ಬಂದ್‍ಗೆ ಕುಮಟಾ ಜನರು ಎಲ್ಲರೂ ಕೈಜೋಡಿಸಿ: ಶಾಸಕ ದಿನಕರ

0
26
loading...

ಕುಮಟಾ: ರೈತರ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮೇ 28ರಂದು ಬಿಜೆಪಿ ನೀಡಿದ ಕರ್ನಾಟಕ ಬಂದ್‍ಗೆ ಕರೆಗೆ ಕುಮಟಾದಲ್ಲಿ ಎಲ್ಲರೂ ಕೈಜೋಡಿಸುವ ಮೂಲಕ ಬಂದ್‍ನ್ನು ಯಶಸ್ವಿಗೊಳಿಸಬೇಕೆಂದು ಶಾಸಕ ದಿನಕರ ಶೆಟ್ಟಿ ವಿನಂತಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾಭಿಮತವನ್ನು ಕಡೆಗಣಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿಕೊಂಡು ಅಪವಿತ್ರ ಮೈತ್ರಿ ಸರ್ಕಾರ ರಚಿಸಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತಿಗೆ ತಪ್ಪುವ ವ್ಯಕ್ತಿಯಾಗಿದ್ದು, ಜನತೆಗೆ ಅವರ ಮೇಲೆ ವಿಶ್ವಾಸವೇ ಇಲ್ಲ. ಅವರು ತಮ್ಮ ಜೆಡಿಎಸ್‍ನ ಚುನಾವಣಾ ಪ್ರಣಾಳಿಕೆಯಲ್ಲಿ ಮುಖ್ಯಮಂತ್ರಿ ಸ್ಥಾನ ಸ್ವೀಕರಿಸಿದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಈಗ ಆ ಬಗ್ಗೆ ಮಾತನಾಡುತ್ತಿಲ್ಲ. ಅದನ್ನು ನೆನಪಿಸಲು ಮತ್ತು ರೈತರ ಸಾಲ ಮನ್ನಾ ಮಾಡಿಸುವ ಉz್ದÉೀಶದಿಂದ ಮಾಜಿ ಸಿಎಂ ಬಿ.ಎಸ್.ಯಡ್ಯೂರಪ್ಪ ಅವರು ಪ್ರತಿಭಟನೆ ನಡೆಸಲು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್, ಸೊಸೈಟಿ ಸೇರಿದಂತೆ ಖಾಸಗಿ ಬ್ಯಾಂಕ್‍ನಲ್ಲಿ ರೈತರು ಹೊಂದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಅಲ್ಲದೆ ಮೀನುಗಾರರ ಸಾಲ ಕೂಡ ಮನ್ನಾ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲು ಈ ಪ್ರತಿಭಟನೆಯನ್ನು ಬಿಜೆಪಿ ರಾಜ್ಯಾದ್ಯಂತ ಸಂಘಟಿಸುತ್ತಿದ್ದು, ಅದರ ಭಾಗವಾಗಿ ಸೋಮವಾರ ಕುಮಟಾದಲ್ಲೂ ಬಂದ್ ಆಚರಿಸಲು ರೈತರು, ವ್ಯಾಪಾರಸ್ಥರು, ಆಟೋ- ಟ್ಯಾಕ್ಸಿ ಚಾಲಕರು, ಮಾಲಕರು ಸೇರಿದಂತೆ ಎಲ್ಲ ಸಂಘಟನೆಗಳು ಬೆಂಬಲ ನೀಡಬೇಕೆಂದು ವಿನಂತಿಸಿದರು.

ಕುಮಟಾ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ತಹಸೀಲ್ದಾರ್ ಕಚೇರಿ ಎದುರು ಸೇರಿ, ಅಲ್ಲಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ತಹಸೀಲ್ದಾರ್ ಅವರಿಗೆ ಮನವಿ ನೀಡಲಾಗುವುದು. ಬಂದ್ ಆಚರಣೆ ಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರಾಜೇಶ ಪೈ, ಕಿಶನ ವಾಳ್ಕೆ, ಹೇಮಂತಕುಮಾರ ಗಾಂವ್ಕರ್, ತಿಮ್ಮ ಮುಕ್ರಿ, ಡಾ.ಜಿ.ಜಿ.ಹೆಗಡೆ, ವೆಂಕಟೇಶ ನಾಯಕ, ಲಿಂಗಪ್ಪ ನಾಯ್ಕ, ಅಶೋಕ ಪ್ರಭು, ವಿಶ್ವನಾಥ ನಾಯ್ಕ, ಇತರರಿದ್ದರು.

loading...