ಬಿಜೆಪಿ ಪ್ರಚಾರಕ್ಕೆ ಅಡ್ಡಿ:ಬಿಜೆಪಿ ಪಕ್ಷದ ಧ್ವಜ ತುಳಿದು ಪ್ರಚಾರಕರಿಗೆ ಬೆದರಿಕೆ

0
4
loading...

ಗದಗ : ಕಾಂಗ್ರೇಸ್ ಬಿಜೆಪಿ ಪಕ್ಷದ ದ್ವಜವನ್ನು ಕಾಲಿನಿಂದ ತುಳಿದು ಹೊಡೆಯುವ ಬೆದರಿಕೆ ಹಾಕಿರುವುದನ್ನು ಖಂಡಿಸಿದ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ನೇತ್ರತ್ವದ ತಂಡ 1 ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿ ನಂತರ ಪ್ರಚಾರ ನಡೆಸಿದ ಘಟನೆ ಮಂಗಳವಾರ ರಾತ್ರಿ ಹುಲಕೋಟಿ ಗ್ರಾಮದಲ್ಲಿ ಸಂಭವಿಸಿದೆ.
ಘಟನೆ ಖಂಡಿಸಿದ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಮಾತನಾಡಿ, ಹುಲಕೋಟಿ ಗ್ರಾಮದಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆಸಲು ಸಾಧ್ಯವಿಲ್ಲ. ಮತ ಕೇಂದ್ರದ ಸುತ್ತಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಈಗಾಗಲೇ ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ. ಜಿಲ್ಲಾಡಳಿತ ಕಾಂಗ್ರೇಸ್ ಪಕ್ಷದ ಏಜೆಂಟಾಗಿ ಕಾರ್ಯ£ರ್ವಹಿಸುತ್ತಿದೆ. ಘಟನೆಯ ಸಂದರ್ಭದಲ್ಲಿ ಇಲ್ಲಿನ ಪೊಲೀಸ್ರಿಗೆ ವಿಷಯ ತಿಳಿಸಿದರೇ, ಹೋಗಲಿ ಬಿಡ್ರಿ ಎಂದರು.
ಇಲ್ಲಿನ ಗೂಂಡಾ ಸಂಸ್ಕøತಿಗೆ ನಾನು ಹೆದರಲ್ಲ. ಇದನ್ನು ಮಟ್ಟ ಹಾಕುತ್ತೇನೆ. ಹಿಂದಿನ ಕಾಲ ಬೇರೇ ಇಂದಿನ ಕಾಲ ಬೇರೆಯಾಗಿದೆ. ಹುಲಕೋಟಿಯಲ್ಲಿ ಬಿಹಾರಿ ಮಾದರಿಯ ಗೂಂಡಾ ಸಂಸ್ಕøತಿ ನಡೆಯುತ್ತಿದೆ. ಈ ಬಗ್ಗೆ ಪ್ರಧಾನಮಂತ್ರಿ ಮತ್ತು ಕೇಂದ್ರ ಗ್ರಹ ಇಲಾಖೆಗೆ ದೂರು £ೀಡುತ್ತೇನೆ. ಇಲ್ಲಿನ ಕಾಂಗ್ರೇಸ್ ನಾಯಕರು ಸೋಲಿನ ಭೀತಿಯಿಂದ ಪ್ರಚಾರ ನಡೆಸಲು ಅವಕಾಶ ನೀಡುತ್ತಿಲ್ಲ. ಸುಮಾರು ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಬಿರುಸಿನ ಪ್ರಚಾರ
ಘಟನೆಯ ನಂತರ ಹುಟಕೋಟಿಯ ಪ್ರಮುಖ ಬೀದಿಗಳಲ್ಲಿ ಕತ್ತಲೆಯಲ್ಲಿ ಪ್ರಚಾರ ನಡೆಸಿದರು. ಆದರೆ ಒರ್ವ ವಯೋವೃಧ್ದೆ ಮಹಿಳೆ ಮಾತ್ರ ತನ್ನ ಅಳಲನ್ನು ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಅವರಲ್ಲಿ ತೋಡಿಕೊಂಡರು. ಪ್ರಚಾರಕ್ಕೆ ಹೋಗುವ ಬೀದಿಗಳಲ್ಲಿ ಅಲ್ಲಿನ ಬೀದಿ ದೀಪವನ್ನು ಆರಿಸುವ ಮೂಲಕ ಪ್ರಚಾರಕ್ಕೆ ಅಡ್ಡಿ ಪಡಿಸಿದರು ಎಂಬುದು ಬಿಜೆಪಿ ಕಾರ್ಯಕರ್ತರ ಆರೋಪವಾಗಿದೆ.
ಈ ಸಂದಭದಲ್ಲಿ ಬಿಜೆಪಿ ಮುಖಂಡರಾಧ ಅರವಿಂದ ಹುಲ್ಲೂರ, ಕಿಶನ ಮೇರವಾಡೆ, ನಗರಸಭಾ ಸದಸ್ಯ ಸಂತೋಷ ಮೇಲಗಿರಿ, ಎಂ.ಎಂ.ಹಿರೇಮಠ, ಎಸ್.ಟಿ.ಮೇಲಗೀರಿ, ತೋಟೋಸಾ ಭಾಂಡಗೆ, ಗಣೇಶ ಪೂಜಾರ, ಗೀರೀಶ ಕಾರಬಾರಿ, ಮಹೇಶ ದಾಶರ, ಬಸವರಾಜ ಕೋಟಿ, ಶ್ರೀಮತಿ ಉಳಕಣ್ಣವರ, ಶ್ರೀಮತಿ ಜಯಶ್ರೀ ಉಗಲಾಟ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

loading...