ಭಟ್ಕಳ ಕೇವಲ ಒಂದೇ ಸಮಾಜಕ್ಕೇ ಸೀಮಿತವಾದ ಕ್ಷೇತ್ರವಲ್ಲ: ನಾಯ್ಕ

0
12
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ಭಟ್ಕಳ ಕೇವಲ ಒಂದೇ ಸಮಾಜಕ್ಕೇ ಸೀಮಿತವಾದ ಕ್ಷೇತ್ರವಲ್ಲ, ಹತ್ತು ಹಲವಾರು ಸಮಾಜಗಳಿಂದ ಕೂಡಿರುವ ಭಟ್ಕಳ ಕ್ಷೇತ್ರಕ್ಕೆ ಯಾವುದು ಮಾನದಂಡವಲ್ಲ, ಎಲ್ಲಾ ಸಮಾಜದ ಬೆಂಬಲ, ಉತ್ತಮ ಸ್ಪಂದನೆ ದೊರಕಿದ್ದು ಈ ಬಾರಿ ವಿಧಾನ ಸಭಾ ಚುನಾವಣೆ ಧರ್ಮಯುದ್ದವಾಗಿದ್ದು, ಈ ಧರ್ಮ ಯುದ್ದದಲ್ಲಿ ಗೆಲುವು ನಮ್ಮದೇ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಸುನೀಲ ನಾಯ್ಕ ಹೇಳಿದರು.
ಅವರು ಹೊನ್ನಾವರ ತಾಲೂಕಿನ ಗೇರುಸೊಪ್ಪಾ, ಹಾಡಗೇರಿ ,ಸರಳಗಿ, ಅಡಕಾರ, ಜಲವಳ್ಳಿ, ಜನಕಡಕ್ಕಲ್‌, ಕೊಳಗದ್ದೆ, ಯಲಗುಪ್ಪಾ ಭಾಗದಲ್ಲಿ ಸಂಚರಿಸಿ ಅಬ್ಬರದ ಪ್ರಚಾರ ನಡೆಸಿ ಮಾತನಾಡಿದರು. ಕಾಂಗ್ರೇಸ್‌ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಕರಾವಳಿ ಭಾಗಕ್ಕೆ ಭೇಟಿ ನೀಡಿರುವುದರಿಂದ ಬಿಜೆಪಿ ಪಕ್ಷಕ್ಕೆ ತುಂಬಾ ಅನುಕೂಲಕರ ವಾತಾವರಣ ಉಂಟಾಗಿದೆ ರಾಹುಲ್‌ ಗಾಂಧಿ ಅಪ್ರತಿಮ ಬುದ್ದಿವಂತನಾಗಿದ್ದರೆ ನಮಗೆಲ್ಲಾ ತಲೆಬಿಸಿಯಾಗಿತ್ತು, ಸಣ್ಣ ಮಕ್ಕಳು ಕೂಡಾ ಲೇವಡಿ ಮಾಡುವ ಪರಿಸ್ಥಿತಿ ಅವರದು, ಅವರು ಬಿ.ಜೆ.ಪಿ ಪಕ್ಷಕ್ಕೆ ಸ್ಟಾರ್‌ ಕ್ಯಾಂಪೆನ್‌ ಇದ್ದ ಹಾಗೆ. ಅವರು ಭೇಟಿ ಬಿ.ಜೆ.ಪಿ ಪಕ್ಷಕ್ಕೆ ಪ್ಲಸ್‌ ಆಗಲಿದೆ ಎನ್ನುವ ಮೂಲಕ ರಾಹುಲ್‌ ಗಾಂಧಿಯನ್ನು ಲೇವಡಿ ಮಾಡಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತ ಅವಧಿಯ ಸಾಧನೆಯ ಮುಂದಿಟ್ಟು ಹಿರಿಯರ ಆಶೀರ್ವಾದ ಪಡೆದು, ಮತಯಾಚಿಸುತ್ತಿದ್ದೇನೆ. ಜನರು ಆಶೀರ್ವದಿಸುವ ವಿಶ್ವಾಸವಿದೆ. ಈ ಬಾರಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಎಲ್ಲರು ಆಶೀರ್ವದಿಸುತ್ತಿದ್ದಾರೆ. ನೂರಕ್ಕೆ ನೂರರಷ್ಟು ಭಟ್ಕಳದಲ್ಲಿ ಬಿ.ಜೆ.ಪಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಶಂಭು ಗೌಡ, ಜಿಲ್ಲಾ ಪಂಚಾಯತ್‌ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಸುಬ್ರಹ್ಮಣ್ಯ ಶಾಸ್ತ್ರಿ, ಉಲ್ಲಾಸ ಶ್ಯಾನಭಾಗ, ಶಂಕರ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಬಿ.ಜೆ.ಪಿ ಪಕ್ಷದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...