ಬೇಸಿಗೆ ಶಿಬಿರದ ಲಾಭ ಪಡೆದುಕೊಳ್ಳಿ: ಕುರ್ತಕೊಟಿ

0
18
loading...

ಸವಣೂರ : ಮಕ್ಕಳು ಬೇಸಿಗೆ ಶಿಬಿರದ ಯೋಜನೆಯನ್ನು ಪಡೆದುಕೊಂಡು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜೀ ವಹಿಸುವದು ಅವಶ್ಯ ಈ ಶಿಬಿರದ ಯೋಜನೆಯ ಲಾಭಾಶವನ್ನು ಮಕ್ಕಳು ಪಡೆಯುವಲ್ಲಿ ಯಸಶ್ವಿಯಾಗಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ಎಮ್. ಎಸ್. ಕುರ್ತಕೊಟಿ ಹೇಳಿದರು.
ಪಟ್ಟಣದ ಭಾಲ ಭವನ ಸವಣೂರ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸವಣೂರ ಇವರ ಸಂತಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ಏರ್ಪಡಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಬೇಸಿಗೆ ಶಿಬಿರದಲ್ಲಿ ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜೀ ವಹಿಸುವದರ ಮೂಲಕ ವಿದ್ಯಾರ್ಥಿಗಳು ಶಿಕ್ಷಕರು ನೀಡುವ ವಿಧ್ಯಾರ್ಜನೆಯನ್ನು ಪರಿಪೂರ್ಣತೆಯಿಂದ ಅರಿತುಕೊಂಡು ಮುಂಬರುವ ದಿನಗಳಲ್ಲಿ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವದರ ಮೂಲಕ ಶಿಕ್ಷಣದಲ್ಲಿ ಹೆಚ್ಚಿನ ಕ್ರಾಂತಿಯನ್ನು ತಾಲೂಕಿನಾಧ್ಯಂತ ಮಾಡುವದು ಅವಶ್ಯವಿದೆ ಎಂದರು.
ತಹಶೀಲ್ದಾರ ವಸಂತಕುಮಾರ ಸಜ್ಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಈ ಶಿಬಿರದ ಮಹತ್ವವನ್ನು ಅರ್ಥೈಸಿಕೊಂಡು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವದರೊಂದಿಗೆ ತಮ್ಮ ಪಾಲಕರ ಕೀರ್ತಿಯನ್ನು ತಾಲೂಕಿನಾದ್ಯಂತ ಪಸರಿಸುವದು ಅವಶ್ಯವಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿ ಪರಿಮಳಾ ಕೋಟಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಲಕಿಯರ ಸಕರಕಾರಿ ಪದವಿ ಪೂರ್ವ ಕಾಲೇಜ ಪ್ರಾಚಾರ್ಯ ಆರ್ ಕೆ ದೇಶಪಾಂಡೆ, ಯೋಗ ಶಿಕ್ಷಕ ಬಸವರಾಜ ಹಿತ್ತಲಮನಿ , ಕರಕುಶಲತೆ ಮತ್ತು ಚಿತ್ರಕಲೆ ಶಿಕ್ಷಕಿ ವೀಣಾ ಬುಶೇಟ್ಟಿ ,ಸಂಗೀತ ಶಿಕ್ಷಕ ವಿರಯ್ಯ ಹುರಳಿಕುಪ್ಪಿ , ನೃತ್ಯ ಶಿಕ್ಷಕಿ ಶೃತಿ ಮತ್ತಿಗಟ್ಟಿ, ಸಿಬ್ಬಂದಿ ವರ್ಗ ಮತ್ತು ಮಕ್ಕಳು ಇದ್ದರು.

loading...