ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯ ಕರಪತ್ರ ಬಿಡುಗಡೆ

0
14
loading...

ನರಗುಂದ: 2018-19 ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯನ್ನು ಪ್ರಸಕ್ತ ವರ್ಷವೂ ಕಾರ್ಯಾರಂಭಗೊಳಿಸಲಾಗಿದೆ. ಇದರ ಸಂಪೂರ್ಣ ಮಾಹಿತಿಯ ಪ್ರಕಟಣಾ ಕರಪತ್ರವನ್ನು ಶಾಸಕ ಸಿ.ಸಿ. ಪಾಟೀಲ ಸೋಮವಾರ ತಮ್ಮ ನಿವಾಸದ ಬಿಜೆಪಿ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ, ಬರುವ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಹೊಬಳಿ ಮಟ್ಟಕ್ಕೆ ನೀರಾವರಿ ಸೂರ್ಯಕಾಂತಿ ಮತ್ತು ನೀರಾವರಿ ಹತ್ತಿ ಬೆಳಗಳಿಗೆ ವಿಮಾ ಯೋಜನೆ ಅಳವಡಿಸಲಾಗಿದೆ. ಗ್ರಾಮ ಪಂಚಾಯತಿ ಮಟ್ಟಕ್ಕೆ ನೀರಾವರಿ ಮುಸುಕಿನ ಜೋಳ, ಮಳೆ ಆಶ್ರಿತ ಹೆಸರು ಈ ಯೋಜನೆ ವ್ಯಾಪ್ತಿಯಲ್ಲಿ ಇರುವುದರಿಂದ ಬೆಳೆ ವಿಮೆ ಅಡಿ ರೈತರು ತಮ್ಮ ಹೆಸರು ನೊಂದಾಯಿಸಲು 31.7. 2018 ಆಗಿದೆ. ಸೂರ್ಯಕಾಂತಿ ಬೆಳೆಗೆ 14.8.2018 ಆಗಿದೆ. ಬೆಳೆ ವಿಮೆಯು ಸಾಲಪಡೆದ ರೈತರಿಗೆ ಕಡ್ಡಾಯವಾಗಿದ್ದು ಸಾಲ ಪಡೆಯದೇ ಇರುವ ರೈತರಿಗೆ ಐಚ್ಚಿಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ/ ತೋಟಗಾರಿಕೆ ಇಲಾಖೆ ಇಲ್ಲವೇ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ರೈತರಿಗೆ ಸೂಚಿಸಿದರು. ಇದರ ಪ್ರಯೋಜನ ಪಡೆದುಕೊಳ್ಳಲು ತಾಲೂಕಿನ ಎಲ್ಲ ರೈತರಿಗೂ ನೆರವಾಗುವಂತೆ ಪ್ರಚಾರಪಡಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ಧೆಶಕ ಚನ್ನಪ್ಪ ಅಂಗಡಿ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಪುರಸಭೆ ಸದಸ್ಯ ಕಿರಣ ಮುಧೋಳೆ, ಅಶೋಕ ಪತ್ರಿ, ಪಾಟೀಲ. ಶಿವನಗೌಡ ಹೆಬ್ಬಳ್ಳಿ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

loading...