ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಪೂರಕ: ತ್ರಿವೇಣಿ

0
24
loading...

ಕನ್ನಡಮ್ಮ ಸುದ್ದಿ-ಕುಮಟಾ: ಈ 10 ದಿನಗಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತಾ, ನೃತ್ಯ. ಆಶು ಭಾಷಣ, ಕ್ರೀಡೆ ಇಂತಹ ಚಟುವಟಿಕೆಗಳ ಕಲಿಕೆಗೆ ಈ ಶಿಬಿರ ಒಂದು ಉತ್ತಮ ಅವಕಾಶವಾಗಿದ್ದು, ಮಕ್ಕಳೆಲ್ಲಾ ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಜೆ ಮೊಲ್ಲಾ ತಿಳಿಸಿದರು.
ಅವರು ಕರ್ನಾಟಕ ಸರ್ಕಾರ, ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉ ಕ, ಶಿಶು ಅಭಿವೃದ್ಧಿ ಯೋಜನೆ ಕುಮಟಾ ಹಾಗೂ ಸ್ನೇಹ ಕುಂe ಟ್ರಸ್ಟ್‌ ಕಾಸರಕೋಡ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ತಾಲೂಕಿನ ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುಮಟಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಲಿತಾ ಆರ್‌ ಪಟಗಾರ ಹಾಗೂ ಹೊನ್ನಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತ್ರಿವೇಣಿ ಯಾಜಿ ಅವರು ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಈ ಶಿಬಿರ ಪೂರಕವಾಗಿದ್ದು ಮಕ್ಕಳು ಬೌಧಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ ವಿಕಸನ ಹೊಂದಲು ಈ ಶಿಬಿರ ಅನುಕೂಲಕರವಾಗಿದೆ. ಅಲ್ಲದೇ ಮಕ್ಕಳ ರಕ್ಷಣೆ-ಸುರಕ್ಷತೆಯ ಬಗ್ಗೆ ವಿವರಿಸಿದರು.
ಹೊಲನಗದ್ದೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಡಿ ನಾಯ್ಕ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಶಾಲೆಯಲ್ಲಿ ನೀವು ಕಲಿಯುವ ವಿಷಯಕ್ಕೂ ಈ ಶಿಬಿರದಲ್ಲಿ ಕಲಿಯುವ ವಿಷಯಕ್ಕೂ ಇರುವ ವ್ಯತ್ಯಾಸವಿದ್ದು, ಶಿಬಿರದಲ್ಲಿ ಶಾಲೆಯಲ್ಲಿ ಕಲಿಯದೇ ಇರುವಂತಹ ಹೊಸ ವಿಷಯಗಳ ಬಗ್ಗೆ ಕೂಡಾ ಕಲಿತುಕೊಳ್ಳಬಹುದು ಎಂದರು.
ಹೊಲಗದ್ದೆ ಗ್ರಾ ಪಂ ಅಧ್ಯಕ್ಷ ರಾಘವೇಂದ್ರ ಪಟಗಾರ, ಶಾಲೆಯ ಎಸ್‌ ಡಿ ಎಂ ಸಿ ಅಧ್ಯಕ್ಷೆ ದೀಪಾ, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕರಾಧ ಚಂದ್ರಕಲಾ ಭಟ್‌, ಸುಧಾ ಹೆಗಡೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ನೇಹಕುಂಜದ ಕಾರ್ಯಕರ್ತೆಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಸ್ನೇಹಕುಂಜ ಸಂಯೋಜಕ ಮನು ವೈದ್ಯ ಕಾರ್ಯಕ್ರಮ ನಿರೂಪಿಸಿದರು.

loading...