`ಪುರಾತನ-ನೂತನ ಸೇತುವೆ’ ಮಹಾಂತ ಸ್ವಾಮೀಜಿ: ಜ.ಡಾ.ತೋಂಟದ ಶ್ರೀಗಳು

0
25
loading...

ಗದಗ: ಲಿಂಗಾಯತ ಧರ್ಮ ಸ್ವೀಕರಿಸಿದ ಮೇಲೆ ತುಲಾಭಾರ, ಆಸೆ-ಆಮೀಶಗಳಿಂದ ದೂರವಿರಬೇಕು ಜ್ಯೋತಿ ಸೋಂಕಿದ ಬತ್ತಿ ಎಲ್ಲಾ ಜ್ಯೋತಿ ಅಪ್ಪುವಯ್ಯ ಎಂಬಂತೆ ಗುರುವಿನ ಸಂಗ ಪಾಮರನನ್ನು ಗುರು ಸ್ಥಾನಕ್ಕೆ ಕರೆದೊಯುತ್ತದೆ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಪೂಜ್ಯ ಇಳಕಲದ ಡಾ.ಮಹಾಂತ ಶಿವಯೋಗಿಗಳನ್ನು ನೆನೆಯುತ್ತಾ ಬಸವ ಪರಂಪರೆಯ ಒಂದು ಕೊಂಡಿಯಾಗಿ, ಜನಪರ ಕಾಯಕ ಮಾಡಿದ ಸ್ವಾಮೀಜಿಗಳಾಗಿದ್ದರು, ಪುರಾತನ ನೂತನ ಸೇತುವೆ ಅವರಾಗಿದ್ದರು ಶಾಖಾಮಠಗಳಲ್ಲಿ ಹಿಂದುಳಿದ ವರ್ಗದವರಿಗೆ ವಿದ್ಯಾರ್ಜನೆಗೈದು, ಬಸವತತ್ವ ಬೋಧಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಮಹಾಂತ ಜೋಳಿಗೆಯ ಹರಿಕಾರರಾದ ಇವರು, ದೇಶದಾದ್ಯಂತ ಸಂಚರಿಸಿ ವ್ಯಸನಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಸಾಕಷ್ಟು ಪರಿಶ್ರಮಿಸಿದ್ದಾರೆ.
ಅದೇ ರೀತಿ ಗಿರಡ್ಡಿ ಗೋವಿಂದರಾಜ ಅವರು ಹೋರಾಟದ ಮುಖೇನ ಸಾಹಿತ್ಯವನ್ನು ಬೆಳೆಸಿದವರು. ಧಾರವಾಡ ಸಾಹಿತ್ಯ ಸಂಭ್ರಮವನ್ನು ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಡಾ.ಮಹಾಂತ ಶಿವಯೋಗಿಗಳ ಬದುಕು ಮತ್ತು ಸಾಧನೆ ಕುರಿತು ಶಂಕ್ರಣ್ಣ ಅಂಗಡಿ ಉಪನ್ಯಾಸ ನೀಡಿ ಮಹಾಂತ ಶ್ರೀಗಳು ಮಠದ ಅಂಗಳವನ್ನು ಮನೆಯಂಗಳಕ್ಕೆ ಮುಟ್ಟಿಸಿದವರು. ಚಿತ್ತರಗಿ ಪೀಠಕ್ಕೆ ಪೀಠಾಧ್ಯಕ್ಷರಾಗಿ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೇ ವಚನ ಕಟ್ಟುಗಳನ್ನು ಇಟ್ಟು ಮೆರೆಸಿದ್ದು ಇವರ ಬಸವತತ್ವ ಬದ್ಧತೆಗೆ ಹಿಡಿದ ಕೈಗನ್ನಡಿ. ಹಗಲು-ರಾತ್ರಿ ಸಂಚರಿಸಿ ಎನ್ನದೇ ಶರಣ ಸಂಸ್ಕøತಿಯ ಅಭಿವೃದ್ಧಿಗೆ ಕಾರಣಿಕರ್ತರಾಗಿದ್ದರು ಅವರ ಜನ್ಮದಿನವನ್ನು ‘ವ್ಯಸನ ಮುಕ್ತ ದಿನ’ ವನ್ನಾಗಿ ಆಚರಿಸಲು ಸರ್ಕಾರ ಘೋಷಿಸಿದೆ. ಎಂದರು.
‘ಡಾ.ಗಿರಡ್ಡಿ ಗೋವಿಂದರಾಜ ಬದುಕು-ಬರಹ’ ಕುರಿತು ಪ್ರಾ.ಕೆ.ಬಿ ತಳಗೇರಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಾ ಕನ್ನಡ ಮತ್ತು ಆಂಗ್ಲ ಭಾಷೆ ಎರಡರಲ್ಲಿಯೂ ಆಳವಾದ ಪಾಂಡಿತ್ಯವನ್ನು ಹೊಂದಿದ್ದ ಗಿರಡ್ಡಿಯವರು ಕ.ವಿ.ವಿಯ ಸಾಹಿತಿಗಳಲ್ಲಿ ಇಂಗ್ಲೆಂಡಿನಲ್ಲಿ ಭಾಷಾ ವಿಜ್ಞಾನದ ಕುರಿತು ಅಧ್ಯಯನ ಮಾಡಿದ ಪ್ರಪ್ರಥಮರು ಎಂಬ ಹೆಗ್ಗಳಿಕೆಗೆ ಶ್ರೀಯುತರು ಪಾತ್ರರಾಗಿದ್ದಾರೆ ಎಂದರು.

ಶ್ರೀಮಠದಿಂದ ಪ್ರಕಟಿಸಿದ ಚಿತ್ತರಗಿ ಗಂಗಾಧರಶಾಸ್ತ್ರಿಗಳು ಪುಸ್ತಕವನ್ನು ಶಾಂತಗೌಡ ಮರಿಗೌಡರ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ವಿರೇಂದ್ರ ಖೋತ, ಎಂ.ಎಂ ಖೋತ, ಬಾಹುಬಲಿ ನರವಡೆ, ಪ್ರಕಾಶ ಬಾಗಾಯಿ, ಆರ್.ವಿ ಪಾಟೀಲ ಭಾಗವಹಿಸಿದ್ದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಇವರಿಂದ ವಚನ ಸಂಗೀತ ಜರುಗಿತು. ಸುಮಾ ಶಾವಿ ಧರ್ಮಗ್ರಂಥ ಪಠಿಸಿದರು, ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು, ಪ್ರೊ. ಎಸ್.ಯು ಸಜ್ಜನಶೆಟ್ಟರ್ ನಿರೂಪಿಸಿದರು.

loading...