ಪ್ರಾಯೋಗಿಕ ಅನುಭವದಿಂದ ಜ್ಞಾನ ವೃದ್ಧಿ: ಡಾ.ಸಿದ್ರಾಮಪ್ಪ ಇಟ್ಟಿ

0
34
loading...

ಕನ್ನಡಮ್ಮ ಸುದ್ದಿಚಿಕ್ಕೋಡಿ 16: ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೈದ್ಧಾಂತಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನ ಬೆಳೆಸಿಕೊಳ್ಳುವ ಅನಿವಾರ್ಯತೆ ಇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂಥ ಶೈಕ್ಷಣಿಕ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಳ್ಳುವುದರಿಂದ ಪ್ರಾಯೋಗಿಕ ಜ್ಞಾನ ಹೆಚ್ಚುತ್ತದೆ ಎಂದು ಕೆಎಲ್‌ಇ ಇಂಜಿನೀಯರಿಂಗ ಕಾಲೇಜು ಪ್ರಾಚಾರ್ಯ ಡಾ.ಸಿದ್ರಾಮಪ್ಪ ಇಟ್ಟಿ ಹೇಳಿದರು.ಪಟ್ಟಣಧ ಕೆಎಲ್‌ಇ ಸಂಸ್ಥೆಯ ಇಂಜಿನೀಯರಿಂಗ್‌ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕೌಶಲ್ಯ 2ಕೆ18 ಪ್ರಾಜೆಕ್ಟ್‌ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಹೊಸ ಕಲ್ಪನೆಗಳನ್ನು ಸೃಷ್ಟಿಸಲು ಈ ಕೌಶಲ್ಯ 2ಕೆ18 ಪ್ರಾಜೆಕ್ಟ್‌ ಸ್ಪರ್ಧೆಯನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಪ್ರಾಜೆಕ್ಟಗಳ ಸಿದ್ಧಪಡಿಸುವಿಕೆಯಲ್ಲಿ ಅತ್ಯಂತ ಕಾಳಜಿಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡರೇ ಮಾತ್ರ ಪ್ರಾಯೋಗಿಕ ಜ್ಞಾನ ಹೆಚ್ಚಲು ಸಾಧ್ಯ ಎಂದರು. ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತಕಾರಿ ಅನ್ವಯಿಕ ಪ್ರಾಜೆಕ್ಟಗಳನ್ನು ಆಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ಕಂಪನಿಗಳಲ್ಲಿ ಉದ್ಯೋಗಾವಕಾಶ ಪಡೆದುಕೊಳ್ಳುವಲ್ಲಿ ಪ್ರಾಜೆಕ್ಟಗಳು ಸಹಕಾರಿಯಾಗುತ್ತದೆ ಎಂದರು. ಆರ್‌. ಎನ್‌. ಪಾಟೀಲ, ರಜನಿ ರೊಖಡೆ, ರಮೇಶ ತಂಗಡಿ, ಅಬ್ದುಲ್‌ ಖಾದರ ಜುನೆದಿಪಟೇಲ್‌ ಮಾತನಾಡಿದರು.ಸಿವಿಲ್‌ ವಿಭಾಗದ 19 ಪ್ರಾಜೆಕ್ಟಗಳಲ್ಲಿ ಪ್ರಥಮ ಸ್ಥಾನವನ್ನು ಐಶ್ವರ್ಯ ಹಿರೇಮಠ ಹಾಗೂ ತಂಡ, ದ್ವಿತಿಯ ಸ್ಥಾನವನ್ನು ಮಯೂರಿ ಕುಲಕರ್ಣಿ ಹಾಗೂ ತಂಡ, ತೃತಿಯ ಸ್ಥಾನವನ್ನು ರಾಧಿಕಾ ನಾವಿ ಹಾಗೂ ತಂಡ ಪಡೆದುಕೊಂಡವು.ಮೆಕ್ಯಾನಿಕಲ್‌ ವಿಭಾಗದ 35 ಪ್ರಾಜೆಕ್ಟಗಳಲ್ಲಿ ಪ್ರಥಮ ಸ್ಥಾನವನ್ನು ಶರದ ಪವಾರ ಹಾಗೂ ತಂಡ, ದ್ವಿತಿಯ ಸ್ಥಾನವನ್ನು ಸಾಕೀಬ್‌ ಪಿರಜಾದೆ ಹಾಗೂ ತಂಡ, ತೃತಿಯ ಸ್ಥಾನವನ್ನು ಪ್ರವೀಣ ಸವದೆ ಹಾಗೂ ತಂಡ ಪಡೆದುಕೊಂಡವು.ಇಲೆಕ್ಟ್ರಾನಿಕ್ಸ ವಿಭಾಗದ 18 ಪ್ರಾಜೆಕ್ಟಗಳಲ್ಲಿ ಪ್ರಥಮ ಸ್ಥಾನವನ್ನು ಗಂಗವ್ವ ಬಿರಾದರ ಹಾಗೂ ತಂಡ, ದ್ವಿತಿಯ ಸ್ಥಾನವನ್ನು ಕು. ವಿನಾಯಕ ಪೊತದಾರ ಹಾಗೂ ತಂಡ, ತೃತಿಯ ಸ್ಥಾನವನ್ನು ದಶರತ ಮೆತ್ರಿ ಹಾಗೂ ತಂಡ ಪಡೆದುಕೊಂಡಿದೆ. ಕಂಪ್ಯೂಟರ್‌ ಸಾಯನ್ಸ್‌ ವಿಭಾಗದ 24 ಪ್ರಾಜೆಕ್ಟಗಳಲ್ಲಿ ಪ್ರಥಮ ಸ್ಥಾನವನ್ನು ಮಹೇಶÀ ಮುರಕುಂಬಿ ಹಾಗೂ ತಂಡ, ದ್ವಿತಿಯ ಸ್ಥಾನವನ್ನು ಅಕ್ಷಯ ಹುಲಿಕಂತಿಮಠ ಹಾಗೂ ತಂಡ, ತೃತಿಯ ಸ್ಥಾನವನ್ನು ರಕ್ಷಂದಾ ಗುರವ ಹಾಗೂ ತಂಡ ಪಡೆದುಕೊಂಡವು. ಸುನೀಲ ಸಾಸಬಳ ಸ್ವಾಗತಗೀತೆ ಹಾಡಿದರು.ಪೂಜಾ ಚನ್ನವರ ಸ್ವಾಗತಿಸಿದರು. ಆರ್‌. ಪ್ರಭಂಜನ ನಿರೂಪಿಸಿದರು.ವಿರಾಜ ದೇಶಪಾಂಡೆ ವಂದಿಸಿದರು. ಪ್ರೊ. ಅಭಿನಂದನ ಕಬ್ಬೂರ ಸಂಯೋಜಿಸಿದರು.

loading...