ಪಕ್ಷೇತರ ಅಭ್ಯರ್ಥಿ ಅಲೆಗೆ ಕೊಚ್ಚಿಹೋಗಲಿರುವ ವಿಜಯಾನಂದ: ಜಬ್ಬಾರ

0
14
loading...

ಇಳಕಲ್: ಕ್ಷೇತ್ರದಲ್ಲಿ ಕಾಂಗ್ರೆಸನ ಶಾಸಕ ವಿಜಯಾನಂದ ಕಾಶಪ್ಪನವರ ದುರಡಳಿತವು ಜನ ವಿರೋಧಿ ಅಲೆ ಸೃಷ್ಠಿಸಿದ್ದು ಈ ಅಲೆಯಲ್ಲಿ ಕಾಂಗ್ರೆಸ್‍ಕೊಚ್ಚಿ ಹೊಗಲಿದೆ ಎಂದು ಜನತಾದಳ ತಾಲೂಕಾ ಅಧ್ಯಕ್ಷ ಜಬ್ಬಾರ ಕಲಬುರ್ಗಿ ಭವಿಷ್ಯ ನುಡಿದಿದ್ದಾರೆ.
ಪಕ್ಷೇತರ ಅಭ್ಯರ್ಥಿ ಪರ ಜನತಾದಳ ಪಕ್ಷದ ಕಾರ್ಯಕರ್ತರನ್ನದ್ದುೀಶಿಸಿ ಸಭೆಯಲ್ಲಿ ಮಾತನಾಡಿದರು ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷ ಶಾಸಕರನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗದಿರುವದರಿಂದ ಬದಲಾವಣೆ ಬಯಸಿರುವದು ಸಹಜವಾದ ಬೆಳವಣಿಗೆಯಾದೆ ಪಕ್ಷೇತರ ಅಭ್ಯರ್ಥಿ ಎಸ್.ಆರ್ ನವಲಿಹಿರೇಮಠ ರವರು ಸರಳ ಸಜ್ಜನಿಕೆ ಮತ್ತು ಸಹೃದಯಿ, ಮಾನವಿಯ ಅಂತಃಕರಣ ಹೊಂದಿರುವ ವ್ಯಕ್ತಿಯಾಗಿದ್ದು ಕ್ಷೇತ್ರದಲ್ಲಿ ಸಮಾಜದ ಬಡಜನರ ಆರೋಗ್ಯೆಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿ ಜೀವ ಉಳಿಸಿ ಕರುಣಾಮಯಿ ಎನಿಸಿ ಕೊಂಡಿದ್ದಾರೆ ಎಂದರು.

ಜಿಲ್ಲಾ ಜೆಡಿಎಸ್ ವಕ್ತಾರ ರಮೇಶ ಬದ್ನೂರ ಮಾತನಾಡಿ ದುಡಿಯುವ ಕೈಗಳಿಂದ ಅನ್ನ ಕಸಿದು ಬಡವರ ಶಾಪಕ್ಕೆ ಗುರಿಯಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರ ಸೋಲಿಗಾಗಿ ಕ್ಷೇತ್ರ ಜನ ಪ್ರತಿಜ್ಞೆಮಾಡಿದ್ದು ಭರ್ಜರಿ ಪ್ರಚಾರದಲ್ಲಿ ತೊಡಗಿರುತ್ತಾರೆ ನವಲಿಹಿರೇವ್ಮಠರ ಅಲೆಯ ಅಭರಕ್ಕೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ನಡುಕ ಶುರುವಾಗಿದೆ ಕಾಂಗ್ರೇಸ್ ಹಾಗೂ ಬಿಜೆಪಿಗೆ ಸೂಲು ಕಬ್ಬಿಟ್ಟ ಬುತ್ತಿ ಎಂದರು. ಸಭೆಯಲ್ಲಿ ಕ್ಷೇತ್ರದ ವಿವಿಧ ಭಾಗಳಿಂದ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

loading...