ಪ್ರತಿ ಕುಟುಂಬದಲ್ಲೊಬ್ಬರು ಸೇನೆಯ ಸೇವೆಯಾಗಲಿ

0
16
loading...

ರಬಕವಿ-ಬನಹಟ್ಟಿ: ದೇಶದಲ್ಲಿಯೇ ಅತಿ ಪಾವಿತ್ರ್ಯತೆ ಹಾಗು ಭಾರತ ಮಾತೆಯ ಸೇವೆ ಒದಗಿಸುವ ಕ್ಷೇತ್ರವಾಗಿರುವ ಭಾರತೀಯ ಸೇನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಸೇನೆಯಲ್ಲಿ ಒಂದೇ ಕುಟುಂಬದ ಸಹೋದರರಿಬ್ಬರು ನೇಮಕಗೊಂಡಿರುವದು ಹೆಮ್ಮೆ ತರುವಂತದ್ದು ಎಂದು ತೇರದಾಳ ಶಾಸಕ ಸಿದ್ದು ಸವದಿ ಹೆಮ್ಮೆ ವ್ಯಕ್ತಪಡಿಸಿದರು.
ರಬಕವಿಯ ವಿಜಯ ಬಕ್ಕನ್ನವರರ ಮಕ್ಕಳಾದ ಅಮೃತ ಹಾಗು ವಿಜಯ ಸಹೋದರರು ಸೇನೆಗೆ ಭರ್ತಿಯಾದ ಸಂದರ್ಭ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಯೊಂದು ಕುಟುಂಬದಲ್ಲಿಯೂ ಭಾರತೀಯ ಸೇನೆಯಲ್ಲಿ ಸೇವೆ ಮಾಡುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಒದಗಿಸುತ್ತಿರುವದು ಗಮನಾರ್ಹ ಅಂಶವಾಗಿದೆ ಎಂದರು. ಇದೇ ಸಂದರ್ಭ ಯಲ್ಲಪ್ಪ ಕಟಗಿ, ಆನಂದ ಕಂಪು, ಸುರೇಶ ಅಕ್ಕಿವಾಟ, ಸಂಜಯ ತೆಗ್ಗಿ, ಶ್ರೀಶೈಲ ಭಾವಿಕಟ್ಟಿ, ಸತೀಶ ಬಂಗಿ, ಕುಮಾರ ಕದಮ ಸೇರಿದಂತೆ ಅನೇಕರಿದ್ದರು.

loading...