ಫಲಿತಾಂಶಕ್ಕೆ ಕ್ಷಣಗಣನೆ, ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ,ಯಾರ ಪಾಲಿಗೆ ‘ಮಂಗಳ’ಕರವಾರ ಆಗಲಿದೆ, ದೇಶದ ಚಿತ್ತ ಕರ್ನಾಟಕದತ್ತ

0
79
loading...

ಬೆಳಗಾವಿ: ಕರ್ನಾಟಕ ವಿಧಾನಸಭೆಯ ಜನದೇಶಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು ಈಡೀ ದೇಶ ರಾಜ್ಯ ವಿಧಾನ ಸಭೆ ಫಲಿತಾಂಶಕ್ಕಾಗಿ ಕಾದು ಕುಳಿತಿದೆ.
ಮಂಗಳವಾರ ರಾಜ್ಯ ವಿಧಾನ ಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು ಅಭ್ಯರ್ಥಿಗಳ ಎದೆ ಬಡಿತ ಜೋರಾಗಿದ್ದು ಸೋಲು ಗೆಲುವಿನ ಭಯ ಕಾಡುತ್ತಿದೆ.
ಈ ರಾಜ್ಯ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದ್ದು ಎಲ್ಲ ಚಿತ್ತ ಕರ್ನಾಟಕ ದತ್ತ ನೆಟ್ಟಿದೆ.
ಚುನಾವಣೋತ್ತರ ಸಮೀಕ್ಷೆ ಗಳು ಕಾಂಗ್ರೆಸ್, ಭಾಜಪ ಹಾಗೂ ಜೆಡಿಎಸ್ ಪಕ್ಷಗಳ ಕುರಿತು ನೀಡಿರುವ ವರದಿ ಎಷ್ಟು ಸತ್ಯ ಎಷ್ಟು ಮಿಥ್ಯ ಎಂಬುವದು ಸ್ಪಷ್ಟ ಚಿತ್ರಣವನ್ನು ಫಲಿತಾಂಶ ತೆರೆದಿಡಲಿದೆ.
ಸಮಿಕ್ಷೆಗಳ ಪ್ರಕಾರ ಯಾವುದೊಂದು ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡಿಲ್ಲಾ. ಹೀಗಾಗಿ ಜೆಡಿಎಸ್ ಕಿಂಗ್ ಮೆಕರ್ ಆಗಲಿದೆಯಾ ಎಂಬ ಸಂದೇಹ ಕಾಡತೊಡಗಿದೆ.
ಸಮಿಕ್ಷೆಗಳ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ನೂರರ ಅಂಕಿ ದಾಟಿವೆ ಆದರೆ ಸರಕಾರ ಮಾಡುವಷ್ಟು ಅಂಕಿ ಅಂಶಗಳು ಇಲ್ಲದೆ ಇರುವದರಿಂದ ಜೆಡಿಎಸ್ ಮೊರೆ ಹೋಗುವ ಸಾಧ್ಯಗಳು ದಟ್ಟವಾಗಿವೆ.
ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆದ್ದರೆ ಸಿದ್ದು ಮತೇ ಸಿಎಂ ಆಗಲಿದ್ದಾರೆ.ಮತ್ತೊಂದು ಕಡೆ ಭಾಜಪಾ ಗರಿಷ್ಟ ಸ್ಥಾನ ಗೆದ್ದು ಬಿಗಿದರೆ ಬಿಎಸ್ವೈ ಮುಖ್ಯಮಂತ್ರಿ ಆಗುವದರಲ್ಲಿ ಅನುಮಾನವೇ ಇಲ್ಲ. ಇದರ ಮಧ್ಯೆ ಅತಂತ್ರವಾದರೆ ಜೆಡಿಎಸ್ ಪಕ್ಷ ಯಾರಿಗೆ ಮಣೆ ಹಾಕುತೋ ತಿಳಿಯದೆ ಇರುವ ಸಂಗತಿ‌ .ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಒಂದು ನಾಟಕೀಯ ಬೆಳವಣಿಗೆ ಆಗೊದರಲ್ಲಿ ದೋಸರಾ ಮಾತೇ ಇಲ್ಲ.
ಈ ಎಲ್ಲ ಬೆಳವಣಿಗೆಗೆ ಮಂಗಳವಾರ ಸ್ಪಷ್ಟ ಚಿತ್ರಣ ಸಿಗಲಿದೆ‌.
ಮತ ಏಣಿಕೆಯಾಗುವ ಸ್ಥಳದ ಸುತ್ತಮುತ್ತಲೂ ಬಿಗಿ ಭದ್ರತೆಯನ್ನು ಕೈಗೊಂಡಿದೆ. ಮತ ಪೆಟ್ಟಿಗೆಯಲ್ಲಿದೆ ಅಭ್ಯರ್ಥಿ ಭವಿಷ್ಯ ಅಡಗಿದೆ ಹೀಗಾಗಿ ಯಾರ ಪಾಲಿಗೆ ಮಂಗಳವಾರ ‘ಮಂಗಳ’ ಕರವಾಗಲಿದೆ ಕಾದು ನೋಡಬೇಕು.

loading...