ಪ್ರಧಾನಿ ಮೋದಿಗೆ ಕಿತ್ತೂರು ರಾಣಿ ಚನ್ನಮ್ಮ ಸ್ಮರಣ ಸಂಚಿಕೆ ನೀಡಿ ಸನ್ಮಾನ

0
18
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಮಂಗಳವಾರ ನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾ ಬಿಜೆಪಿಯಿಂದ ಸನ್ಮಾನಿಸಿ ಅವರಿಗೆ ಕಿತ್ತೂರ ರಾಣಿ ಚನ್ನಮ್ಮ ಪೊಟೋದ ಸ್ಮರಣಿಕೆಯನ್ನು ಕಾಣಿಕೆಯಾಗಿ ನೀಡಲಾಯಿತು. ಸಂಸದ ಕರಡಿ ಸಂಗಣ್ಣ, ಬಿಜೆಪಿ ಅಭ್ಯರ್ಥಿಗಳಾದ ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಬಸವರಾಜ ದಡೇಸ್ಗೂರ, ದೊಡ್ಡನಗೌಡ ಪಾಟೀಲ, ಅಮರೇಶ ಕರಡಿ, ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ನರಸಿಂಗರಾವ್‌ ಕುಲಕರ್ಣಿ, ಸೇರಿದಂತೆ ಇತರರು ಪ್ರಧಾನಿಯವರನ್ನು ಸನ್ಮಾನಿಸಿದರು.
ದುರಾಡಳಿತ ಸರ್ಕಾರ-ಸಂಸದ ಕರಡಿ ಸಂಗಣ್ಣ : ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸಿದೆ, ಇದೊಂದು ದುರಾಡಳಿತ ಸರಕಾರವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ರಾಜ್ಯದಲ್ಲಿ 3.36 ಕೋಟಿ ಮನೆ ಕಟ್ಟುತ್ತೇವೆ ಎಂದು ಷೋಷಣೆ ಮಾಡಿದ್ದರು ಆದರೆ 5 ವರ್ಷದ ಆಡಳಿತ ಪೂರ್ಣಗೊಂಡರು, ಕೇವಲ 35 ಸಾವಿರ ಮನೆಗಳನ್ನು ಮಾತ್ರ ಕಟ್ಟಿದೆ. ಕೃಷ್ಣ ಮೇಲ್ದಂಡೆ ಯೋಜನೆಗೆ 50 ಸಾವಿರ ಕೋಟಿ ಹಣ ಮೀಸಲಿಡುತ್ತೇವೆ ಎಂದು ಹೇಳಿ ಇದುವರೆಗೂ ಖರ್ಚು ಮಾಡಿರುವುದು ಕೇವಲ 6 ಸಾವಿರ ಕೋಟಿ ಮಾತ್ರ. ಖರ್ಚು ಮಾಡಿ ಕೈ ತೊಳೆದುಕೊಂಡಿದೆ ಎಂದು ಹೇಳಿದರು ಯಲಬುರ್ಗಾ ಕ್ಷೇತ್ರದ ಅಭ್ಯರ್ಥಿ ಹಾಲಪ್ಪ ಆಚಾರ ಮಾತನಾಡಿ, ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್‌ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಅಭಿವೃದ್ಶಿ ಮಾಡದೇ ಕಾಲಹರಣ ಮಾಡಿ ರೈತರು ಕಣ್ಣಿರಿನಲ್ಲಿ ಕೈ ತೊಳೆಯುಂತೆ ಮಾಡಿದರು. ಮುಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ನೀರಾವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.
ಕನಕಗಿರಿ ಕ್ಷೇತ್ರದ ಅಬ್ಯರ್ಥಿ ಬಸವರಾಜ ದಡೆಸೂಗೂರು ಮಾತನಾಡಿ, ಈ ಭಾಗದಲ್ಲಿ ರೈತರು ನೀರಿಗಾಗಿ ಪರಿತಪಿಸಬೇಕಾಗಿದೆ. ಮುಂದೆ ಬಿಜೆಪಿ ಸರಕಾರ ಬಂದರೆ ಕೃಷ್ಣಾ ಬಿ.ಸಿಕಿಂ ಯೋಜನೆ ಸೇರಿದಂತೆ ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಸರಕಾರ ಮುಂದಾಗಲಿದೆ. ಕೇಂದ್ರ ನಾಯಕರ ಕಾಲು ಹಿಡಿದಾದರು ಲಕ್ಷ ಕೋಟಿ ಅನುದಾನ ತಂದು ನೀರಾವರಿಗೆ ಆಧ್ಯತೆ ನೀಡಲಾಗುವುದು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ ಅದಕ್ಕೆ ಎಲ್ಲಾ ಶಾಸಕರು ಸಾಥ ನೀಡಿ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಕೊಪ್ಪಳ ಕ್ಷೇತ್ರದ ಅಬ್ಯರ್ಥಿ ಅಮರೇಶ ಕರಡಿ ಮಾತನಾಡಿ, ಗ್ರಾಮದಲ್ಲೇ ತುಂಗಭದ್ರಾ ಜಲಾಶಯ ಇದೆ. ರಾಜ್ಯದಲ್ಲಿ 50ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಜಲಾಶಯದಲ್ಲಿನ ಹೂಳು ತೆಗೆಸುವ ಕಾರ್ಯ ಮಾಡಲಿಲ್ಲ. 130 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸಧ್ಯ 100 ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಾಗುತ್ತಿದೆ. ಅಷ್ಟು ವರ್ಷಗಳ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ ಸರ್ಕಾರ ಮಾತ್ರ ಈ ಭಾಗದ ಜೀವನಾಡಿಯ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಅಭ್ಯರ್ಥಿಗಳಾದ ಅಮರೇಶ ಕರಡಿ, ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ದೊಡ್ಡನಗೌಡ ಪಾಟೀಲ್‌, ಬಸವರಾಜ ದಡೆಸೂಗೂರು, ಚುನಾವಣೆ ಉಸ್ತುವಾರಿ ಪುರಂದೇಶ್ವರಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ನರಸಿಂಗರಾವ್‌ ಕುಲಕರ್ಣಿ ಮತ್ತಿರರು ಉಪಸ್ಥಿತರಿದ್ದರು.

loading...