ಬಿಜೆಪಿಯಿಂದ ಕರಾಳ ದಿನಾಚರಣೆ : ಜೆಡಿಎಸ್‍ದಿಂದ ಸಂಭ್ರಮಾಚರಣೆ

0
28
loading...

ಗದಗ: ಗದುಗಿನಲ್ಲಿ ಬಿಜೆಪಿ ಕರಾಳ ದಿನಾಚರಣೆ ಆಚರಿಸಿದರೆ ಜೆಡಿಎಸ್ ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಿದರು.

ಗದಗ ನಗರದ ಗಾಂಧಿ ವೃತ್ಥದಲ್ಲಿ ಗದಗ ಜಿಲ್ಲಾ ಬಿಜೆಪಿ ಆಡಳಿತ ಪಕ್ಷವಾಗಿದ್ದ ಕಾಂಗ್ರೇಸ್‍ನ್ನು ತಿರಸ್ಕರಿಸಿ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿದ ರಾಜ್ಯದ ಜನತೆಯ ಅಶೋತ್ತರಗಳಿಗೆ ವಿರುದ್ಧವಾಗಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೇಸ್ ಕಿಚಡಿ ಸರ್ಕಾರ ರಚನೆ ಯಾಗುತ್ತಿರುವುದನ್ನು ವಿರೋಧಿಸಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಹಾಗೂ ಘೋಷಣೆಗಳೊಂದಿಗೆ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚಾರಣೆ ಆಚರಿಸಿತು. ಈ ಪ್ರತಿಭಟಣೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್.ಕರೀಗೌಡ್ರ, ನಗರ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಗ್ರಾಮೀಣ ಅಧ್ಯಕ್ಷ ಭದ್ರೇಶ ಕುಸ್ಲಾಪೂರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಿಂಗಪ್ಪ ಮಣ್ಣೂರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಉಡುಪಿ, ಕಾಂತಿಲಾಲ ಬನ್ಸಾಲಿ, ಎಂ.ಎಂ.ಹಿರೇಮಠ, ಶ್ರೀಮತಿ ಅಶ್ವೀನಿ ಜಗತಾಪ್, ಶಾರದಾ ಹಿರೇಮಠ, ಶಾರದಾ ಸಜ್ಜನರ, ಶಿವರಾಜಗೌಡ ಹಿರೇಮನಿಪಾಟೀಲ, ನಗರಸಭಾ ಸದಸ್ಯ ಮಾಧವ ಗಣಾಚಾರಿ, ನಾಗಲಿಂಗ ಐಲಿ, ಮಂಜುನಾಥ ಮುಳಗುಂದ, ಪಾರ್ವತಿ ಪತ್ತಾರ, ಸಿದ್ದು ಮೆಣಸಿನಕಾಯಿ, ಮಹಾಂತೇಶ ನಾಲ್ವಾಡ, ಸುರೇಶ ಮಗದುಮ, ಬಸವರಾಜ ಬೆಳದಡಿ, ಕೆ.ಪಿ.ಕೋಟಿಗೌಡ್ರ, ಸುರೇಶ ಚಿತ್ತರಗಿ, ಶ್ರೀನಿವಾಸ ಭಾಂಡಗೆ, ರಾಜು ಕುಲಕರ್ಣಿ, ಅಮರೇಶ ಹಿರೇಮಠ, ಸಿದ್ರಾಮೇಶ ಹಿರೇಮಠ, ಚನ್ನಮ್ಮ ಹುಳಕಣ್ಣವರ, ವಂದನಾ ವರ್ಣೇಕರ, ಕುಮಾರ ಮಾರನಬಸರಿ, ಮಂಜು ಕೊಟ್ನಿಕಲ್, ಅರವಿಂದ ಹುಲ್ಲೂರ, ಈರ್ಷಾದ ಮಾನ್ವಿ, ಎಸ್.ಎಚ್.ಶಿವನಗೌಡ್ರ, ಬೂದಪ್ಪ ಹಳ್ಳಿ, ಸಿ.ಜಿ.ಸೊನ್ನದ, ಗಿರೀಶ ಕಾರಬಾರಿ, ಕಾರ್ತಿಕ ಮುತ್ತಿನಪೆಂಡಿಮಠ, ಮಂಜು ಬಳ್ಳಾರಿ ಮುಂತಾದವರಿದ್ದರು.

ಸಿಹಿ ವಿತರಿಸಿ ಸಂಭ್ರಮಾಚರಣೆ : ನಾಡಿನ ಹಿರಿಯ ಮುತ್ಸದ್ಧಿ ರಾಜಕಾರಣಿ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಜಾತ್ಯಾತೀತ ಜನತಾ ದಳದ ಅಲ್ಪಸಂಖ್ಯಾತರ ಘಟಕದ ಗದಗ ಶಹರ ಘಟಕದ ಅಧ್ಯಕ್ಷ ಮುನ್ನಾ ಇರಕಲ್ ಅವರ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಗದುಗಿನ ಐತಿಹಾಸಿಕ ಪ್ರಸಿದ್ಧತೆ ಪಡೆದ ವೀರನಾರಾಯಣ ದೇವಸ್ಥಾನ ಎದುರಿಗೆ ಜಮಾಯಿಸಿದ ಜೆಡಿಎಸ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಾತ್ಯಾತೀತ ಜನತಾ ದಳದ ಅಲ್ಪಸಂಖ್ಯಾತರ ಘಟಕದ ಗದಗ ಶಹರ ಘಟಕದ ಅಧ್ಯಕ್ಷ ಮುನ್ನಾ ಇರಕಲ್ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಬುದ್ಧ ರಾಜಕಾರಣಿಯಾಗಿದ್ದು ಕರ್ನಾಟಕದ ಶ್ರೇಯೋಭಿವೃದ್ಧಿಗೆ ಹತ್ತು ಹಲವಾರು ಪ್ರಗತಿಪರ ಕಾರ್ಯಯೋಜನೆಗಳನ್ನು ಹಾಕಿಕೊಂಡಿದ್ದು ಈ ಮೊದಲು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಕಟಿಸಿ ಚುನಾವಣಾ ಪ್ರಣಾಳಿಕೆಯ ವಿಷಯಗಳನ್ನು ಅನುಷ್ಠಾನಗೊಳಿಸಲು ಬದ್ಧರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಾಂದಸಾಬ, ಪ್ರದೀಪ ಮಗಜಿ, ಇರ್ಫಾನ್ ಕಲಾದಗಿ, ರಾಜೇಸಾಬ ದೊಡ್ಡಮನಿ, ಸಲೀಮ ನದಾಫ, ಅಕ್ಬರ್, ಸಲೀಮ್, ಇಮ್ರಾನ್, ಯೂನೀಸ್, ತೌಹೀದ್, ಶಿರಾಜ್, ಅಲ್ಲಾಭಕ್ಷೀ ಮುಂತಾದವರಿದ್ದರು.

loading...