ಪ್ರಧಾನಿ ಮೋದಿಯನ್ನು ಜಗತ್ತೇ ಮೆಚ್ಚಿದೆ

0
8
loading...

ಕನ್ನಡಮ್ಮ ಸುದ್ದಿ-ರಕಬಕವಿ-ಬನಹಟ್ಟಿ: ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರ ಅಭಿವೃದ್ಧಿಯ ಕಾರ್ಯಗಳನ್ನು ದೇಶವಷ್ಟೇ ಅಲ್ಲದೆ ಇಡೀ ಜಗತ್ತೇ ಮೆಚ್ಚಿರುವದು ವಿಶೇಷವಾಗಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿಶ್ಚಿತವೆಂದು ಬಿಜೆಪಿ ಜಿಲ್ಲಾಧ್ಯಕ್ಷ, ತೇರದಾಳ ಕ್ಷೇತ್ರದ ಅಭ್ಯರ್ಥಿ ಸಿದ್ದು ಸವದಿ ಹೇಳಿದರು.
ಬುಧವಾರ ಸಂಜೆ ನಗರದ ಈಶ್ವರಲಿಂಗ ಮೈದಾನದಲ್ಲಿ ಸಾವಿರಾರು ಮಹಿಳಾ ಕಾರ್ಯಕರ್ತರ ರ್ಯಾಲಿ ಸಂದರ್ಭ ಮಾತನಾಡಿದ ಅವರು, 4 ವರ್ಷಗಳಲ್ಲಿ ಇಡೀ ದೇಶವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಎಲ್ಲ ರಾಜ್ಯಗಳಲ್ಲಿನ ಜನತೆ ಬಿಜೆಪಿಯನ್ನು ಮೆಚ್ಚಿದ್ದಾರೆ. ಅದರಂತೆ ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಮಲ ಅರಳಲಿದೆ ಎಂದರು.
ಯಡಿಯೂರಪ್ಪ ನೇತೃತ್ವದ ಸರ್ಕಾರವಧಿಯಲ್ಲಿ ರೈತ ಹಾಗು ನೇಕಾರರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಜನತೆಗೆ ನಿಟ್ಟುಸಿರುವ ಬಿಡುವಲ್ಲಿ ಕಾರಣವಾಗಿತ್ತು. ಕಳೆದ 5 ವರ್ಷಗಳ ಕಾಂಗ್ರೆಸ್‌ನ ದುರಾಡಳಿತದಲ್ಲಿ ಸಾಮಾನ್ಯ ಜನತೆ ತೀವ್ರ ಸಂಕಷ್ಟ ಎದುರಿಸುವಲ್ಲಿ ಕಾರಣವಾಗಿದೆ ಎಂದು ಸವದಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದೇ ಸಂದರ್ಭ ಸಾವಿರಾರು ಮಹಿಳಾ ಕಾರ್ಯಕರ್ತೆಯರೊಂದಿಗೆ ಬನಹಟ್ಟಿ ನಗರಾದ್ಯಂತ ಬೃಹತ್‌ ರ್ಯಾಲಿ ನಡೆಸಿದರು. ಇದೇ ಸಂದರ್ಭ ರಾಜು ಅಂಬಲಿ, ಶ್ರೀಶೈಲ ಯಾದವಾಡ, ರಾಜು ಬಾಣಕಾರ, ಕುಮಾರ ಕದಮ, ಮೀನಾಕ್ಷಿ ಸವದಿ, ಸಂಗೀತಾ ಖಾನಾಪುರ, ಶಾಂತಾ ಸೊರಗಾಂವಿ, ಮಾಲಾ ಬಾವಲತ್ತಿ, ಶೈಲಜಾ ಹೊಸಕೋಟಿ, ವೈಷ್ಣವಿ ಬಾಗೇವಾಡಿ, ರತ್ನಾ ಕೊಳಕಿ, ಸವಿತಾ ಹೊಸೂರ, ಸುರೇಶ ಚಿಂಡಕ, ಭೀಮಶಿ ಮಗದುಮ್‌, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಮೊಳೇದ ಸೇರಿದಂತೆ ಅನೇಕರಿದ್ದರು.

loading...