ಪಾರದರ್ಶಕ-ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಿ

0
14
loading...

ಬಸವನಬಾಗೇವಾಡಿ: ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಜಿಪಂ ಉಪ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ದುರ್ಗೇಶ ರುದ್ರಾಕ್ಷಿ ಹೇಳಿದರು.
ಸ್ಥಳಿಯ ಮಿನಿ ವಿಧಾನಸೌದ ತಹಶೀಲದಾರ ಕಛೇರಿಯಲ್ಲಿ ನಡೆದ ಚುನಾವಣಾ ಅಭ್ಯರ್ಥಿಗಳ ಹಾಗೂ ಅಭ್ಯರ್ಥಿಗಳ ಏಜೆಂಟರ್ ಸಭೆಯನ್ನುದ್ದೆಶಿಸಿ ಮಾತನಾಡಿದ ಅವರು ಪ್ರಚಾರ ವಾಹನ ಹಾಗೂ ಸಭೆಗಳ ಕುರಿತಾಗಿ ಮುಂಚಿತವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು ಇಲ್ಲದಿದ್ದರೆ ನಿರ್ದಾಕ್ಷಿಣವಾಗಿ ಕ್ರಮಕೈಗೊಳ್ಳಲಾಗುವದು ಪಾರದರ್ಶಕ ಚುನಾವಣೆಗೆ ಸಹಕರಿಸಬೇಕೆಂದು ಹೇಳಿದರು. ಚುನಾವಣೆ ವಾಹನ ಬಳಕೆಗೆ ಬೆಳಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆವರೆಗೆ ಬಳಸಲು ಆಯೋಗವು ಅನುಮತಿ ನೀಡಿದೆ, ಕರಪತ್ರಗಳ ಮುದ್ರಣಕ್ಕೆ ಅನುಮತಿ ಅವಶ್ಯಕವಾಗಿದ್ದು ಕರಪತ್ರಗಳ ಮುದ್ರಣ ಸಂಖ್ಯೆ ಹಾಗೂ ಮುದ್ರಕರ ವಿಳಾಸವನ್ನು ಕಡ್ಡಾಯವಾಗಿ ಮುದ್ರಿಸಬೇಕು, ಊಟೋಪಚಾರ ವ್ಯವಸ್ಥೆ ಮಾಡಿದ ಪಕ್ಷದಲ್ಲಿ ಅಭ್ಯರ್ಥಿ ಖರ್ಚಿನಲ್ಲಿ ಸೇರಿಸಲಾಗುವದು ಖರ್ಚು-ವೆಚ್ಚವನ್ನು ನಿತ್ಯವೂ ನೀಡಬೇಕು, ಒರ್ವ ಅಭ್ಯರ್ಥಿ ಗರಿಷ್ಠ 28ಲಕ್ಷ ಖರ್ಚು ಮಾಡಲು ಅವಕಾಶವಿದೆ ಎಂದು ಹೇಳಿದರು.

ಚುನಾವಣಾ ಆಯೋಗವು ಕಟ್ಟಿನಿಟ್ಟಿನ ಕ್ರಮವನ್ನು ಕೈಗೊಂಡಿದ್ದು ಈಗಾಗಲೇ ಮತಕ್ಷೇತ್ರದ ಗಡಿಯಲ್ಲಿ ಚೆಕ್‍ಪೋಸ್ಟಗಳನ್ನು ನಿರ್ಮಿಸಿ ಜಾಗೃತಿವಹಿಸಲಾಗಿದ್ದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಅಂತಹ ಅಭ್ಯರ್ಥಿಯು ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಯಿಂದ ಅನರ್ಹತೆಗೊಳಿಸುವ ಸಾಧ್ಯತೆಯಿದ್ದು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು, ಕರಪತ್ರಗಳ ಮುದ್ರಣದಲ್ಲಿ ಸಂಖ್ಯೆ ನಮೂದಸದೇ ಇಲ್ಲವೆ ಅನಧಿಕೃತವಾಗಿ ಹೆಚ್ಚಿಗೆ ಮುದ್ರಣ ಕಂಡು ಬಂದಲ್ಲಿ ಅಭ್ಯರ್ಥಿ ಹಾಗೂ ಮುದ್ರಕರ ಮೇಲೆ ಕಾನೂನುಕ್ರಮಕೈಗೊಳ್ಳಲಾಗುವದು ಎಂದು ಹೇಳಿದರು.
ಜನರಲ್ ಅಬ್ಜರ್ವರ ಹಾಗೂ ಜಾಖಂಡ್ ಐಎಎಸ್ ಅಧಿಕಾರಿ ಭೀರ್ಸೆ ಓರಾಣ್, ತಹಶೀಲದಾರ ಸುಭಾಸ ಸಂಪಗಾವಿ, ಡಿವೈಎಸ್‍ಪಿ ಮಹೇಶ್ವರಗೌಡ, ಸಿಪಿಐ ಕರುಣೇಶ್ವರಗೌಡ, ತಾಪಂ ಇಓ ಸಿ.ಬಿ.ಮೇಗೇರಿ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೆಂಗನಾಳ, ಲಕ್ಷ್ಮಿಂಬಾಯಿ ಗುದ್ದಿ, ವಿವಿಧ ಪಕ್ಷದ ಮುಖಂಡರಾದ ಸಂಗಯ್ಯ ಕಂದಗಲ್, ಎನ್.ಎಸ್.ಪಾಟೀಲ, ಸದಾನಂದ ಬಶೆಟ್ಟಿ, ಶ್ರೀಧರ ಹೊಸಮನಿ, ರಾಜುಗೌಡ ಪಾಟೀಲ, ಮಲ್ಲಿಕಾರ್ಜುನ ಅವಟಿ, ಸಂಗಮೇಶ ವಾಡೇದ, ರವಿ ರಾಠೋಡ, ಶರೀಫ್ ಉಳ್ಳಾಗಡ್ಡಿ ಇತರರು ಇದ್ದರು.

loading...