ಮಂಕಾಳ ವೈದ್ಯರಿಗೆ ವಿಶ್ವಕರ್ಮ ಸಮಾಜದಿಂದ ಬೆಂಬಲ

0
39

ಕನ್ನಡಮ್ಮ ಸುದ್ದಿ-ಭಟ್ಕಳ: ಸತತ 13ವರ್ಷಗಳ ಸಮಾಜದಿಂದ ನಡೆದ ಹೋರಾಟಕ್ಕೆ ಈಗಿನ ಕಾಂಗ್ರೆಸ್ ಸರಕಾರ ಮಾನ್ಯತೆಯನ್ನು ನೀಡಿದ್ದು, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಕ್ಷೇತ್ರದ ವಿಶ್ವಕರ್ಮ ಸಮಾಜಕ್ಕೆ ಸಹಕಾರ ಮಾಡಿದ್ದರ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರ ಎಲ್ಲಾ ವಿಶ್ವಕರ್ಮ ಸಮಾಜದ 90% ಮತವೂ ಅವರಿಗೆ ನೀಡಿ ಅವರಿಗೆ ಬೆಂಬಲ ಸೂಚಿಸಲಿದ್ದೇವೆ ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಪ್ರಥಮ ಹಾಗೂ ಮಾಜಿ ಅಧ್ಯಕ್ಷ ಶ್ರೀನಿವಾಸ ಹೇಳಿದರು.
ಅವರು ಶುಕ್ರವಾರದಂದು ಇಲ್ಲಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

‘ಕೇಂದ್ರ ಅಥವಾ ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಸರಕಾರವೂ ವಿಶ್ವಕರ್ಮ ಸಮಾಜವನ್ನು ಗುರುತಿಸಿ ಅವರ ಅಭಿವೃದ್ಧಿಗೆ ಪೂರಕವಾದಂತಹ ಕಾರ್ಯ ಮಾಡಿಲ್ಲವಾಗಿದೆ. ರಾಜ್ಯದಲ್ಲಿ 45ಲಕ್ಷ ವಿಶ್ವಕರ್ಮ ಸಮಾಜದವರಿದ್ದು, ದೇಶದಲ್ಲಿ ಇದು ಕೇವಲ ಜಾತಿಯಾಗಿ ಬೆಳೆಯದೇ ಒಂದು ಸಂಸ್ಕøತಿಯಾಗಿ ದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಲು ಸೃಷ್ಠಿಯಾಗಿವೆ. ರಾಜ್ಯದಲ್ಲಿ ಹಿಂದುಳಿದ ಸಮಾಜದ ಪೈಕಿ ಎರಡನೇ ಸ್ಥಾನದಲ್ಲಿ ವಿಶ್ವಕರ್ಮವಿದ್ದು, ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ ಪಕ್ಷದ ನಿಗಮ ಸ್ಥಾಪನೆ ಮಾಡುವುದರೊಂದಿಗೆ ಸಮಾಜಕ್ಕೊಂದು ಸ್ಥಾನಮಾನ ನೀಡಿ ನಿಗಮ ಸ್ಥಾಪನೆ ಮಾಡಿದೆ.
ಸಿದ್ದರಾಮಯ್ಯನವರ ಸರಕಾರ ಸಮಾಜದ ಏಳಿಗೆಗೆ, ಅಭಿವೃದ್ಧಿಗೆ ಕೆಲಸಮಾಡಿದ ಹಿನ್ನೆಲೆಯಲ್ಲಿ ಅವರ ಋಣ ತೀರಿಸುವ ಮೂಲಕ ಕಾಂಗ್ರೆಸಗೆ ಬೆಂಬಲ ನೀಡಲಿದ್ದೇವೆ. ಹಾಗೂ ಈ ಭಾಗದ ಅಭ್ಯರ್ಥಿಯಾದ ಮಂಕಾಳ ವೈದ್ಯ ಅವರು ಸಹ ಕ್ಷೇತ್ರದ ವಿಶ್ವಕರ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ದುಡಿದಿದ್ದು, ಮುಂದಿನ ಬಾರಿ ಕಾಂಗ್ರೆಸ ಸರಕಾರ ಬರುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಇನ್ನಷ್ಟು ಮುನ್ನಡಿ ಇಡಲಿದ್ದಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮ ರಾಜ್ಯ ನಿರ್ದೇಶಕ ದೇವಿದಾಸ ಆಚಾರ್ಯ ‘ಕಾಂಗ್ರೆಸ ಪಕ್ಷದ ಸಮಾಜಕ್ಕೆ ಸಿಗಬೇಕಾದ ಎಲ್ಲಾ ಮೂಲಭೂತ ಹಕ್ಕುಗಳನ್ನು ಈಡೇರಿಸಿದೆ. ಶಾಸಕ ಮಂಕಾಳ ವೈದ್ಯ ವೈಯಕ್ತಿಕವಾಗಿ ಸಮಾಜಕ್ಕೆಸಹಾಯ ಸಹಕಾರವನ್ನು ಮಾಡಿದ್ದು, ರಾಜ್ಯ ಮಟ್ಟದಲ್ಲಿ ನಿಗಮ ಸ್ಥಾನ ಸಿಗುವಲ್ಲಿ ಶಾಸಕ ಕಾರ್ಯವೂ ಮರೆಯುವಂತಿಲ್ಲ. ನಮ್ಮ ಸಮಾಜದ ಶಾಸಕರಾದರೆ ಅವರ ಜವಾಬ್ದಾರಿ ಕೆಲಸವನ್ನೆಲ್ಲ ಶಾಸಕ ವೈದ್ಯರು ಮಾಡಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲೆ ವಿಶ್ವಕರ್ಮ ಅಭಿವೃದ್ಧಿ ನಿಗಮ ನಿರ್ದೇಶಕ ಗಜಾನನ ಆಚಾರ್ಯ, ತಾಲುಕಾ ವಿಶ್ವಕರ್ಮ ಅಭಿವೃದ್ಧಿ ನಿಗಮ ನಿರ್ದೇಶಕ ಸತೀಶ ಆಚಾರ್ಯ,ಲೋಕೇಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

loading...