ಬಿಎಸ್‌ವೈ ಪ್ರಮಾಣ ವಚನ ಸ್ವೀಕಾರ: ಬಿಜೆಪಿ ವಿಜಯೋತ್ಸವ

0
13
loading...

ಬಸವನಬಾಗೇವಾಡಿ: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಜೈಘೋಷಣೆಯೊಂದಿಗೆ ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಹಾಕಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಕೆ.ಕಲ್ಲೂರ ಮಾತನಾಡಿ ರಾಜ್ಯದ ಜನತೆ ಬಿಜೆಪಿ ಮೇಲಿನ ವಿಶ್ವಾಸ-ನಂಬಿಕೆ ಪ್ರತೀಕವಾಗಿ ಬಿಜೆಪಿ ಅತೀ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ, ಬಹುಮತ ಸಾಬೀತುಪಡಿಸಲು ಅವಶ್ಯಕ ಸಂಖ್ಯೆಯ ಕೊರತೆ ಲಾಭ ಪಡೆದ ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು ಖಂಡನೀಯವಾಗಿದ್ದು ರಾಜ್ಯಪಾಲರು ಸಂವಿಧಾನ ಅನ್ವಯ ಸೂಕ್ತಕ್ರಮಕೈಗೊಂಡು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರಕ್ಕೆ ಕರೆದಿದ್ದು ಸರಿಯಾಗಿದ್ದು ಮುಂಬರುವ ದಿನಗಳಲ್ಲಿ ಬಿಜೆಪಿ ನಿಶ್ಚಿತವಾಗಿ ಬಹುಮತ ಸಾಬೀತುಪಡಿಸುವ ಜೊತೆಗೆ ಬಿಜೆಪಿ ನೇತೃತ್ವದ ಸರಕಾರ ಆಡಳಿತ ನಡೆಸಲಿದೆ ಎಂದು ಹೇಳಿದರು.
ಈ ಹಿಂದೆ ಚುನಾವಣೆಯಲ್ಲಿ ಪರಸ್ಪರ ತೀವ್ರ ಸ್ವರೂಪದ ವಾಗ್ದಾಳಿಗೆ ಮುಂದಾಗುವ ಜೊತೆಗೆ ಜನರ ದಾರಿ ತಪ್ಪಿಸಿದ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿರುವದು ಸತ್ಯಕ್ಕೆ ದೂರಾದ ಸಂಗತಿಯಾಗಿದ್ದು ಬಿಜೆಪಿ ಆಡಳಿತ ಹಾಗೂ ನಾಯಕತ್ವ, ಪಕ್ಷದ ತತ್ವ-ಸಿದ್ದಾಂತ ನಂಬಿ ಪಕ್ಷಕ್ಕೆ ಬರುವರನ್ನು ಸ್ವಾಗತಿಸುವದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದು ಬಿಜೆಪಿ ಪಕ್ಷವೂ ಸಂವಿಧಾನ-ಜನರ ತೀರ್ಮಾನ ಅನುಸಾರವಾಗಿ ಆಡಳಿತ ನಡೆಸಲು ಮುಂದಾಗಿದ್ದು ಕಾಂಗ್ರೆಸ್‌-ಜೆಡಿಎಸ್‌ ಪಕ್ಷವೂ ವಾಮಮಾರ್ಗದ ಮುಖಾಂತರ ಅಧಿಕಾರ ಹಿಡಿಯಲು ಮುಂದಾಗಿದ್ದು ಯಶಸ್ವಿಯಾಗುದಿಲ್ಲ, ಬಿಜೆಪಿ ಸರಕಾರದ ಆಡಳಿತ ನಡೆಸಿ ಪ್ರಣಾಳಿಕೆಯಲ್ಲಿ ವಿಷಯಗಳು ಸೇರಿದಂತೆ ಜನಪರ ಯೋಜನೆ ಅನುಷ್ಠಾನಗೊಳಿಸುತ್ತದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಅಂಬೋಜಿ ಪವಾರ, ಶಿವಲಿಂಗಯ್ಯ ತೆಗ್ಗಿನಮಠ, ಎಸ್‌.ಎ.ದೇಗಿನಾಳ, ವೈ.ಎಸ್‌.ಮ್ಯಾಗೇರಿ, ಮಲ್ಲಿಕಾರ್ಜುನ ಗೊಳಸಂಗಿ, ವಿ.ಎಮ್‌.ಪರೆಣ್ಣವರ, ಮುತ್ತು ಚಿಕ್ಕೊಂಡ, ಅಶೋಕ ಬಾಗೇವಾಡಿ, ಶರಣು ಕೊಟ್ರಶೆಟ್ಟಿ, ನಾಗರಾಜ ದೇವಕರ, ಚಂದ್ರಶೇಖರ ಸಿಂದಗಿ, ಪ್ರವೀಣ ಪಾಟೀಲ, ಬಸವರಾಜ ಕೂಡಗಿ, ವಿನೂತ ಕಲ್ಲೂರ, ಯಮನೂರಿ ಜಮಖಂಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

loading...