ಬೆಲ್ಲದ ಬಾಗೆವಾಡಿಯಲ್ಲಿ ಎ.ಬಿ.ಪಾಟೀಲ ಅಬ್ಬರದ ಪ್ರಚಾರ

0
36
loading...

ಬೆಲ್ಲದ ಬಾಗೆವಾಡಿಯಲ್ಲಿ ಎ.ಬಿ.ಪಾಟೀಲ ಅಬ್ಬರದ ಪ್ರಚಾರ
ಕನ್ನಡಮ್ಮ ಸುದ್ದಿ-ಹುಕ್ಕೇರಿ09:ರಾಜ್ಯ ವಿಧಾನ ಸಭೆ ಚುನಾವಣೆಗೆ ಮೂರೆ ದಿನ ಬಾಕಿ ಇದ್ದು ಜೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಚುನಾವಣೆ ಕ್ಷೇತ್ರಗಳಲ್ಲಿ ಒಂದಾದ ಹುಕ್ಕೇರಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಎ.ಬಿ.ಪಾಟೀಲರು ಅಬ್ಬರದ ಪ್ರಚಾರ ನಡಸಿದರು.
ಸಮೀಪದ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಬುದವಾರ ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ ಅವರ ಸ್ವಗ್ರಾಮ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಎ.ಬಿ.ಪಾಟೀಲ ಅವರಿಗೆ sಸಹಕಾರಿ ಧುರೀಣರಾದ ಡಿ.ಟಿ.ಪಾಟೀಲ,ಅಣ್ಣಾಸಾಹೇಬ ಪಾಟೀಲ,ಲಕ್ಷ್ಮಣ ಹೂಲಿ, ಹುಕ್ಕೇರಿ ಬ್ಲಾಕ್ ಚುನಾವಣೆ ಪ್ರಚಾರ ಸಮೀತಿ ಅಧ್ಯಕ್ಷ ಶ್ರೀಕಾಂತ ಭೂಶಿ,ಮಹೇಶ ಹಟ್ಟಿಹೊಳಿ ಸಂತೋಷ ಮುಡಶಿ,ದಿಲೀಪ ಹೊಸಮನಿ ಅಶೋಕ ಅಂಕಲಗಿ ಶಾನೂಲ ತಹಶಿಲ್ದಾರ ಸೇರಿದಂತೆ ನೂರಾರು ಕಾರ್ಯಕರ್ತರು ಸಾಥ್ ನೀಡಿದರು.

loading...