ಬಂಜಾರ ನಿಗಮ ಸ್ಥಾಪನೆ ಕ್ರೀರ್ತಿ ಬಿಎಸ್‌ವೈಗೆ ಸಲ್ಲುತ್ತದೆ

0
8
loading...

ಕನ್ನಡಮ್ಮ ಸುದ್ದಿ-ಬೀಳಗಿ: ಬಂಜಾರ ಜನಾಂಗದವರ ತಮ್ಮದೇಯಾದ ಧಾರ್ಮಿಕ ಸಂಸ್ಕೃತಿ ಪರಂಪರೆ ಹಾಗೂ ಇತರೆ ಸಮಾಜದೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕುವ ಸಮಾಜದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಬಂಜಾರ ನಿಗಮ ಸ್ಥಾಪನೆ ಮಾಡುವ ಮೂಲಕ ಪ್ರತಿಯೊಂದು ತಾಂಡಾಗಳಲ್ಲಿ ಶ್ರೀಸಂತ ಸೇವಾಲಾಲ ಮಹಾರಾಜರ ಸಮುದಾಯಭವನ ನಿರ್ಮಾಣ ಹಾಗೂ ಇನ್ನೂ ಅನೇಕ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಮುರುಗೇಶ ಆರ್‌ ನಿರಾಣಿ ಹೇಳಿದರು.
ತಾಲೂಕಿನ ನಾರಗಾಳ ತಾಂಡಾದಲ್ಲಿ ತಮ್ಮ ಪರ ಮತಯಾಚಿಸಿ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಪ್ರತ್ಯೆಕ ಬಂಜಾರ ನಿಗಮ ಸ್ಥಾಪನೆ ಮಾಡಿದ ಕ್ರೀರ್ತಿ ಸಲ್ಲುತ್ತದೆ. ತಾಂಡಾದಲ್ಲಿ ಸಿಸಿ ರಸ್ತೆ, ಸಾಮೂಹಿಕ ಶೌಚಾಲಯ, ಹೆಚ್ಚುವರಿಯಾಗಿ 4 ಶಾಲಾ ಕೊಠಡಿ, ಶಾಲಾ ಕಂಪೌಂಡ್‌ ಇನ್ನೂ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ. ಚುನಾವಣೆ ಪ್ರಚಾರದ ವೇಳೆಯಲ್ಲಿ ಮತಕ್ಷೇತ್ರದಲ್ಲಿನ ಜನರು ಆತ್ಮೀಯವಾಗಿ ಸ್ವಾಗತಿ ಬರುವ ಮೇ12 ರಂದು ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡುವುದಾಗಿ ಗ್ರಾಮದ ಹಿರಿಯರು ಹಾಗೂ ಯುವಕರು ಹೇಳುತಿದ್ದು ಸಂತಸ ತಂದಿದೆ. ನಾನು ನಿಮ್ಮ ಸೇವೆಗೆ ಸದಾ ಸಿದ್ದವಿರುವುದಾಗಿ ಹೇಳಿ, ಕಾಂಗ್ರಸ್‌ ಪಕ್ಷದರು ಜನರಲ್ಲಿ ಸುಳ್ಳ ಹೆಳಿ ಮತಗಳನ್ನು ಪಡೆಯುವುದೇ ಅವರ ಕೇಲಸ. ಇವತ್ತು ಮತದಾರರು ಜಾಗೃತರಾಗಿ ಬದಲಾವಣೆ ಮಾಡಿ ಬಿಜೆಪಿ ಗೆಲಿಸಿ ಅಧಿಕಾರಕ್ಕೆ ತರಬೇಕಾಗಿದೆ ಎಂದರು. ಎಪಿಎಂಸಿ ಅಧ್ಯಕ್ಷ ರಾಮಣ್ಣ ಕಾಳಪ್ಪಗೊಳ, ರವಿ ಲಮಾಣಿ ಮಾತನಾಡಿದರು. ಗ್ರಾಪಂ ಸದಸ್ಯ ಶಾಂತಾಬಾಯಿ ಲಮಾಣಿ, ಶ್ರೀಶೈಲ ಹೊಸಗೌಡರ, ಧೇನಪ್ಪ ಲಮಾಣಿ, ದಾಸು ಲಮಾಣಿ, ಮಲ್ಲು ಲಮಾಣಿ ಪಡಿಯಪ್ಪ ಕೆಳಗಿನಮನಿ. ಶೇಖರ ಗೊಳಸಂಗಿ ಹಾಗೂ ಇನ್ನೂ ಅನೇಕರು ಇದ್ದರು. ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಮುರುಗೇಶ ಆರ್‌ ನಿರಾಣಿಯವರಿಗೆ ತಾಲೂಕಿನ ನಾರಗಾಳ ತಾಂಡಾದಲ್ಲಿ ಅಪಾರ ಜನ ಬೆಂಬಲ ದೊರೆಯಿತು.

loading...