡಿಗೆಗೆ ಪಡೆಯಲಾಗಿದೆ.

ಮತ ಎಣಿಕೆ ವ್ಯವಸ್ಥೆ : ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯ ಕುಮಟಾ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಕಟ್ಟಡದಲ್ಲಿ ಮತ ಎಣಿಕೆ ಕೇಂದ್ರ ನಿರ್ಮಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಹಾಗೂ ಮತ ಎಣಿಕೆ ಕುರಿತು ನೇಮಿಸಲಾದ ಎಣಿಕೆ ಸಿಬ್ಬಂದಿಗಳು ಹಾಗೂ ಮೈಕ್ರೋ ಆಬ್ಸರ್ವರ್ ಗಳಿಗೆ ದಿನಾಂಕ 14.5.2018 ರಂದು ಡಾ. ಎ.ವಿ.ಬಾಳಿಗಾ ವಾಣಿಜ್ಯ ಕಾಲೇಜು, ಕುಮಟಾದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ.

loading...