ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಗುಂಡು ಹಾಕಬೇಕು:ಅಂಗಡಿ

0
7
loading...

ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಗುಂಡು ಹಾಕಬೇಕು:ಅಂಗಡಿ

ಕನ್ನಡಮ್ಮ ಸುದ್ದಿ-ಬೆಳಗಾವಿ 10:ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಮತ್ತು ದೇಶ ದ್ರೋಹದ ಕೃತ್ಯ ಎಸಗುವವರ ಬೆನ್ನಿಗೆ ನಿಲ್ಲುವ ಶಾಸಕ ಪಿರೋಜ್ ಸೇಠ ಅವರಿಗೆ ದೇಶದ ಮೇಲೆ ಗೌರವವಿಲ್ಲ ಇಂತವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಮತ್ತು ಮೊನ್ನೆ ನಡೆದ ಕಾಂಗ್ರೆಸ್ ಪ್ರಚಾರದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರಿಗೆ ಗುಂಡು ಹಾಕ ಬೇಕು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಇಂದು ನಗರದ ವಿಭಾಗೀಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನ ಪರ ಜೈಕಾರ್ ಹಾಕುವ ದೇಶ ದ್ರೋಹಿಗಳಿಗೆ ಬೆಂಬಲ ನೀಡುವ ಕಾಂಗ್ರೆಸ್ ಸರಕಾರದ ಶಾಸಕರು ,ಕನ್ನಡದ ಅಭ್ಯರ್ಥಿ ಎಂದು ಹೇಳುತ್ತಾರೆ ಆದರೆ ಇವರಿಗೆ ಕನ್ನಡ ಮಾತನಾಡಲು ಬರವುದಿಲ್ಲ ,
ನಗರದಲ್ಲಿ ಅಕ್ರಮ ಚುಟುವಟಿಕೆಗಳಿಗೆ ಸಾಥ್ ನೀಡುವ ಶಾಸಕ ಸೇಠ ಅವರನ್ನು ಈ ಬಾರಿ ಮತದಾರರು ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಅವರನ್ನು ಬೆಂಬಿಲಿಸುವ ಮೂಲಕ ಸೇಠ್ ಅವರನ್ನು ಸೋಲಿಸಬೇಕೆಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದಲ್ಲಿ ನಡೆದ ಈ ದೇಶ ದ್ರೋಹದ ಘಟನೆ ಬಗ್ಗೆ ಮುಖ್ಯಮಂತ್ರಿಗಳು ಗಮನಕ್ಕೆ ತರಲಾಗುವುದು ,
ಬೆಳಗಾವಿ ಅಭಿವೃದ್ಧಿಗೆ ಹಣ ಕೊಟ್ಟುವರು ಬಿಜೆಪಿ ಶಾಸಕರು ಮತ್ತು ಯಡಿಯೂರಪ್ಪ ಸರಕಾರ,ಬೆಳಗಾವಿ ರಾಣಿ ಚೆನ್ನಮ್ಮ ವಿವಿ,ಕೇಂದ್ರಿಯ ವಿದ್ಯಾಲಯ,,ನಗರದ ಎಲ್ಲ ಓವರ್ ಬ್ರಿಜ್ ನಿರ್ಮಾಣ ಮಾಡಿದ್ದು ನಾವು ಅದಕ್ಕೂ ಶಾಸಕ ಅಡ್ಡಿ ಪಡೆಸಿದರು ,ಮೋದಿ ಮತ್ತು ನನ್ನ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಆಗಿವೆ .ಬೆಳಗಾವಿ ವಿಮಾನ ನಿಲ್ದಾಣ ಸುಧಾರಣೆ ಮಾಡಿದ್ದು ನಾನು ,ಸ್ಮಾರ್ಟ್ ಸಿಟಿ ಕೊಡುಗೆ ನಮ್ಮದು ಅದಕ್ಕೂ ,ಶಾಸಕರು ನಗರಪಾಲಿಕೆ ಹಸ್ತಕ್ಷೇಪ ಮಾಡುತ್ತಾರೆ ,ಬೆಳಗಾವಿ ನಗರದ ಅಭಿವೃದ್ದಿಗೆ ಶಾಸಕ
ಪಿರೋಜ್ ಸೇಠ ಅವರ ಕೋಡುಗೆ ಏನು ?ರಾಜ್ಯ ಸರಕಾರ ಕೋಡುಗೆ ಏನು ?ಎಂದು ಕಾಂಗ್ರಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಸಂಸದ ಪ್ರಭಾಕರ ಕೋರೆ ಮಾತನಾಡಿ ದೇಶದ ಬಗ್ಗೆ ಗೌರವವಿಲ್ಲದ ಕಾಂಗ್ರಸ್ ಅಭ್ಯರ್ಥಿಗಳನ್ನು ಬೆಂಬಲಿಸ ಬಾರದು ಎಂದು ಮನವಿ ಮಾಡಿಕೊಂಡರು.

ಜಿರಲಿ ಮಾತನಾಡಿ ,ನಗರದಲ್ಲಿ ಹಲವು ಬಾರಿ ಈ ರೀತಿ ದೇಶ ವಿರೋಧಿ ಹೇಳಿಕೆ ನಡೆದಾಗಲೂ ಇಲ್ಲಿವರೆಗೂ ಕ್ರಮ ಜರುಗಿಲ್ಲ,ಮೊನ್ನೆ ನಡೆದ ಘಟನೆ ಇಡಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡೆಸುತ್ತಿದ್ದಾರೆ ,ರಾಜಕೀಯ ಉದ್ದೇಶ ಕ್ಕಾಗಿ ನಡೆದಿದೆ ಎನ್ನುವುದು ಸುಳ್ಳು ,ಈಗಾಗಲೆ ನಗರದ ವಕೀಲರು ಕೇಸ್ ದಾಖಲಿಸಿದ್ದಾರೆ .ಆದರೂ ಸೇಠ್ ಇದು ಸುಳ್ಳು ಎಂದು ಹೇಳತ್ತಿದ್ದಾರೆ,ದೇಶ ಭಕ್ತರಾಗಿದ್ದರೆ ಶಾಸಕರೆ ಹಂತವರ ಮೇಲೆ ಕ್ರಮಕ್ಕೆ ಆಗ್ರಹಿಸಬೇಕಿತ್ತು,ಆದರೆ ಶಾಸಕರು ದೇಶ ದ್ರೋಹಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಸೇಠ ವಿರುದ್ದ ಆರೋಪಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ಜರಲಿ,ಉತ್ತರ ಮತ ಕ್ಷೇತ್ರದ ಅಭ್ಯರ್ಥಿ ಅನಿಲ ಬೆನಕೆ,ರಾಜೇಂದ್ರ ಹರಕುಣಿ,ಕಿರಣ ಜಾಧವ ಉಪಸ್ಥಿತರಿದ್ದರು.

loading...