ಬಿಎಸ್‌ವೈ ಹೇಳಿದಂತೆ ರೈತರ ಸಾಲ ಮನ್ನಾ ಮಾಡಿದ್ದಾರೆ: ಹಂಚಿನಾಳ

0
18
loading...

ಮುಂಡರಗಿ: ಚುನಾವಣೆ ಪೂರ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು ಹೇಳಿದಂತೆ ರಾಜ್ಯದಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡು ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ಗಂಟೆಯಲ್ಲಿ ರೈತರ 1 ಲಕ್ಷ ಸಾಲ ಮನ್ನಾ ಮಾಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಹೇಳಿದರು.
ಅವರು ಗುರುವಾರ ಪಟ್ಟಣದ ಯಕ್ಕಾಬಂಡಿ ಕಾರ್ಮಿಕರಿಂದ ಸನ್ಮಾನ ಪಡೆದುಕೊಂಡು ಮಾತನಾಡಿದರು. ರಾಜ್ಯದಲ್ಲಿ ಮತ್ತೊಮ್ಮೆ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ರಚನೆಗೊಳ್ಳಲಿದ್ದು, ಬಡವರಿಗೆ, ನಿರಾಶ್ರಿತರಿಗೆ ಎಲ್ಲರಿಗೂ ಮನೆಗಳನ್ನು ಕೊಡಿಸಲಾಗುವುದು. ಚುನಾವಣೆ ಪೂರ್ವದಲ್ಲಿ ಸ್ಥಳೀಯ ಯಕ್ಕಾಬಂಡಿ ಕಾರ್ಮಿಕರಿಗೆ ನೀಡಿದ ಎಲ್ಲ ಭರವಸೆಗಳನ್ನು ಶಾಸಕ ರಾಮಣ್ಣ ಲಮಾಣಿಯವರ ಮೂಲಕ ಹಂತ ಹಂತವಾಗಿ ಈಡೇರಿಸುವುದಾಗಿ ಹಂಚಿನಾಳ ಭರವಸೆ ನೀಡಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ವಿಜಯಕುಮಾರ ರಾಟಿ ಮಾತನಾಡಿ, ಯಕ್ಕಾಬಂಡಿ ಕಾರ್ಮಿಕರು ಸೇರಿದಂತೆ ಅನೇಕ ಕಾರ್ಮಿಕರು ಈ ಬಾರಿ ರಾಮಣ್ಣ ಲಮಾಣಿಯವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಅವರ ಆಯ್ಕೆಗೆ ಸಹಕರಿಸಿದ್ದಾರೆ. ಅವರೆಲ್ಲರಿಗೂ ರಾಮಣ್ಣ ಲಮಾಣಿ ಪರವಾಗಿ, ಪಕ್ಷದ ಎಲ್ಲ ಹಿರಿಯ ಮುಖಂಡರ ಪರವಾಗಿ ಅಭಿನಂದಿಸಿ, ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲರೂ ಸಹಕಾರ ನೀಡೋಣ ಎಂದರು.
ಈ ವೇಳೆ ಕರಬಸಪ್ಪ ಹಂಚಿನಾಳ, ವಿಜಯಕುಮಾರ ಶಿಳ್ಳೀನ, ಆನಂದಗೌಡ ಪಾಟೀಲ, ವಿಜಯಕುಮಾರ ರಾಟಿ ಮೊದಲಾದ ಬಿಜೆಪಿ ಮುಖಂಡರಿಗೆ ಯಕ್ಕಾ ಬಂಡಿ ಕಾರ್ಮಿಕರು ಸನ್ಮಾನಿಸಿ ಗೌರಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಬಸವರಾಜ ನೆರೇಗಲ್‌, ಪರುಶುರಾಮ ಕರಡಿಕೊಳ್ಳ, ಅಡಿವೆಪ್ಪ ಕಟ್ಟೀಮನಿ, ಕೊಪ್ಪಣ್ಣ ಕೊಪ್ಪಣ್ಣವರ, ಗೋವಿಂದರಾಜ ಕರ್ನೂಲ, ಸುರೇಶ ಮೆದಕನಾಳ, ಫಕ್ಕೀರಪ್ಪ ಚಲವಾದಿ, ಜಂದಿಸಾಬ್‌ ಗರಡಿಮನಿ, ಸುರೇಶ ಸೀಮಣ್ಣವರ, ಸಣ್ಣೆಪ್ಪ ಕಪಗಲ್‌, ಬಾಬುಸಾಬ್‌ ಬಿಸ್ತಿ, ಖಾಸೀಂಸಾಬ್‌ ಬೆಟಗೇರಿ, ಖಾಜೇಸಾಬ್‌ ತಪ್ಪಡಿ, ಖಾಸೀಂಸಾಬ್‌ ಆಲೂರ, ಪೀರಸಾಬ್‌ ತಪ್ಪಡಿಮುದಕಪ್ಪ ಮೆದಕನಾಳ, ಮರ್ದಾನಸಾಬ್‌ ವಡ್ಡಟ್ಟಿ, ಬಸವರಾಜ ಮೆದಕನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...