ಮಕ್ಕಳು ಪಠ್ಯಕ್ಕೆ ನೀಡುವ ಮಹತ್ವವನ್ನು ಸಹ ಪಠ್ಯೇತರ ಚಟುವಟಿಕೆಗಳಿಗೆ ನೀಡಿ

0
11
loading...

ಕಮತಗಿ: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯಪೂರಕ ವಿಷಯಗಳಲ್ಲಿ ತೊಡಗಿಸಿಕೊಂಡು ಸರ್ವಾಂಗೀಣ ಅಭೀವೃದ್ಧಿಯಾಗಬೇಕು ಎಂದು ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ.ಎಸ್‌.ಬಿ.ಮಾಡಗಿ ಹೇಳಿದರು.
ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಯೋಗಿನಿದೇವಿ ಆರ್‌.ಪಾಟೀಲ ಗ್ರಾಮೀಣ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ 2017-18 ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಹಾಗೂ ಶಿಕ್ಷಕ ವಿದ್ಯಾರ್ಥಿಗಳ ಒಕ್ಕೂಟದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆ ಎಂಬದು ತರಗತಿಗಿಂತ ಹೊರಗಡೆ ಕಲಿಯುವುದೇ ಹೆಚ್ಚು ಅದಕ್ಕಾಗಿ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳಿರಬೇಕು ಹಾಗೂ ವ್ಯಕ್ತಿತ್ವ ಅಭೀವೃದ್ಧಿ ಮತ್ತು ಸಾಮಾಜಿಕರಣಕ್ಕೆ ಸಹಪಠ್ಯ ಚಟುವಟಿಕೆಗಳು ತುಂಬಾ ಮಹತ್ವ ಪಡೆದುಕೊಂಡಿವೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಹೊಳೆ ಹುಚ್ಚೇಶ್ವರ ಮಹಾಸ್ವಾಮೀಜಿ ಮಾತನಾಡಿ,ಸುಭದ್ರ ಸಮಾಜ ನಿರ್ಮಾಣಕ್ಕೆ ಮಾನವಿಯ ಮೌಲ್ಯಗಳುಳ್ಳ ಶಿಕ್ಷಕರು ಸಮಾಜಕ್ಕೆ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಆರ್‌.ಎಸ್‌.ಲೆಕ್ಕದ,ಸಂಸ್ಥೆಯ ನಿರ್ದೇಶಕಿ ಗಂಗಮ್ಮ ಗೌಡರ,ಪ್ರಾಚಾರ್ಯ ಡಾ.ಎಸ್‌.ಎಮ್‌.ರೆಡ್ಡಿ, ಉಪನ್ಯಾಸಕರಾದ ಎ.ಎಚ್‌.ಮಲಘಾಣ, ಎಂ.ಜಿ.ಮುಷ್ಠಿಗೇರಿ, ಜಿ.ಎಲ್‌.ವಾಲಿಕಾರ, ಎಮ್‌.ಎಮ್‌.ಲಾಯದಗುಂದಿ, ಪರಶುರಾಮ ಗೋಡಿ, ಎಸ್‌.ಎಸ್‌.ಮುತ್ತಗಿ,ಶಿವು ಲೆಕ್ಕದ, ವರ್ಗದ ಪ್ರತಿನಿಧಿಗಳಾದ ವಿಜಯಲಕ್ಷ್ಮಿ ದ್ಯಾವಣ್ಣವರ, ಅಮೃತಾ ಹುನಗುಂದ ಹಾಗೂ ಸಿಬ್ಬಂದಿ ವರ್ಗ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಎಸ್‌.ಎಮ್‌.ರೆಡ್ಡಿ ಸ್ವಾಗತಿಸಿ, ಪ್ರಶಿಕ್ಷಣಾರ್ಥಿಗಳಾದ ಸೌಮ್ಯಾ ದೇಸಾಯಿ,ಸ ಬಿಯಾ ನಾಲಬಂದ ನಿರೂಪಿಸಿದರು, ಅಕ್ಕಮ್ಮ ಗೋನಾಳ ವಂದಿಸಿದರು.

loading...