ಪ್ರಧಾನಿ ಮೋದಿ ಜನಪರ ಕಾರ್ಯಗಳೇ, ಬಿಜೆಪಿಗೆ ಶ್ರೀರಕ್ಷೆ: ಬಾಬುಗೌಡ

0
6
loading...

ಕನ್ನಡಮ್ಮ ಸುದ್ದಿ-ಇಂಡಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳೇ ರಾಜ್ಯದಲ್ಲಿ ರಾಜ್ಯದ ಜನತೆಗೆ ಬಿಜೆಪಿಗೆ ಒಲವು ತೋರುಸುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರವಾಗಲಿದ್ದು ಆದ್ದರಿಂದ ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಅವರನ್ನು ಆಯ್ಕೆ ಮಾಡುವಂತೆ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಬಾಬುಗೌಡ ಬಿರಾದಾರ ಮನವಿ ಮಾಡಿದರು.
ಅವರು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ರಾಜ್ಯದಲ್ಲಿ ಎಲ್ಲ ಸಮುದಾಯದವರಿಗೆ ವಿಶೇಷವಾಗಿ ಪರಿಗಣನೆಯನ್ನು ತಗೆದುಕೊಳ್ಳುವ ಹಾಗೂ ರೈತರ ಮೇಲೆ ವಿಶೇಷ ಕಾಳಜಿವುಳ್ಳ ಸರಕಾರ ಯಾವೂದೇಂದರೆ ಅದು ಬಿಜೆಪಿ ಸರಕಾರ ಮಾತ್ರ. ಆದ್ದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷವು ಧೂಳಿಪಟವಾಗಲಿದೆ. ಕೇಂದ್ರದ ಮೋದಿ ಸರಕಾರದ ಹಲವಾರು ಯೋಜನೆಗಳಿಗೆ ಜನರು ಸ್ಪಂದಿಸುತ್ತಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಸಾಧಿಸಲಿದ್ದಾರೆ. ಆದ್ದರಿಂದ ಮಹಾಜನತೆಯಲ್ಲಿ ಮನವಿ ಮಾಡಿಕೊಳ್ಳುವದೆನೆಂದರೆ ಇಂಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಅವರನ್ನು ಆಶೀರ್ವದಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ.

loading...