ಬಿಜೆಪಿಗರು ಅಶಾಂತಿ ಮೂಡಿಸುವ ಕೆಲಸ ಮಾಡಿದ್ದಾರೆ: ಸಚಿವ ದೇಶಪಾಂಡೆ

0
10
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾ ಹಾಗೂ ಹೊನ್ನಾವರ ಸಜ್ಜನರ ನಾಡು. ಇಲ್ಲಿನ ಜನರು ಬುಧ್ಧಿವಂತರು ಮತ್ತು ಶಾಂತಿ ಪ್ರಿಯರು. ಇಂಥ ನಾಡಿನಲ್ಲಿ ಬಿಜೆಪಿಗರು ಕೋಮು ಸೌಹಾರ್ದತೆಯನ್ನು ಕೆಡಿಸಿ, ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ಅವರು ಬುಧವಾರ ಪಟ್ಟಣದ ಗಾಂಧಿ ಚೌಕದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿ ಅವರ ಪರವಾಗಿ ಜನರಲ್ಲಿ ಮತ ಯಾಚಿಸಿ, ಮಾತನಾಡಿ, ಹೊನ್ನಾವರ, ಕುಮಟಾ, ಶಿರಸಿಯಲ್ಲಿನಡೆದ ಅಹಿತಕರ ಘಟನೆಗಳು ಸದ್ಯ ಜಿಲ್ಲೆಗೆ ತಟ್ಟಿದ ಕಳಂಕ ಎಂದು ವಿಷಾದಿಸಿದ ಸಚಿವರು, ಕಾಂಗ್ರೆಸ್ ಪಕ್ಷ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತದೆಯೋ ಹೊರತು ಬಿಜೆಪಿಯಂತೆ ಧರ್ಮ, ಜಾತಿಗಳನ್ನು ಮುಂದಿಟ್ಟುಕೊಂಡು ಮತ ಕೇಳುವ ರಾಜಕಾರಣ ಮಾಡುವುದಿಲ್ಲ. ಸಾಧನೆ, ಅಭಿವೃದ್ಧಿ ಮೇಲೆ ಮತ ಯಾಚಿಸುತ್ತೇವೆ. ಕಳೆದ 5 ವರ್ಷ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಅಭಿವೃದ್ಧಿಯ ಪರ್ವಕಾಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಲಿಲ್ಲ. ಜನಧನ ಖಾತೆಯಲ್ಲಿ 15 ಲಕ್ಷ ರೂಪಾಯಿ ನೀಡುವುದು, ಬಡವರ ಜೊತೆಗೆ ತಮಾಷೆ ಮಾಡಿದಂತಾಗಿದೆ. ಅಚ್ಛೆ ದಿನ್ ಕನಸು ಕಾಣುತ್ತಿರುವ ಈ ದೇಶದ ನಾಗರಿಕರಿಗೆ ಈಗಲೂ ಆ ದಿನ ಕಾಣಲು ಸಾಧ್ಯವಾಗಿಲ್ಲ. ಪೆಟ್ರೋಲ್, ಡಿಸೆಲ್ ದರಗಳು ಉತ್ತುಂಗಕ್ಕೇರಿದರಿಂದ ಈ ದೇಶದ ಗ್ರಾಹಕ ಕಷ್ಟಕ್ಕೆ ಸಿಲುಕಿದ್ದಾನೆ. ನೋಟ್ ರದ್ಧತಿಯಿಂದ ಜರ್ಜರಿತಗೊಂಡಿರುವ ಜನತೆ ಬೆಲೆ ಏರಿಕೆ ಶಾಖದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ದೇಶದ ಸಾಮಾನ್ಯ ಜನರು ಅತ್ಯಂತ ಪ್ರಭಾವಕ್ಕೊಳಗಾಗಿ ಕಷ್ಟ ಅನುಭವಿಸುತ್ತಿದ್ದಾರೆ.
ಅಲ್ಲದೇ ಬಾಡದ ಗುಡೇಅಂಗಡಿಯ ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಆವರಣದಲ್ಲಿ ಮತದಾರರನ್ನುz್ದÉೀಶಿಸಿ ಭಾಷಣ ಮಾಡಿದ ಸಚಿವ ಆರ್ ವಿ ದೇಶಪಾಂಡೆ ಅವರು ಕಾಂಗ್ರೆಸ್‍ನ ಸಾಧನೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಜಿಪಂ ಸದಸ್ಯ ರತ್ನಾಕರ ನಾಯ್ಕ, ಪುರಸಭೆ ಅಧ್ಯಕ್ಷ ಮಧುಸೂಧನ ಶೇಟ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ, ಹೊನ್ನಾವರ ಬ್ಲಾಕ್ ಅಧ್ಯಕ್ಷ ಜಗದೀಪ ತೆಂಗೇರಿ, ಜಿಲ್ಲಾ ಕಾಂಗ್ರೆಸ್‍ನ ಮಹಿಳಾಧ್ಯಕ್ಷೆ ತಾರಾ ಗೌಡ, ಪ್ರಮುಖರಾದ ರವಿಕುಮಾರ ಮೋಹನ ಶೆಟ್ಟಿ, ಕೃಷ್ಣಾನಂದ ವೆರ್ಣೆಕರ್, ಗಣಪತಿ ಶೆಟ್ಟಿ, ವಿನಾಯಕ ನಾಯಕ, ಮನೋಜ ನಾಯಕ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...