ಮಗುವಿನ ಬೆಳವಣಿಗೆಯಲ್ಲಿ ಕ್ರೀಡೆಯು ಅತ್ಯಂತ ಮಹತ್ವ: ಪೂಜಾರ

0
22
loading...

ಕನ್ನಡಮ್ಮ ಸುದ್ದಿ-ಸಿಂದಗಿ: ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಯು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ ಹೇಳಿದರು.

ಶನಿವಾರ ಪಟ್ಟಣದ ಶಾಂತಿನಿಕೇತನ ಪ್ರಾಥಮಿಕಶಾಲೆಯ ಆವರಣದಲ್ಲಿ ಬೆಂಗಳೂರಿನ ಬಾಲಭವನ ಸೊಸೈಟಿ, ಶಿಸು ಅಭಿವೃದ್ಧಿ ಯೋಜನೆ ಸಿಂದಗಿ ಹಾಗೂ ಶಾಂತಿನಿಕೇತನ ಪ್ರಾಥಮಿಕಶಾಲೆ ಹಾಗೂ ಸುಷ್ಮಾ ಕೋಚಿಂಗ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಅವರು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಕ್ರೀಡೆ ತನ್ನ ಮಹತ್ವ ಹೊಂದಿದೆ. ಮಕ್ಕಳಿಗೆ ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಆಶಕ್ತಿ ಬೆಳೆಸಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ವಿಡಿಯೋ ಗೇಮ್, ಕಂಪ್ಯೂಟರ್ ಗೇಮ, ಮೋಬÉೈಲ್ ಗೇಮ್‍ಗಳಲ್ಲಿಯೇ ಹೆಚ್ಚು ತಲ್ಲಿನರಾಗುತ್ತಿರುವುದು ಅಪಾಯಕಾರಕ ಸಂಗತಿ. ಅಂತ ಹವ್ಯಾಸದಿಂದ ಮಕ್ಕಳು ಹೊರಬರಬೇಕು. ಕ್ರೀಡಾ ಮೈದಾನದಲ್ಲಿ ಮಕ್ಕಳು ಆಟವಾಡುವುದರಿಂದ ಮಕ್ಕಳಲ್ಲಿ ಮನರಂಜನೆ ದೊರಕುವಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪಠ್ಯದಷ್ಟೇ ಪಠ್ಯಪೂರಕ ಚಟುವಟಿಕೆಗಳು ಸಹಕಾರಿಯಾಗಿವೆ. ಆದ್ದರಿಂದ ಪಠ್ಯಕ್ಕೆ ನೀಡಿದಷ್ಟೇ ಮಹತ್ವ ಪಠ್ಯಪೂರಕ ಚಟುವಟಿಕೆಗಳಿಗೆ ನೀಡಬೇಕು. ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಶರಣು ಬಿರಾದಾರ ಮಾತನಾಡಿ, ಮಕ್ಕಳು ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಬೆಳೆಯುವ ಜೊತೆಗೆ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಬೆಂಗಳೂರಿನ ಬಾಲಭವನ ಸೊಸೈಟಿ, ಶಿಸು ಅಭಿವೃದ್ಧಿ ಯೋಜನೆ ಸಿಂದಗಿ ಅವರು ಹಮ್ಮಿಕೊಂಡ ಬೆಸಿಗೆ ಶಿಬಿರ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೂರಕವಾಗಿದೆ. ಈ ಶಿಬಿರದಲ್ಲಿ ವಿಷಯ ಸಂಪನ್ಮೂಲವ್ಯಕ್ತಿಗಳು ನೀಡುವ ಪ್ರತಿಯೊಂದು ವಿಷಯ ಮಕ್ಕಳು ಅರಿತುಕೊಳ್ಳ ಬೇಕು ಎಂದರು.

ಯೋಗ, ಚಿತ್ರಕಲೆ, ಕರಾಟೆ, ಕರಕುಶಲ ಕಲೆ, ನಾಟಕ, ನತ್ಯ, ಕ್ರೀಡೆ, ಮನರಂಜನೆ ಮುಂತಾದ ಪಠ್ಯಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಗುವಿನ ವ್ಯಕ್ತಿತ್ವ ರೂಪಿಸಲು ಈ ಶಿಬಿರ ಕಾರ್ಯಮಾಡುತ್ತದೆ. ಪ್ರತಿಯೊಂದು ವಿಷಯಕ್ಕೆ ವಿಷಯ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜನೆ ಮಾಡಲಾಗಿದೆ. ಅವರು ಈ ಶಿಬಿರದಲ್ಲಿ ಭಾಗವಹಿಸಿ ಮಕ್ಕಳಿಗೆ ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪೆÇ್ರೀತ್ಸಾಹ, ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಮಕ್ಕಳು ಈ ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.

ಶಾಂತಿನಿಕೇತನ ಪ್ರಾಥಮಿಕಶಾಲೆಯ ವಿದ್ಯಾರ್ಥಿನಿ ಪಲ್ಲವಿ ಅಗಸರ ಶಿಬಿರ ಉದ್ಘಾಟಿಸಿದರು. ಮಲ್ಲು ಬಿರಾದಾರ, ಮೇಲ್ವಿಚಾರಕಿಯರಾದ ಭಾಗ್ಯಾ ಜಾದವ, ಸುನಂದಾ ಕಾಲತಿಪ್ಪಿ, ಲಕ್ಷ್ಮೀ ಬಡಿಗೇರ, ಒಕ್ಕೂಟದ ತಾಲೂಕಾ ಅಧ್ಯಕ್ಷೆ ಅನಸುಬಾಯಿ ಪರಗೊಂಡ, ರಾಘವೇಂದ್ರ ನಾಯಕ, ಶಾಂತಲಾ ಕೊರಳ್ಳಿ, ಚಿದಾನಂದ ತೊರವಿ, ಆಯ್.ಎ.ಹಂಚಲಿ, ಅಭಿಷೇಕ ಚೌದ್ರಿ, ಬಸವರಾಜ ಬಿರಾದಾರ ಹಾಗೂ ಶಿಭಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

loading...