ಮಕ್ಕಳ ವಿಶೇಷ ದಾಖಲಾತಿ ಆಂದೋಲನ

0
31
loading...

ಅಮೀನಗಡ: ಸಮೀಪದ ಗಂಗೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಶಾಲೆ ಬಿಟ್ಟ 6 ರಿಂದ 14 ವರ್ಷದೊಳಗಿನ ಮಕ್ಕಳ ವಿಶೇಷ ದಾಖಲಾತಿ ಆಂದೋಲನ ಗುರುವಾರ ನಡೆಯಿತು.
ಗ್ರಾಮದಲ್ಲಿ ಶಿಕ್ಷಕರು ಮಕ್ಕಳ ಜೊತೆ ಜಾಥಾ ಹೊರಟು ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ, ಶಿಕ್ಷಣ ಪ್ರತಿ ಮಗುವಿನ ಹಕ್ಕು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಶಿಕ್ಷಣವೇ ಶಕ್ತಿ ಎಂಬ ಘೋಷಣೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿ.ಆರ್.ಪಿ. ಮಲ್ಲಿಕಾರ್ಜುನ ಸಜ್ಜನ ಸರಕಾರ 6 ರಿಂದ 14 ವರ್ಷದೂಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ. ಇಂದು ಸರಕಾರಿ ಶಾಲೆಗಳಲ್ಲಿ ಉಚಿತ ಎರಡು ಜೊತೆ ಸಮವಸ್ತ್ರ, ಶೂ, ಪಠ್ಯ ಪುಸ್ತಕ, ವಿಧ್ಯಾರ್ಥಿ ವೇತನ, ಬಿಸಿಯೂಟ, ಕ್ಷೀರಭಾಗ್ಯದ ಇತ್ಯಾದಿ ಸೌಲಭ್ಯ ನೀಡಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿಶೇಷ ದಾಖಲಾತಿ ಆಂದೋಲನದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ದಾಖಲಾತಿ ಮಾಡುವ ಉದ್ದೇಶದಿಂದ ಈ ವಿಶೇಷ ದಾಖಲಾತಿ ಆಂದೋಲನ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಈ ಆಂದೋಲನ ಮೇ 31ರ ವರೆಗೆ ನಡೆಯಲಿದೆ. ಇದರ ಯಶಸ್ಸಿಗೆ ಎಲ್ಲರೂ ಶ್ರಮಿಸಿ ಒಂದು ಮಗು ಶಾಲೆಯಿಂದ ಹೊರೆಗೆ ಉಳಿಯದಂತೆ ನೋಡಿಕೊಳ್ಳೋಣ ಎಂದರು.
ಮಕ್ಕಳ ವಿಶೇಷ ದಾಖಲಾತಿ ಆಂದೋಲನದಲ್ಲಿ ಪ್ರಭಾರಿ ಮುಖ್ಯಶಿಕ್ಷಕ ಡಿ.ಬಿ.ವಾಗ್ಮೋಡೆ ಶಿಕ್ಷಕ ಪಿ.ಟಿ.ದೊಡಮನಿ, ಉಮೇಶ ಹೊಸಮನಿ, ಎಸ್.ಎಸ್.ವಾಘೋಮೊರೆ, ವಾಯ್.ಎಸ್.ಕೊರವರ ಮತ್ತು ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

loading...