ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಹಿರೇಮನಿ

0
16
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಸರ್ಕಾರಿ ಶಾಲೆಗಳಲ್ಲೂ ಉತ್ತಮ ತರಬೇತಿ ಹೊಂದಿರುವ ಶಿಕ್ಷಕ ವೃಂದವಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಹಿರೇಮನಿ ಹೇಳಿದರು.

ಅಬ್ಬಿಗೇರಿ ಗ್ರಾಮದಲ್ಲಿ ಜಿಪಂ ಗದಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಪಂ ನರೇಗಲ್ಲ ಸಹಯೋಗದಲ್ಲಿ ವಿಶೇಷ ದಾಖಲಾತಿ ಆಂದೋಲನ ಜಾಥಾಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಪಂ ಸದಸ್ಯ ಸುರೇಶ ನಾಯ್ಕರ ಮಾತನಾಡಿ, ಪಾಲಕರು ತಮ್ಮ ಬಡತನದಲ್ಲಿ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಶಾಲೆಯಿಂದ ಹೋರಗುಳಿದ ಮಕ್ಕಳಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಭವಿಷ್ಯ ಉಜ್ವಲಗೊಳಿಸಲು ಪಾಲಕರು ಪ್ರಯತ್ನಿಸಬೇಕು ಎಂದರು.

ಮುಖ್ಯ ಶಿಕ್ಷಕ ಸಿ.ಎ.ಯಲಿಗಾರ ,ಎಮ್.ಎಸ್.ಗುಡಿಹಿಂದಲ್, ಆರ್.ವಿ ಬೆಲ್ಲದ, ಬಿ.ಆರ್.ರಂಗಣ್ಣವರ, ಎಸ್.ವೈ.ಜಗ್ಗಲ, ಕೆ.ಎಫ್.ಮೀರಾನಾಯ್ಕ, ಎಚ್.ಬಿ.ಹಳೇಮನಿ, ಎಸ್.ಎಮ್.ಹೂಗಾರ, ನಂದೀಶ ಅಸುಂಡಿ, ವಿಶ್ವ ಮಸಲವಾಡ, ಗ್ರಾಪಂ ಸದಸ್ಯ ಶರಣಪ್ಪ ಗುಜಮಾಗಡಿ, ಬಸವರಾಜ ಪಲ್ಲೇದ, ಉಮೇಶ ಹೊಸಮನಿ, ಇತರರು ಉಪಸ್ಥಿತರಿದ್ದರು.

loading...