ಮತದಾನಕ್ಕೆ ವಿಕಲಚೇತನರಿಗೆ ವೀಲ್‌ಚೇರ್‌ ವ್ಯವಸ್ಥೆ

0
7
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ವಿಕಲಚೇತನರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲಾ ಪಂಚಾಯತ ವತಿಯಿಂದ ವೀಲ್‌ಚೇರ್‌ ಹಾಗೂ ಸಮೀಪದೃಷ್ಟಿ ಕನ್ನಡಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೀಲ್‌ಚೇರ್‌ ಹಾಗೂ ಸಮೀಪದೃಷ್ಟಿ ಕನ್ನಡಿಗಳನ್ನು ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳಿಗೆ ವಿತರಿಸಲಾಯಿತು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವಿಕಲಚೇತನರು ಇರುವ ವಾರ್ಡ್‌ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಮತಗಟ್ಟೆಗಳಲ್ಲಿ ಮಾತ್ರ ವೀಲ್‌ಚೇರ್‌ ಬಳಕೆಯಾಗಲು ಜವಾಬ್ದಾರಿಯುತ ವ್ಯಕ್ತಿಗೆ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಾಗಿ ನೀಡಬೇಕೆಂದು ಸೂಚಿಸಿದ್ದಾರೆ. ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ತಾಲೂಕ ಯೋಜನಾಧಿಕಾರಿ ಶರಣಯ್ಯ ಸಸಿಮಠ ಸೇರಿದಂತೆ ತಾಲೂಕಿನ 38 ಗ್ರಾ.ಪಂ. ಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಹಕರು ಮತ್ತು ತಾ.ಪಂ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರು ಸಹ ಸಾಮಾನ್ಯರಂತೆ ತಮ್ಮ ಹಕ್ಕು ಭಾಧ್ಯತೆಗಳನ್ನು ನಿರ್ಭಯವಾಗಿ ಚಲಾಯಿಸಬೇಕು, ಈ ದೃಷ್ಟಿಯಿಂದ ವಿಕಲಚೇತನರಿಗೆ ಸಹಕಾರಿಯಾಗಲು ಜಿಲ್ಲಾ ಪಂಚಾಯತ್‌ನಿಂದ ವಿಲ್‌ಚೇರ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
– ವೆಂಕಟರಾಜಾ, ಜಿಪಂ ಸಿಇಓ

loading...