ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮತ ಚಲಾಯಿಸಿದರು

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತದಾರರು ಶನಿವಾರ ಅತ್ಯಂತ ಹರುಪಿನಿಂದ ಮತ ಚಲಾಯಿಸಿದ್ದು, ಈ ಮಧ್ಯೆ ಗಿಬ್ ಆಂಗ್ಲ ಮಾಧ್ಯಮ ಬೂತಿನಲ್ಲಿ ಮತದಾನ ಮಾಡಿದ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಎಡವಟ್ಟು ಮಾಡಿಕೊಂಡರು.
ಮಧ್ಯಾಹ್ನ 12 ಗಂಟೆಗೆ ಬೂತಿಗೆ ಬಂದ ದಿನಕರ ಶೆಟ್ಟರು, ತನ್ನ ಶರ್ಟಿಗೆ ಹಾಕಿದ್ದ ಬಿಜೆಪಿಯ ಕಮಲ ಚಿಹ್ನೆಯನ್ನು ಇಟ್ಟುಕೊಂಡೇ ಬೂತಿನೊಳಗೆ ಹೋಗಿ ಮತ ಚಲಾಯಿಸಿದರು. ಬೂತಿನ 100 ಮೀಟರ್ ಅಂತರದಲ್ಲಿ ಯಾವುದೇ ಪಕ್ಷದ ಚಿಹ್ನೆ ಅಥವಾ ಪಕ್ಷದ ಕಾರ್ಯಕರ್ತರು ಪ್ರಚಾರ ಮಾಡಬಾರದು ಎಂಬ ನಿಯಮವಿದ್ದರೂ ಮಾಜಿ ಶಾಸಕ `ಕಮಲ ಚಿಹ್ನೆ’ಯನ್ನು ಹಾಕಿಕೊಂಡೇ ಮತದಾನ ಕೇಂದ್ರ ಪ್ರವೇಶಿಸಿದ್ದು, ವಿರೋಧ ಪಕ್ಷದವರ ಕೆಂಗಣ್ಣಿಗೆ ಗುರಿಯಾಯಿತು.

ಪತ್ರಿಕೆಯೊಂದಿಗೆ ಮಾತಾಡಿದ ಹೆಸರು ಹೇಳಲಿಚ್ಚಿಸದ ಅನ್ಯಪಕ್ಷದ ಮುಖಂಡನೊಬ್ಬ ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ದಿನಕರ ಶೆಟ್ಟರು, ಮತದಾರರನ್ನು ಪ್ರಚೋದಿಸಲೆಂದೇ ಕಮಲ ಚಿಹ್ನೆಯನ್ನು ಧರಿಸಿ ಬೂತಿನೊಳಗೆ ಹೋಗಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗದ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದಾರೆ.
ದಿನಕರ ಶೆಟ್ಟರು ಫೋಟೋಗ್ರಾಫರುಗಳಿಗೆ ಮತದಾನದ ಕುರುಹು ತೋರಿಸುವ ಸಂದರ್ಭ ಅವರ ಎದೆಭಾಗದಲ್ಲಿ ಹಾಕಿದ್ದ `ಕಮಲ ಚಿಹ್ನೆ’ ಸಂಧಿಯಿಂದ ಇಣುಕಿದಂತೆ ತೋರುತ್ತಿದೆ.

loading...