ಪ್ರಧಾನಿವರ ಜನಪರ ಕಾರ್ಯಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ಯೋಗಿ ಆದಿತ್ಯನಾಥ

0
12
loading...

ಇಂಡಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನಪರ ಯೋಜನೆಗಳು ಹಾಗೂ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಆದ್ದರಿಂದ ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲಗೆ ಮತ ನೀಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಮನವಿ ಮಾಡಿದರು.
ಪಟ್ಟಣದ ಸಿಂದಗಿ ರಸ್ತೆಯ ಸದಾಶಿವ ನಗರದ ವಿಶಾಲವಾದ ಮೈದಾನದಲ್ಲಿ ಆಯೋಜಿರುವ 2018 ರ ವಿಧಾನಸಭಾ ಚುನಾವಣೆಯ ನಿಮಿತ್ತ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಭಾರತ ದೇಶವು ಸಂತರ ಹಿಂದೂ ಧರ್ಮವನ್ನು ಉಳಿಸಿದ ಶಿವಾಜಿ ಮಹಾರಜರ ಆಳಿದ ದೇಶವಾಗಿ ಇಲ್ಲಿ ಹಿಂದೂಗಳೇ ಸಾಮ್ರಾಟರು ಇಲ್ಲಿ ಬಸವಣ್ಣ ಹಾಗೂ ಇನ್ನಿತರ ಸಂತರ ನೆಲೆ ಬೀಡಾಗಿದೆ. ಆದರೆ ಟಿಪ್ಪು ಸುಲ್ತಾನರು ದೇಶಭಕ್ತನಲ್ಲ. ಅವನನ್ನು ಕಾಂಗ್ರೆಸ್‌ನವರು ತಮ್ಮ ಓಟಿಗಾಗಿ ಅವನ ಜಯಂತಿಯನ್ನು ಆಚರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅದನ್ನು ನಮ್ಮ ಪಕ್ಷ ಬಂದ ಮೇಲೆ ನೀಲ್ಲುಸುವುದೇ ಸೂಕ್ತ ಕೆಲಸವಾಗಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರವು ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡಲಾಗುವುದು ಅಲ್ಲದೇ ರೈತ ಪರ ಯೋಜನೆಗಳನ್ನು ಜಾರಿಗೆಗೊಳಿಸಲಾಗುವುದು ಎಂದು ತಿಳಿಸಿದ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜನಪರ ಹತ್ತು ಹಲವಾರು ಯೋಜನೆಗಳು ಜಾರಿಗೆ ತಂದಿದ್ದು ಆದರೆ ಈ ಯೋಜನೆಗಳು ಕರ್ನಾಟಕದಲ್ಲಿ ಪ್ರಾರಂಭವೇ ಆಗಿಲ್ಲ. ಕೇಂದ್ರ ಸರಕಾರವು ಇದಕ್ಕೆ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಲಾಗಿದೆ ಆದರೆ ಆ ಅನುದಾನವು ಕಾಂಗ್ರೆಸ್‌ ಸರಕಾರ ಸದುಪಯೋಗ ಮಾಡದೇ- ಸಂಪೂರ್ಣವಾಗಿ ಭ್ರಷ್ಠಾಚಾರ ಮಾಡಿದೆ. ಆದ್ದರಿಂದ ಈಗ ದೇಶದದಲ್ಲಿ 22 ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ನಡೆಯುತ್ತಿದೆ.
ಅಲ್ಲದೇ ರಾಹುಲ ಗಾಂಧಿಜಿ ಅವರತು ನಾನೇ ಪ್ರಧಾನಿ ಆಗುತ್ತೇನೆ ಎಂದು ಹೇಳುತ್ತಿರುವವದು ವಂಶಾವಳಿಯಾಗುವ ಪದ್ಧತಿ ಇರುವುದು ಕಾಂಗ್ರೆಸ್‌ ಪಕ್ಷದಲ್ಲಿದೆ. ಆ ಪಕ್ಷವು ಪ್ರೌವೈಟ್‌ ಲಿಮಿಟೆಡ್‌ ಕಂಪನಿಯಾಗಿದೆ. ಆದರೆ ಬಿಜೆಪಿ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಶಾಸಕ, ಮಂತ್ರಿ, ಸಿಎಂ ಹಾಗೂ ಪ್ರಧಾನಿಯಾಗುವ ಅವಕಾಶವಿದೆ ಆದ್ದರಿಂದ ಬಂಧುಗಳೇ ಮೋದಿ ಪ್ರಧಾನಿ ಯಾಗಬೇಕಾದರೆ ಮತ್ತು ಬಿಎಸ್‌ ಯಡಿಯೂರೆಪ್ಪ ಮುಖ್ಯಮಂತ್ರಿ ಯಾಗಬೇಕಾದರೆ ನೀವು ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಅವರು ಪ್ರಸ್ತಾವಿಕವಾಗಿ ಮಾತನಾಡಿ ನಾನು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದೇನೆ. ನಾನು ಶಾಸಕನಾದರೆ ಕಾರ್ಯಕರ್ತರಾದಂತೆ ಅದಕ್ಕೆ ಕೆಲವು ಯಾರಿಗಾದರೂ ಬಿಜೆಪಿ ಟಿಕೆಟ ನೀಡಲಿ ಅವರ ಗೆಲವಿಗೆ ಶ್ರಮಿಸುತ್ತೇವೆ ಎಂದು ಮಾತನಾಡಿದರು. ಆದರೆ ಈಗ ಅವರು ಬಿಜೆಪಿ ಪರ ಮಾತನಾಡುವುದೇ ಬಿಟ್ಟಿದ್ದಾರೆ. ಆದರೆ ನಾನು ಯಾವುದೇ ಜಾತಿಗೆ ಸೇರಿದವನಲ್ಲ. ಆದರೆ ನಾನು ಒಬ್ಬ ಹಿಂದೂನಾಗಿದ್ದೇನೆ. ನಿಮಗೆ ಕೈ ಮುಗಿದು ಕೇಳಿ ಕೊಳ್ಳುತ್ತೇನೆ ಜಾತಿ= ರಾಜಕಾರವನ್ನು ಬಿಟ್ಟು ದೇಶದ ಸುಭದ್ರತೆಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಉಸ್ತುವಾರಿ ವಿಜೇಂದ್ರ ಸಿಂಗ್‌ ,ಬಿಜೆಪಿ ಮಂಡಲದ ಅಧ್ಯಕ್ಷ ಕಾಸೂಗೌಡ ಬಿರಾದಾರ, ಶಂಕರಗೌಡ ಪಾಟೀಲ, ಶೀಲವಂತ ಉಮರಾಣಿ, ಶ್ರೀಶೈಲಗೌಡ ಬಿರಾದಾರ, ಅನೀಲ ಜಮಾದಾರ, ಸುರೇಶ ರಬಶೆಟ್ಟಿ, ಬಿ.ಎಸ್‌ .ಪಾಟೀಲ, ಸಿದ್ದಲಿಂಗ ಹಂಜಗಿ, ಪುಟ್ಟುಗೌಡ ಪಾಟೀಲ, ರವಿಕಾಂತ ಬಗಲಿ, ಸತೀಶ ಕುಂಬಾರ ಸೇರಿದಂತೆ ಮತ್ತಿತ್ತರು ಇದ್ದರು.

loading...